(ಚಿತ್ರಗಳಿವೆ) ಕಲಬುರಗಿ ಡಬ್ಲ್ಯು35 ಮಹಿಳಾ ಐಟಿಎಫ್ ಟೆನಿಸ್ ಟೂರ್ನಿ | ಎರಡನೇ ದಿನ ಭಾರತೀಯರಿಗೆ ಮಿಶ್ರ ಫಲ ಎರಡನೇ ಸುತ್ತಿಗೆ ಅಂಕಿತಾ ರೈನಾ , ಜೀಲ್ ದೇಸಾಯಿ ಬ್ರಹ್ಮಾನಂದ ಎ. ನಿಡಗುಂದಾ, ಕಲಬುರಗಿ ಚಿh್ಟahಞa್ಞa್ಞd.a್ಟa್ಝಜಿಃಠಿಜಿಞಛಿsಟ್ಛಜ್ಞಿdಜಿa.್ಚಟಞ ಇಲ್ಲಿನ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿನಡೆಯುತ್ತಿರುವ ಮಹಿಳಾ ಐಟಿಎಫ್ ಟೆನಿಸ್ ಟೂರ್ನಿಯ ಪ್ರಧಾನ ಸುತ್ತಿನ ಎರಡನೇ ದಿನದ ಪಂದ್ಯಗಳಲ್ಲಿಆತಿಥೇಯ ಭಾರತದ ಅಂಕಿತಾ ರೈನಾ ಮತ್ತು ಜೀಲ್ ದೇಸಾಯಿ ಗೆಲುವಿನೊಂದಿಗೆ ದ್ವಿತೀಯ ಸುತ್ತಿಗೆ ಲಗ್ಗೆ ಇಟ್ಟರು. ಉಳಿದ ಭಾರತೀಯ ಆಟಗಾರ್ತಿಯರು ಸೋಲು ಕಂಡು ನಿರಾಸೆ ಮೂಡಿಸಿದರು. ಟೂರ್ನಿಯ ಎಂಟನೇ ಶ್ರೇಯಾಂಕಿತ ಹಾಗೂ ಭಾರತದ ಮಾಜಿ ನಂ.1 ಅಂಕಿತಾ ರೈನಾ ಅವರು ಸೋನಲ್ ಪಾಟೀಲ್ ವಿರುದ್ಧ 6-1, 6-3 ಅಂತರದಲ್ಲಿಗೆಲವು ಸಾಧಿಸಿದರು. ಇಡೀ ಪಂದ್ಯದಲ್ಲಿಎಲ್ಲಿಯೂ ಕೂಡ ಎದುರಾಳಿಗೆ ಯಾವುದೇ ರೀತಿಯ ಪ್ರತಿರೋಧಕ್ಕೆ ಅವಕಾಶ ನೀಡಲಿಲ್ಲ. ಮೊದಲ ಸೆಟ್ ನಿರಾಯಾಸವಾಗಿ ಗೆದ್ದ ರೈನಾ, ಎರಡನೇ ಸೆಟ್ ನಲ್ಲಿಮೂರು ಅಂಕ ಬಿಟ್ಟುಕೊಟ್ಟರೂ ಗೆಲುವು ಸಾಧಿಸಿದರು. ಟೂರ್ನಿಯ ಐದನೇ ಶ್ರೇಯಾಂಕಿತ ಜೀಲ್ ದೇಸಾಯಿ ಅವರು ಜೆನ್ನಿಫರ್ ಲೂಯಿಖಾಮ್ ವಿರುದ್ಧ 6-2, 6-4 ಅಂತರದಲ್ಲಿಜಯಿಸಿದರು. ಕರ್ನಾಟಕದ ಸೋಹಾ ಸಾದಿಕ್ ಸಿಂಗಾಪುರದ ಈವಾ ಮೇರಿ ಡೆಸ್ವಿಸ್ಸ್ ವಿರುದ್ಧ ಪಂದ್ಯದ ಆರಂಭದಲ್ಲಿ4-0 ಮುನ್ನಡೆ ಪಡೆಯುವ ಮೂಲಕ ಗೆಲುವಿಗೆ ಹತ್ತಿರವಾಗಿದ್ದರು. ಆದರೆ, ಈ ವೇಳೆ ತಿರುಗಿ ಬಿದ್ದ ಮೇರಿ ಡೆಸ್ವಿಸ್ಸ್ ಸತತ ಪ್ರತಿರೋಧ ಮೀರಿ ಪಾಯಿಂಟ್ಸ್ ಗಳ ಮೇಲೆ ಪಾಯಿಂಟ್ ಗೆದ್ದು 7-5, 6-0 ಅಂತರದಲ್ಲಿಗೆಲುವು ಕಂಡರು. ಮೇರಿ ಡೆಸ್ವಿಸ್ಸ್ ಸೊನ್ನೆಯಿಂದ ಮೊದಲ ಅಂಕ ಪಡೆದ ನಂತರ ಇಡೀ ಪಂದ್ಯ ಮುಗಿಯುವವರೆಗೆ ಎದುರಾಳಿಗೆ ಕೇವಲ ಒಂದು ಅಂಕ ಮಾತ್ರ ಬಿಟ್ಟುಕೊಟ್ಟರು. ಇದು ಅವರ ಆಕ್ರಮಣಕಾರಿ ಆಟಕ್ಕೆ ಸಾಕ್ಷಿಯಾಯಿತು. ಶ್ರೀವಲ್ಲಿಭಾಮಿಡಿಪಾಟಿ ವೈದ್ಯಕೀಯ ಕಾರಣದಿಂದ ಪಂದ್ಯದಿಂದ ನಿವೃತ್ತಯಾದರೆ, ಐಶ್ವರ್ಯ ಜಾಧವ್ , ಅಕಾಂಕ್ಷಾ ನಿಟ್ಟೂರೆ, ಸಂದೀಪ್ತಿ ಸಿಂಗ್ ರಾವ್ ಹಾಗೂ ಕಶಿಷ್ ಭಾಟಿಯಾ ಸೋಲುಂಡು ಕೈ ಚೆಲ್ಲಿದರು. ಬಾಕ್ಸ್ .. ಡಬಲ್ಸ್ ನಲ್ಲಿಆತಿಥೇಯರ ಮುನ್ನಡೆ ಡಬಲ್ಸ್ ವಿಭಾಗದಲ್ಲಿಭಾರತೀಯ ಆಟಗಾರ್ತಿಯರು ಉತ್ತಮ ಪ್ರದರ್ಶನ ತೋರಿದರು. ಶ್ರವ್ಯ ಶಿವಾನಿ ಅವರು ಜಪಾನ್ ನ ಮಿಚಿಕಾ ಒಜೆಕಿ ಜತೆಗೂಡಿ ಕ್ವಾಟರ್ ಫೈನಲ್ ಪ್ರವೇಶಿಸಿದರು. ಮೂರನೇ ಶ್ರೇಯಾಂಕಿತ ಜೀಲ್ ದೇಸಾಯಿ ಮತ್ತು ಎಲಿನಾ ನೆಪ್ಲಿಯ್ ಜೋಡಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು. ಸ್ನಿಗ್ಧಾ ಕಾಂತಾ-ಹರ್ಷಿನಿ ನಾಗರಾಜ್ ಜೋಡಿ 6-7, 6-4, 10-3 ಅಂಕಗಳಿಂದ ಪೋಲಿನಾ ಕುಹರೆನ್ಕೋ-ಎಕಾತೆರಿನಾ ಯಾಶಿನಾ ವಿರುದ್ಧ ರೋಚಕ ಜಯ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದೆ.

