ವಿಕ ಸುದ್ದಿಲೋಕ ಬೆಂಗಳೂರು ಸುದೀರ್ಘ 50 ವರ್ಷಗಳ ಸಕ್ರಿಯ ರಾಜಕಾರಣ ಪೂರ್ಣಗೊಳಿಸಿರುವ ರೈತಪರ ಹೋರಾಟಗಾರ ಮಾಜಿ ಸಿಎಂ ಬಿ.ಎಸ್ . ಯಡಿಯೂರಪ್ಪ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಲು ಮೇ ತಿಂಗಳಲ್ಲಿಸಧಿಮಾಧಿರಂಭ ಆಯೋಜಿಸಲು ಸಿದ್ಧತೆ ಶುರುವಾಗಿದೆ. ಚಿತ್ರದುರ್ಗದಲ್ಲಿ ಸಧಿಮಾಧಿವೇಶ ನಧಿಡೆಧಿಯಧಿಲಿದ್ದು, ಸುಮಾರು 200 ಎಕರೆಯಲ್ಲಿಬೃಹತ್ ವೇದಿಕೆ ನಿರ್ಮಿಸಲು ಆಪ್ತ ಬಳಗ ಚಿಂತಿಸಿದೆ. ಎಲ್ಲಜಿಧಿಲ್ಲೆಧಿಗಧಿಳಿಂದ 10 ಲಕ್ಷಕ್ಕೂ ಹೆಚ್ಚು ಮಂದಿ
ಸೇಧಿರಿಧಿಸುವ ನಿರೀಕ್ಷೆ ಇದೆ. ನಾಡಿನ ಎಲ್ಲಪ್ರಮುಖ ಮಠಾಧಿಪತಿಗಳ ಸಮ್ಮುಖದಲ್ಲಿ ಸನ್ಮಾನಿಸುವ ಸಮಾರಂಭದ ಸಿದ್ಧತೆಧಿಗೆ ಚಾಲನೆ ದೊರಕಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲು ಸ್ವಾಗತ ಸಮಿತಿ ಚಿಂತಿಸಿದೆ. ಜತೆಗೆ ಯಡಿಯೂರಪ್ಪನವರು ಜಾರಿಗೊಳಿಸಿದ ಯೋಜನೆಗಳ ಫಲಾನುಭವಿಗಳನ್ನು ಸಧಿಭೆಗೆ ಆಹ್ವಾನಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಬಿಧಿಎಧಿಸ್ ವೈ ಪಕ್ಷ ಸಂಘಧಿಟನೆ, ರೈತರು, ಬಡವರು, ಕಾರ್ಮಿಕರು, ಶೋಷಿತರು ಸೇರಿದಂತೆ ನಾನಾ ವರ್ಗ, ಸಮುದಾಯಗಳ ಪರವಾಗಿ ದನಿ ಎತ್ತಿ ನಡೆಸಿದ ಹೋರಾಟಗಳು. ವಿಧಾನಮಂಡಲದಲ್ಲಿನ ಪ್ರಧಿಮುಖ ವಿಧಿಚಾರ
ಪ್ರಧಿಸ್ತಾಧಿಪ... ಹೀಗೆ ಅವರ ಹೋರಾಟ, ಜನಪರ ಯೋಜನೆಗಳು, ಕಾರ್ಯಕ್ರಮಗಳ ಕೊಡುಗೆಯ ಸಾಕ್ಷ್ಯಚಿತ್ರ ರೂಪಿಸಲು ತಂಡವೊಂದನ್ನು ರಚಿಸಲಾಗಿದೆ. ಹಾಗೆಯೇ ಸಮಾರಂಭ ಆಯೋಜನೆಗೆ ಸಮಿತಿಗಳು ರಚನೆಯಾಗಿವೆ. ಈ ಬಗ್ಗೆ ಮಾಹಿತಿ ನೀಡಿರುವ ಗೋವಿಂದ ಕಾರಜೋಳ, ‘‘ಯಡಿಯೂರಪ್ಪ ಅವರಿಗೆ ಗಣ್ಯರು, ಪ್ರಮುಖರೆಲ್ಲಾಸೇರಿ ಚಿತ್ರದುರ್ಗದಲ್ಲಿಅಭಿನಂದನೆ ಸಲ್ಲಿಸಧಿಲಿಧಿದ್ದಾಧಿರೆ,’’ ಎಂದರು. ‘‘ರೈತರ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಯಡಿಯೂರಪ್ಪನವರು ಹೆಣ್ಣು ಮಕ್ಕಳ ವ್ಯಾಸಂಗಕ್ಕೂ ಪ್ರೋತ್ಸಾಹ ನೀಡಿದವರು. ಹೆಣ್ಣು ಮಕ್ಕಳಿಗಾಗಿ ವಸತಿ ಶಾಲೆಗಳ ನಿರ್ಮಾಣ ಮಾಡಿದ ಯಡಿಯೂರಪ್ಪನವರು, ಹೆಣ್ಣು ಮಕ್ಕಳು ಕುಟುಂಬಕ್ಕೆ ಭಾರವಾಗಬಾರದು ಎಂಬ ಕಾರಣಕ್ಕೆ ಭಾಗ್ಯಲಕ್ಷ್ಮೇ ಬಾಂಡ್ ಗಳನ್ನು ನೀಡಿದವರು. ಹಾಲಿನ ಪ್ರೋತ್ಸಾಹ ಧನ ಸೇರಿದಂತೆ ರೈತರಿಗೆ ನಾನಾ ಯೋಜನೆಗಳನ್ನು ಜಾರಿಗೊಳಿಸಿದವರು,’’ ಎಂದು ನೆನಪಿಸಿದರು. ‘‘ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಗೊಳಿಸಿದ ಬಳಿಕ ಮಾಹಿತಿ ನೀಡಲಾಗುವುದು. ನಾಡಿನ ಎಲ್ಲಜಿಲ್ಲೆಗಳಿಂದ ಸಾರ್ವಜನಿಕರು, ಅಭಿಮಾನಿಗಳು, ಬೆಂಬಲಿಗರು ಪಾಲ್ಗೊಳ್ಳಲು ಅನುಕೂಲವಾಗುವಂತೆ ಚಿತ್ರದುರ್ಗದಲ್ಲಿಸಮಾರಂಭ ನಡೆಸಲಾಗುತ್ತಿದೆ,’’ ಎಂದು ಹೇಳಿದರು.

