(ಧಿಬೆಂ.ಧಿಗೆ)ಜನಾಭಿಪ್ರಾಯ ಸಂಗ್ರಹಕ್ಕೆ ರಾಜ್ಯಾದ್ಯಂತ ಪ್ರವಾಸ: ಬಿ.ಎಸ್ .ಯಡಿಯೂರಪ್ಪ

Contributed byharisha.lakshmipathy@timesgroup.com|Vijaya Karnataka

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯದ ಜನರ ಅಭಿಪ್ರಾಯ ಸಂಗ್ರಹಿಸುವುದು ಇದರ ಉದ್ದೇಶವಾಗಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಇರಾನ್‌-ಇಸ್ರೇಲ್‌ ಯುದ್ಧದ ಬಗ್ಗೆಯೂ ಅವರು ಮಾತನಾಡಿದರು. ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

bs yediyurappa travels across the state for public opinion collection

ಜನಾಭಿಪ್ರಾಯ ಸಂಗ್ರಹಕ್ಕೆ ರಾಜ್ಯಾದ್ಯಂತ

ಪ್ರವಾಸ: ಬಿ.ಎಸ್ .ಯಡಿಯೂರಪ್ಪ

ವಿಕ ಸುದ್ದಿಲೋಕ ಮೈಸೂರು

ಜನಾಭಿಪ್ರಾಯ ಸಂಗ್ರಹಕ್ಕೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ ಎಂದು ಮಾಜಿ ಸಿಎಂ ಬಿ.ಎಸ್ .ಯಡಿಯೂರಪ್ಪ ಹೇಳಿದರು.

ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ರಾಜ್ಯದ ಜನರ ಎಲ್ಲಾ ನಿರೀಕ್ಷೆಗಳನ್ನು ರಾಜ್ಯ ಕಾಂಗ್ರೆಸ್ ಸರಕಾರ ಹುಸಿಮಾಡಿದೆ. ಅಭಿವೃದ್ಧಿ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಈ ಕಾರಣದಿಂದ ಜನರು ಬದಲಾವಣೆ ಬಯಸುತ್ತಿದ್ದಾರೆ. ಜನರ ಅಪೇಕ್ಷೆಗೆ ತಕ್ಕಂತೆ ಬದಲಾವಣೆ ತರಲು ನಾನು ರಾಜ್ಯಾಧ್ಯಂತ ಪ್ರವಾಸ ಕೈಗೊಂಡಿದ್ದೇನೆ,’’ ಎಂದು ಹೇಳಿದರು.

ಇರಾನ್ -ಇಸ್ರೇಲ್ ನಡುವಿನ ಯುದ್ಧದ ಕುರಿತು ಪ್ರತಿಕ್ರಿಯಿಸಿ, ‘‘ಈ ವಿಚಾರವನ್ನು ಆಧಾರ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಮೋದಿ ಅವರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದರೂ ಅನಗತ್ಯ ಗೊಂದಲ ಮೂಡಿಸುವುದು ಸರಿಯಲ್ಲ,’’ ಎಂದರು.

ಸುತ್ತೂರು ಮಠಕ್ಕೆ ಭೇಟಿ: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಬಿ.ಎಸ್ .ಯಡಿಯೂರಪ್ಪ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಮಠದ ವತಿಯಿಂದ ಯಡಿಯೂರಪ್ಪ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಮಠದಲ್ಲಿಬೆಳಗಿನ ಉಪಾಹಾರ ಸೇವಿಸಿದರು.

ಮಾಜಿ ಎಂಎಲ್ ಸಿ ತೋಂಟದಾರ್ಯ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎನ್ .ಮಹೇಶ್ , ಮಾಜಿ ಶಾಸಕ ನಿರಂಜನ್ , ಬಿಜೆಪಿ ನಗರಾಧ್ಯಕ್ಷ ಎಲ….ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಮುಖಂಡರಾದ ರಘು ಕೌಟಿಲ್ಯ, ಎಲ….ಆರ್ .ಮಹದೇವಸ್ವಾಮಿ, ಹೇಮಂತ್ ಕುಮಾರ್ ಗೌಡ ಇದ್ದರು.