ವಿಕ ಸುದ್ದಿಲೋಕ ಶಿವಮೊಗ್ಗ ದಾವಣಗೆರೆ ಜಿಲ್ಲೆಸೂರಗೊಂಡನ ಕೊಪ್ಪದಲ್ಲಿಫೆ.14ರಂದು ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯ ಕ್ರಮದಲ್ಲಿಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕಪ್ಪುಬಟ್ಟೆ ಪ್ರದರ್ಶಿಸಿದವರ ಮೇಲೆ ದಾಖಲಿಸಿರುವ ಪ್ರಕರಣ ರದ್ದು ಮಾಡಬೇಕೆಂದು ಬಂಜಾರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ಅಶೋಕನಾಯ್ಕ ಆಗ್ರಹಿಸಿದರು. ಪತ್ರಿಕಾಭವನದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಸೂಕ್ತ ಒಳಮೀಸಲು ಜಾರಿಗೆ ಆಗ್ರಹಿಸಿ ಕಳೆದ ಒಂದೂವರೆ ವರ್ಷದಿಂದ ಹೋರಾ ಟ ನಡೆಯುತ್ತಿದೆ. ಕಾಂಗ್ರೆಸ್ ಸರಕಾರ ನಾಗಮೋಹನ್ ದಾಸ್ ವರದಿ ಜಾರಿಗೆ ಮುಂದಾಗಿತ್ತು. ನ್ಯಾಯಯುತವಾಗಿ ಒಳಮೀಸಲು ನೀಡಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿ, ಸೇವಾಲಾಲ್ ಮಾಲಾಧಾರಿ ಗಳು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕಪ್ಪುಬಟ್ಟೆ ಪ್ರದರ್ಶಿಸಿ, ಪ್ರತಿಭಟನೆ ನಡೆಸಿದ್ದರು. ಈ ಸಮಯದಲ್ಲಿಡಿಕೆಶಿ ನಮ್ಮ ಸಮಾಜವನ್ನು ಹಗುರವಾಗಿ, ವ್ಯಂಗ್ಯವಾಗಿ ನೋಡಿದರು. ಈ ಹಿನ್ನೆಲೆ ಪ್ರತಿಭಟನೆ ನಡೆಸಿದ ಮಾಲಾಧಾರಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದರು. ಒಳಮೀಸಲಿನಲ್ಲಿನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಖಂಡಿಸಲು, ಪ್ರತಿಭಟನೆ ನಡೆಸಲು ಅವಕಾಶ, ಹಕ್ಕು ಇಲ್ಲವಾಗಿದೆ. ಪ್ರಕರಣ ದಾಖಲಾಗಿರುವ ಮಾಲಾಧಾರಿಗಳಲ್ಲಿಐಎಎಸ್ ಮುಖ್ಯ ಪರೀಕ್ಷೆ ಉತ್ತೀರ್ಣರಾಗಿರುವ ಅಭ್ಯರ್ಥಿ ಯೂ ಇದ್ದಾನೆ. ಬಂಜಾರ ಯುವಕರ ಮೇಲೆ ದಾಖಲಿಸಿರುವ ಎಲ್ಲಪ್ರಕರಣ ಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿಕಾನೂನು ಹೋರಾಟ ಮಾಡಿ ಗೆಲ್ಲುವ ಶಕ್ತಿಯೂ ನಮಗಿದೆ ಎಂದು ತಿಳಿಸಿದರು. ಸಮಾಜದ ಮುಖಂಡ ಆರ್ .ಸಿ.ನಾಯ್ಕ ಮಾತನಾಡಿ, ಜಿಲ್ಲಾಬಂಜಾರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕನಾಯ್ಕ ಅವರೆ ಮುಂದುವರಿಯಲಿದ್ದಾರೆ. ಸಂಘದಿಂದ ಉಚ್ಚಾಟಿತನಾದ ವ್ಯಕ್ತಿಯೊಬ್ಬ 16 ಕೋಟಿ ರೂ. ಅಕ್ರಮ ನಡೆದಿದೆ ಎಂದು ಅಧ್ಯಕ್ಷರ ಮೇಲೆ ಮಾಡಿರುವ ಆರೋಪ ಸುಳ್ಳು. ಭವನ ನಿರ್ಮಾಣಕ್ಕೆ 11 ಕೋಟಿ ರೂ. ವೆಚ್ಚವಾಗಿದೆ. ಸಮಾಜದವರಿಗೆ ಶೇ.50 ರಿಯಾಯಿತಿಯಲ್ಲಿಭವನ ಬಾಡಿಗೆಗೆ ನೀಡಲಾಗುತ್ತಿದೆ. ಅಶೋಕ್ ನಾಯ್ಕ ಅವರ ಜನಪ್ರಿಯತೆ ಸಹಿಸಲು ಆಗದೆ ತೇಜೋವಧೆ ಮಾಡಲಾಗುತ್ತಿದೆ ಎಂದರು. ಭೋಜ್ಯಾನಾಯ್ಮ, ಶೇಖರ್ ನಾಯ್ಕ, ಆನಂದ್ , ಜಯಾನಾಯ್ಕ, ಶಿವಾನಾಯ್ಕ ಮತ್ತಿತರರಿದ್ದರು.

