ಸಣ್ಣಪುಟ್ಟ ಸುದ್ದಿಗಳು

Contributed bylakshmikanthakumar.boraiah@timesgroup.com|Vijaya Karnataka

ಶಿವಮೊಗ್ಗ ರಂಗಾಯಣವು ಮಕ್ಕಳ ಬೇಸಿಗೆ ಶಿಬಿರಕ್ಕಾಗಿ ನಾಟಕ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರನ್ನು ಆಯ್ಕೆ ಮಾಡುತ್ತಿದೆ. ರಂಗಭೂಮಿ ಅನುಭವವುಳ್ಳ 23ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 22 ದಿನಗಳ ಶಿಬಿರದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 16ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ರಂಗಾಯಣ ಕಚೇರಿಯನ್ನು ಸಂಪರ್ಕಿಸಬಹುದು.

invitation for application for selection of 6 theatre directors for children in shivamogga

ನಾಟಕ ನಿರ್ದೇಶಕರ ಆಯ್ಕೆಗೆ ಅರ್ಜಿ ಶಿವಮೊಗ್ಗ : ಶಿವಮೊಗ್ಗ ರಂಗಾಯಣವು ಏ.14ರಿಂದ ಮೇ 3ರವರೆಗೆ ಆಯೋಜಿಸುತ್ತಿರುವ ಚಿಣ್ಣರ ಸಿಹಿಮೊಗ್ಗೆ-ಮಕ್ಕಳ ಬೇಸಿಗೆ ಶಿಬಿರದಲ್ಲಿಮಕ್ಕಳಿಗೆ ರಂಗ ತರಬೇತಿ, ನಾಟಕ ನಿರ್ದೇಶನ ಮಾಡಲು ರಂಗಭೂಮಿಯ ಹಿನ್ನೆಲೆಯುಳ್ಳ 6 ನಾಟಕ ನಿರ್ದೇಶಕರು ಮತ್ತು 6 ಸಹಾಯಕ ನಿರ್ದೇಶಕರ ಆಯ್ಕೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಕ್ಕಳೊಂದಿಗೆ ರಂಗಭೂಮಿ ಕೆಲಸದಲ್ಲಿತೊಡಗಿಸಿಕೊಂಡಿರುವ ಅನುಭವ ಹೊಂದಿರಬೇಕು. ನಾಟಕದಲ್ಲಿಅಭಿನಯಿಸಿರುವ ಮತ್ತು ನಾಟಕ ನಿರ್ಮಾಣದಲ್ಲಿಪರಿಣತಿ ಹೊಂದಿದ್ದು 23ರಿಂದ 40 ವರ್ಷದೊಳಗಿರಬೇಕು. 22 ದಿನಗಳ ಶಿಬಿರದಲ್ಲಿಕಡ್ಡಾಯವಾಗಿ ಉಪಸ್ಥಿತರಿರಬೇಕು. ಆಸಕ್ತರು ಬಿಳಿ ಹಾಳೆಯಲ್ಲಿವೈಯಕ್ತಿಕ ವಿವರ, ರಂಗಭೂಮಿಯ ಅನುಭವ, ವಿದ್ಯಾರ್ಹತೆ, ಭಾವಚಿತ್ರ, ಮೊಬೈಲ್ ನಂಬರ್ ಒಳಗೊಂಡ ಅರ್ಜಿಯನ್ನು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಮಾ.16ರೊಳಗೆ ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಹೆಲಿಪ್ಯಾಡ್ ಹಿಂಭಾಗ, ಅಶೋಕನಗರ, ಶಿವಮೊಗ್ಗ-577201 ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ ಇಮೇಲ್ adಞ್ಞ.್ಟa್ಞಜaya್ಞashಜಿvaಞಟಜಜaಃಜಞaಜ್ಝಿ.್ಚಟಞ ಮೂಲಕ ಕಳುಹಿಸಬಹುದು. ಮಾಹಿತಿಗೆ ರಂಗಾಯಣ ಕಚೇರಿ ಅಥವಾ ದೂ.08182-256353, ಮೊ.7975229166 ಸಂಪರ್ಕಿಸ ಬಹುದು ಎಂದು ರಂಗಾಯಣದ ಆಡಳಿತಾಧಿಕಾರಿ ಡಾ. ಎ.ಸಿ.ಶೈಲಜಾ ಪ್ರಕಟಣೆಯಲ್ಲಿತಿಳಿಸಿದ್ದಾರೆ.