ರಾಷ್ಟ್ರ ರಾಜಕಾರಣಕ್ಕೆ ಕೇಜ್ರಿ?

Contributed byBeeralinge gowda|Vijaya Karnataka

Arvind Kejriwal is set to re-enter national politics following his acquittal in the excise scam. He plans a major rally to expose alleged BJP conspiracies and highlight his government's achievements. Meanwhile, K. Kavitha, daughter of Telangana's former CM, also sees her political prospects boosted by her court victory. Both leaders are gearing up for future political battles.

kejriwal for national politics on the threshold of the abkari scam scandal delhis kejrival moves to elevate national political path

ಹೊಸದಿಲ್ಲಿ: ಅಬಕಾರಿ ಹಗರಣದ ಕಳಂಕದಿಂದ ಮುಕ್ತವಾಗುತ್ತಿದ್ದಂತೆ ದಿಲ್ಲಿಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರ ರಾಜಕೀಯದ ಮೇಲೆ ಕಣ್ಣಿಟ್ಟಿದ್ದಾರೆ.

ಬಿಜೆಪಿ ವಿರುದ್ಧ ರಾಜಕೀಯ ಷಡ್ಯಂತ್ರದ ಅಸ್ತ್ರ ಪ್ರಯೋಗಿಸುವ ಮೂಲಕ ರಾಜಕೀಯವಾಗಿ ಪುನರ್ ಜನ್ಮ ಪಡೆಯಲು ಮುಂದಾಗಿದ್ದಾರೆ.

ಅಬಕಾರಿ ಹಗರಣದಿಂದ ಕೇಜ್ರಿವಾಲ್ ಸೇರಿದಂತೆ ಆಪ್ ನಾಯಕರನ್ನು ದಿಲ್ಲಿಕೋರ್ಟ್ ಖುಲಾಸೆಗೊಳಿಸಿದ ಬೆನ್ನಿಗೆ ಬೃಹತ್ ಸಾರ್ವಜನಿಕ ರಾರ ಯಲಿ ಮೂಲಕ ರಾಜಕೀಯ ಅಜ್ಞಾತವಾಸ ಕೊನೆಗೊಳಿಸಿ, ರಾಷ್ಟ್ರೀಯ ಮಟ್ಟದಲ್ಲಿರಾಜಕಾರಣ ಪ್ರವೇಶಿಸಲು ಯೋಜನೆ ರೂಪಿಸಿದ್ದಾರೆ.

ಮಾರ್ಚ್ 1 ರಂದು ಜಂತರ್ ಮಂತರ್ ನಲ್ಲಿಆಪ್ ಆಯೋಜಿಸಿರುವ ಮೆಗಾ ರಾರ ಯಲಿಯಲ್ಲಿಪಾಲ್ಗೊಳ್ಳಲಿರುವ ಕೇಜ್ರಿವಾಲ್ , ಬಿಜೆಪಿಯ ರಾಜಕೀಯ ಷಡ್ಯಂತ್ರದ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ. ಇದಲ್ಲದೇ ಆಪ್ ಸರಕಾರದ ಅವಧಿಯಲ್ಲಿನೇಮಕಗೊಂಡಿದ್ದ ಮೊಹಲ್ಲಾಕ್ಲಿನಿಕ್ ಗಳು, ಬಸ್ ಗಳಲ್ಲಿನೇಮಕಗೊಂಡಿದ್ದ ಮಾರ್ಷಲ್ ಗಳನ್ನು ತೆಗೆದು ಹಾಕಿರುವ ವಿಷಯ ಪ್ರಸ್ತಾಪಿಸಲು ಮುಂದಾಗಿದ್ದಾರೆ. ‘‘ದಿಲ್ಲಿಜನರ ಪರ ಹೋರಾಟಕ್ಕೆ ನಾನಿರುವೆ,’’ ಎಂಬ ಸಂದೇಶ ನೀಡಲು ಸಜ್ಜಾಗಿದ್ದಾರೆ.

ಅಗ್ನಿ ಪರೀಕ್ಷೆ ಜಯಿಸಿದ ಛಲ

ಅಬಕಾರಿ ಹಗರಣದ ಕುರಿತ ತೀರ್ಪು ಕೇಜ್ರಿವಾಲ್ ಮಾತ್ರವಲ್ಲಪಕ್ಷದ ಕಾರ್ಯಕರ್ತರಿಗೂ ಸಂಜೀವಿನಿಯಾಗಿದೆ. ನಮ್ಮ ನಾಯಕ ಪ್ರಮಾಣಿಕ, ನಿಷ್ಠಾವಂತ ಎಂಬ ಸಂದೇಶ ರವಾನಿಸಿದೆ. ಜನರ ಕಣ್ಣಲ್ಲೂಕೇಜ್ರಿವಾಲ್ ಪ್ರಮಾಣಿಕರು ಎಂಬ ಸಂದೇಶ ನೀಡಲು ಕೋರ್ಟ್ ತೀರ್ಪು ನೆರವಿಗೆ ಬಂದಿದೆ. ಬಿಜೆಪಿ ಪಿಯೂರಿಯನ್ನು ಬಯಲಿಗೆಳೆಯುವ ಮೂಲಕ ಹೊಸ ರಾಜಕೀಯ ಇನ್ಸಿಂಗ್ಸ್ ಆರಂಭಿಸಲು ಕೇಜ್ರಿವಾಲ್ ಚಿಂತನೆ ನಡೆಸಿದ್ದಾರೆ.

===========

ಕವಿತಾಗೆ ರಾಜಕೀಯ ಶಕ್ತಿ

ಅಬಕಾರಿ ಹಗರಣದಿಂದ ಖುಲಾಸೆಗೊಂಡಿರುವ ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಪುತ್ರಿ ಕೆ.ಕವಿತಾಗೂ ತೀರ್ಪು ರಾಜಕೀಯವಾಗಿ ಹೊಸ ಶಕ್ತಿ ನೀಡಿದೆ.

ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿರುವ ಸಮಯದಲ್ಲಿಕೋರ್ಟ್ ನೀಡಿದ ತೀರ್ಪು ಕವಿತಾಗೆ ಹೊಸ ಶಕ್ತಿ ತುಂಬಲಿದೆ ಎಂದು ವಿಶ್ಲೇಷಿಸಲಾಗಿದೆ.

ಬಿಆರ್ ಎಸ್ ನಿಂದ ಹೊರ ಬಿದ್ದ ಬಳಿಕ ತೆಲಂಗಾಣ ಜಾಗೃತಿ ಸಮಿತಿ ಮೂಲಕ ಹೋರಾಟ ಆರಂಭಿಸಿದ್ದ ಕವಿತಾ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾಗಿದ್ದರು.

ಅಬಕಾರಿ ಹಗರಣದಲ್ಲಿ100 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪದ ಮೇಲೆ 5 ತಿಂಗಳು ಜೈಲು ಸೇರಿದ್ದ ಕವಿತಾ ಅವರು, ತೀರ್ಪು ಬಳಿಕ ‘ಸತ್ಯ ಮೇವ ಜಯತೆ’ ಎಂದು ಹೇಳಿದ್ದು, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರದ ವಿರುದ್ಧ ಹೋರಾಟ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.