ನಿತ್ಯದರ್ಶಿ 5 ಮಾರ್ಚ್ 2026
ಶ್ರೀಪತಿಭಟ್ ಬೆಂಗಳೂರು
====
ಮೇಷ: ಉದ್ವೇಗ ಮತ್ತು ಕೆಲವು ವೈಮನಸ್ಸುಗಳು ತಂದೆಯ ತಿಳಿವಳಿಕೆ ನುಡಿಯಿಂದ ದೂರವಾಗುವುದು. ಆರಿಸಿಕೊಂಡ ಮಾರ್ಗದಲ್ಲಿಸರಿಯಾದ ರೀತಿ ಯೋಚಿಸಿ ಏಕಾಗ್ರತೆಯಿಂದ ಮುನ್ನಡೆಯಿರಿ.
(ಶುಭಸಂಖ್ಯೆ: 3)
--------
ವೃಷಭ : ಆರೋಗ್ಯದಲ್ಲಿಏರುಪೇರಾದರೂ ಆತಂಕಕ್ಕೆ ಕಾರಣವಾಗಬೇಕಿಲ್ಲ. ಆಫೀಸಿನ ಕೆಲಸ-ಕಾರ್ಯಗಳನ್ನು ಬೇಗ ಮುಗಿಸಿ. ತಪಾಸಣಾ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಕೆಲಸವನ್ನು ಪರೀಕ್ಷಿಸಬಹುದು.
(ಶುಭ ಸಂಖ್ಯೆ : 6)
-----
ಮಿಥುನ : ಆಟಿಕೆಗಳ ಮಾರಾಟಗಾರರಿಗೆ ಮತ್ತು ಉಡುಗೊರೆ ವಸ್ತುಗಳ ಮಾರಾಟಗಾರರಿಗೆ ಉತ್ತಮ ಮಾರಾಟ ಮತ್ತು ಲಾಭವಿರುವುದು. ಉನ್ನತ ಶಿಕ್ಷಣದವರಿಗೆ ಕೀರ್ತಿ ಮತ್ತು ಸಾಮಾಜಿಕ ಗೌರವ ಪ್ರಾಪ್ತಿಯಾಗಲಿದೆ.
(ಶುಭ ಸಂಖ್ಯೆ : 4)
-----
ಕಟಕ : ನಿಯೋಜಿತ ಕೆಲಸಗಳನ್ನು ಉತ್ಸಾಹದಿಂದ ಮಾಡಿ ಮುಗಿಸುವಿರಿ. ಇನ್ನೊಂದು ಹೊಸ ಕೆಲಸ ನಿಮಗಾಗಿ ಕಾದಿರಲಿದೆ. ಮೇಧಾಕರ ಶ್ರೀದಕ್ಷಿಣಮೂರ್ತಿಯ ಆರಾಧನೆ ಸುಲಭವಾಗಿ ಯಶಸ್ಸಿನ ದಾರಿ ತೋರಿಸಲಿದೆ.
(ಶುಭ ಸಂಖ್ಯೆ : 1)
---
ಸಿಂಹ: ಭೂ ಖರೀದಿಯಂಥ ಅಥವಾ ಗೃಹ ನಿರ್ಮಾಣ ಕಾರ್ಯದಂಥ ಕನಸಿನ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಸಹಚರರಿಂದ ಅಥವಾ ಅಧಿಕಾರಿಗಳಿಂದ ಅಸಹಕಾರ ಪರಿಸ್ಥಿತಿ ಎದುರಾಗಬಹುದು.
(ಶುಭ ಸಂಖ್ಯೆ : 9)
-----
ಕನ್ಯಾ : ವಿಚಾರದ ಬಗ್ಗೆ ಸಂಪೂರ್ಣ ತಿಳಿದುಕೊಳ್ಳದೇ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಬೇಡಿ. ಯಂತ್ರೋಪಕರಣಗಳ ಸಹಾಯದಿಂದ ಕೆಲಸ ಮಾಡುವ ವೇಳೆಯಲ್ಲಿಅಪಾಯ ಸಂಭವಿಸಬಹುದು.
(ಶುಭ ಸಂಖ್ಯೆ: 7)
-------
ತುಲಾ : ಆತ್ಮೀಯರು ಹೇಳಿದ ಸಲಹೆ-ಸೂಚನೆಗಳನ್ನು ಪಾಲಿಸಲಾಗದೇ, ಬಿಡಲೂ ಆಗದೇ ಚಡಪಡಿಸುವ ಪರಿಸ್ಥಿತಿ ನಿಮ್ಮದಾಗುತ್ತದೆ. ನಿಮ್ಮ ಮೇಲುಸ್ತುವಾರಿಯಲ್ಲಿಕೆಲಸ-ಕಾರ್ಯಗಳು ಸುಗಮವಾಗಿ ಸಾಗಲಿವೆ.
(ಶುಭ ಸಂಖ್ಯೆ : 5)
--------
ವೃಶ್ಚಿಕ : ಸಾಹಸಪ್ರಿಯತೆ ಮನೋಭಾವವು ಆವರಿಸಲಿದ್ದು, ಚಾರಣ ಅಥವಾ ಸವಾಲಿನ ಕೆಲಸಗಳನ್ನು ಮಾಡುವಿರಿ. ಕುಟುಂಬದಲ್ಲಿಉತ್ತಮ ವಾತಾವರಣವಿದ್ದು, ಸಂತಸ ಮತ್ತು ಸಮಾಧಾನ ತರಲಿದೆ.
(ಶುಭ: 2)
---------
ಧನು : ವಿಲಾಸೀ ವಸ್ತುಗಳ ಖರೀದಿ ಮಾಡುವ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಾದ ಪರಿಸ್ಥಿತಿ ತೋರಲಿದೆ. ನಿಮ್ಮ ಸೇವಾ ಮನೋಭಾವಕ್ಕೆ ಕುಟುಂಬ ವರ್ಗದವರು ಉತ್ತಮ ರೀತಿಯಲ್ಲಿಸ್ಪಂದಿಸುತ್ತಾರೆ.
(ಶುಭ ಸಂಖ್ಯೆ : 8)
------
ಮಕರ : ಜೀವನದಲ್ಲಿಹಳೆಯ ಘಟನೆಗಳಿಂದ ಕಲಿತ ಪಾಠ ಉತ್ತಮ ತಿಳುವಳಿಕೆಗೆ ಕಾರಣವಾಗುವುದು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿಅನೇಕ ರೀತಿಯ ಅವಕಾಶಗಳು ಒದಗಿ ಬರುತ್ತವೆ.
(ಶುಭ ಸಂಖ್ಯೆ : 3)
-------
ಕುಂಭ : ಅಭಿಪ್ರಾಯಗಳು ಬೇರೆಯವರ ಆಲೋಚನೆಗೆ ಹೊಂದಿಕೊಳ್ಳುವುದು ಬಹಳ ಕಷ್ಟಕರ ಎನಿಸಲಿದೆ. ನಿಯೋಜಿತ ಕಾರ್ಯಕಲಾಪಕ್ಕೆ ಪುಟ್ಟ ಆತಂಕಗಳು ಎದುರಾಗಲಿವೆ.
(ಶುಭ ಸಂಖ್ಯೆ : 1)
-------
ಮೀನ : ಮಕ್ಕಳ ವಿಷಯದಲ್ಲಿಸಂಯಮದೊಂದಿಗೆ ವರ್ತಿಸುವುದು ಉತ್ತಮ. ಸಂತೋಷವಾಗಿ ದಿನ ಕಳೆಯುವ ಹಾಗೆ ಆಗುವುದು. ವ್ಯವಹಾರಗಳಲ್ಲಿಉತ್ತಮ ಆದಾಯ ಇರುವುದು.
(ಶುಭ ಸಂಖ್ಯೆ : 6)

