ವಿಕ ಸುದ್ದಿಲೋಕ ಶಿವಮೊಗ್ಗ ಮನೆ ಖರೀದಿ ವಿಚಾರವಾಗಿ ಇದ್ದ ಅಸಮಾಧಾನವನ್ನು ಕಾರಿನ ಗಾಜು ಒಡೆಯುವ ಮೂಲಕ ವ್ಯಕ್ತಪಡಿಸಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಶರಾವತಿ ನಗರದ ಹಂದಿಜೋಗಿ ಬೀದಿಯ ಸುರೇಶ್ ಎಂಬುವವರಿಗೆ ಸೇರಿದ್ದ ಕಾರನ್ನು ಮನೆಯ ಮುಂದೆ ನಿಲ್ಲಿಸಿದ್ದು, ಮಂಗಳವಾರ ತಡರಾತ್ರಿ ಕುಡಿದ ಅಮಲಿನಲ್ಲಿರಾಡಿನಿಂದ ಒಡೆದಿದ್ದು, ವಿನೋಬನಗರದ ಕೆ. ಶರತ್ , ಮೇದಾರ ಕೇರಿಯ ಎ.ಪ್ರಶಾಂತ್ , ಶರಾವತಿ ನಗರದ ಡಿ.ಸತೀಶ್ ಎಂಬುವವರನ್ನು ಬಂಧಿಸಲಾಗಿದೆ. ಮನೆ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಸುರೇಶ್ ಮತ್ತು ಸತೀಶ್ ಮಧ್ಯೆ ಗಲಾಟೆಯಾಗಿತ್ತು. ಈ ಪ್ರಕರಣ ಪೊಲೀಸ್ ಮೆಟ್ಟಿಲು ಸಹ ಏರಿತ್ತು. ಈ ವಿಚಾರವಾಗಿ ಕಾರಿನ ಗಾಜುಗಳನ್ನು ಒಡೆದು ಅಂದಾಜು 2ರಿಂದ 2.50 ಲಕ್ಷ ರೂ. ನಷ್ಟ ಮಾಡಲಾಗಿತ್ತು. ದೊಡ್ಡಪೇಟೆ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು. ಫುಡ್ ಕೋರ್ಟ್ ನಲ್ಲಿಗಲಾಟೆ ಶಿವಮೊಗ್ಗ: ನಗರದ ಟಿ.ಸೀನಪ್ಪಶೆಟ್ಟಿ ವೃತ್ತದ ಲ್ಲಿರುವ ನಾನ್ ವೆಜ್ ಫುಡ್ ಕೋರ್ಟ್ ನಲ್ಲಿಬುಧವಾರ ತಡರಾತ್ರಿ ಮಳಿಗೆಯವರೊಂದಿಗೆ ಗಲಾಟೆ ಮಾಡಿಕೊಂಡು ಆಹಾರವನ್ನು ಬಿಸಾಡಿದ ಘಟನೆ ನಡೆದಿದೆ. ಪ್ರಕರಣ ಸಂಬಂಧ ರೌಡಿಶೀಟರ್ ಸೂರಜ್ ಸೇರಿದಂತೆ ಮೂವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

