ಪಾಕ್ -ಆಫ್ಘನ್ ಸಂಘರ್ಷಕ್ಕೆ ಯೋಧರು ಸೇರಿ 350 ಸಾವು

Contributed byBeeralinge gowda|Vijaya Karnataka

The conflict between Pakistan and Afghanistan escalates. Over 350 people have died in the ongoing clashes. Pakistan claims to have eliminated 275 militants and lost 12 soldiers. Afghanistan's Taliban government announced shooting down a Pakistani fighter jet and capturing its pilot. They also stated 53 Pakistani soldiers died in retaliation.

pak afghan clash 350 killed pakistan fighter jet shot down near jalalabad pilot captured

ಕಾಬೂಲ್ : ಪಾಕಿಸ್ತಾನ-ಅಫಘಾನಿಸ್ತಾನ ನಡುವಿನ ಸಂಘರ್ಷ ಮುಂದುವರಿದಿದೆ. ಉಭಯ ದೇಶಗಳ ಸೇನಾ ಕಲಹದಲ್ಲಿಉಗ್ರರು, ಸೈನಿಕರು, ನಾಗರಿಕರು ಸೇರಿ 350 ಮಂದಿ ಸಾವಿಗೀಡಾಗಿದ್ದಾರೆ. ತಾಲಿಬಾನ್ ಉಗ್ರರ ವಿರುದ್ಧದ ಕಾರ್ಯಾಧಿಧಿಚರಣೆ ಮುಂದುವರಿಸಿರುವ ಪಾಕಿಧಿಸ್ತಾನದ ದಾಳಿ ಯಲ್ಲಿಇದುವರೆಗೂ 275 ಉಗ್ರರು ಹತಧಿರಾಗಿದ್ದು, 12 ಯೋಧರು ಸಾವಿಗೀಧಿಡಾಗಿದ್ದಾರೆ ಎಂದು ಪಾಕ್ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ನಡುವೆ ಪಾಕಿಸ್ತಾನದ ಫೈಟರ್ ಜೆಟ್ ವಿಮಾನವನ್ನು ಹೊಡೆದುರುಳಿಸಲಾಗಿದೆ. ಪೈಲಟ್ ನನ್ನು ಬಂಧಿಸಲಾಗಿದೆ ಎಂದು ಅಫಘಾನಿಸ್ತಾನದ ತಾಲಿಬಾನ್ ಸರಕಾರ ಘೋಷಣೆ ಮಾಡಿದೆ. ‘‘ಜಲಲಾಬಾದ್ ಬಳಿ ಸಂಚರಿಸುತ್ತಿದ್ದ ಪಾಕಿಸ್ತಾನ ವಾಯುಪಡೆಯ ಜೆಟ್ ವಿಮಾನವನ್ನು ಹೊಡೆದು ಉರುಳಿಸಿದ್ದೇವೆ. ಪೈಲಟ್ ನನ್ನು ಜೀವಂತವಾಗಿ ಸೆರೆ ಹಿಡಿದಿದ್ದೇವೆ,’’ ಎಂದು ಆಫ್ಘನ್ ಸರಕಾರದ ವಕ್ತಾರರು ಹೇಳಿದ್ದಾರೆ. ಪಾಕಿಸ್ತಾನ ಸೇನೆಯ ವಿರುದ್ಧ ಪ್ರತಿ ದಾಳಿಯಲ್ಲಿ53 ಪಾಕ್ ಯೋಧರು ಸಾವಿಗೀಡಾಗಿದ್ದಾರೆ. 13 ತಾಲಿಬಾನ್ ಹೋರಾಟಗಾರರು ಮೃತಪಟ್ಟಿದ್ದಾರೆ ಎಂದು ಆಫ್ಘನ್ ಸರಕಾರ ಹೇಳಿಕೊಂಡಿದೆ.