ಉಜಿರೆ ಬ್ರಹ್ಮಕಲಶೋತ್ಸವದಲ್ಲಿಮಟ್ಟುಗುಳ್ಳದ ಘಮ

Contributed byaravindahebbar1971@gmail.com|Vijaya Karnataka

ಉಜಿರೆ ಶ್ರೀ ಜನಾರ್ದನ ದೇವರ ಬ್ರಹ್ಮಕಲಶೋತ್ಸವಕ್ಕೆ ವಿಶೇಷ ಮೆರಗು ತರಲಾಗಿದೆ. ಜಯರಾಂ ಸುಮಾ ದಂಪತಿ ಹಾಗೂ ರೋಹಿತ್ ಅವರು ಉಡುಪಿಯ ಹೆಸರಾಂತ ಮಟ್ಟುಗುಳ್ಳವನ್ನು ಸಾವಯವ पद्धतीने ಬೆಳೆದು ಯಶಸ್ವಿಯಾಗಿದ್ದಾರೆ. ಸುಮಾರು ಒಂದು ಎಕರೆ ಜಾಗದಲ್ಲಿ 250 ಗಿಡಗಳನ್ನು ಬೆಳೆಸಿ, 2 ಕ್ವಿಂಟಾಲ್‌ಗೂ ಅಧಿಕ ಮಟ್ಟುಗುಳ್ಳವನ್ನು ಅನ್ನ ಸಂತರ್ಪಣೆಗೆ ನೀಡಿದ್ದಾರೆ. ಇದು ಉಡುಪಿ ಮತ್ತು ಉಜಿರೆ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದೆ.

celebration of mattugulla at ujire brahmakalashotsava

ವಿಕ ಸುದ್ದಿಲೋಕ ಉಜಿರೆ

ಉಜಿರೆ ಶ್ರೀ ಜನಾರ್ದನ ದೇವರ ಬ್ರಹ್ಮಕಲಶೋತ್ಸವ ಪ್ರಾರಂಭವಾಗಿದೆ. ಗ್ರಾಮದ ಪ್ರತಿಯೊಬ್ಬರಿಂದಲೂ ತಮ್ಮಿಂದಾದ ರೀತಿಯಲ್ಲಿತನು, ಮನ, ಧನ, ಶ್ರಮದಾನದ ಮೂಲಕ ಹಲವಾರು ಕೆಲಸ ಕಾರ್ಯಗಳು ದೇವಳದ ಪ್ರಾಂಗಣದಲ್ಲಿನಡೆಯುತ್ತಿವೆ. ಬ್ರಹ್ಮಕಲಶೋತ್ಸವಕ್ಕೆ ಹೊಸ ಮೆರುಗು ನೀಡಲು ಏನಾದರೂ ಒಂದು ಹೊಸತನ ತೋರಿಸಬೇಕೆಂಬ ಉದ್ದೇಶದಿಂದ ಉಜಿರೆಯ ಜಯರಾಂ ಸುಮಾ ದಂಪತಿ ಹಾಗೂ ರೋಹಿತ್ ಉಡುಪಿಯ ಹೆಸರಾಂತ ಮಟ್ಟುಗುಳ್ಳವನ್ನು ಸಾಹಸದಿಂದ ಸಾವಯವ ರೀತಿಯಲ್ಲಿಬೆಳೆದು ಯಶಸ್ವಿಯಾಗಿದ್ದಾರೆ.

ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಅವರ ಜಮೀನಿನಲ್ಲಿಅವರ ಅನುಮತಿಯೊಂದಿಗೆ ಮಟ್ಟುಗುಳ್ಳ ಬೆಳೆದಿದ್ದು, ಅದಕ್ಕಾಗಿ ಉಡುಪಿಯಲ್ಲಿಬೆಳೆದು ಪೇಟೆಂಟ್ ಪಡೆದವರಲ್ಲಿಭಕ್ತಿಯಿಂದ ಕೇಳಿಕೊಂಡ ಮೇರೆಗೆ ಅಲ್ಲಿಂದ ಬೀಜವನ್ನು ಪಡೆದು ಉಜಿರೆಯಲ್ಲಿಅಂದಾಜು 1 ಎಕರೆ ಜಾಗದಲ್ಲಿ250 ಗಿಡಗಳನ್ನು ಬೆಳೆದು 3 ತಿಂಗಳುಗಳ ಕಾಲ ಪೋಷಿಸಿ 2 ಕ್ವಿಂಟಾಲ್ ಗಿಂತಲೂ ಹೆಚ್ಚಿನ ತೂಕದ ಮಟ್ಟುಗುಳ್ಳವನ್ನು ಉಜಿರೆಯ ಶ್ರೀ ಜನಾರ್ದನ ದೇವರ ಬ್ರಹ್ಮಕಲಶೋತ್ಸವದ ಅನ್ನ ಸಂತರ್ಪಣೆಗೆ ನೀಡಿದ್ದಾರೆ.

ಬಾಕ್ಸ್

ಮಟ್ಟುಗುಳ್ಳ ಇತಿಹಾಸ

ಸುಮಾರು 400 ವರ್ಷಗಳ ಹಿಂದೆ ಶ್ರೀ ವಾದಿರಾಜ ತೀರ್ಥ ಶ್ರೀಪಾದರು ಉಡುಪಿಯ ಮಟ್ಟು ಗ್ರಾಮದ ಬ್ರಾಹ್ಮಣರಿಗೆ ಬೀಜಗಳನ್ನು ನೀಡಿ ಬೆಳೆಯಲು ಹೇಳಿದರು. ನಂತರ ಬಂದ ಫಲವನ್ನು ಶ್ರೀಕೃಷ್ಣನಿಗೆ ನೈವೇದ್ಯ ಮಾಡಲಾಯಿತು. ಇದಕ್ಕೆ ವಾದಿರಾಜ ಗುಳ್ಳ ಎಂಬ ಹೆಸರೂ ಇದೆ. ಉಡುಪಿಯ ಪರ್ಯಾಯದಲ್ಲಿಶ್ರೀಕೃಷ್ಣ ದೇವರಿಗೂ ಕೃಷ್ಣ ಭಕ್ತರಿಗೂ ಅತೀ ಮುಖ್ಯವಾಗಿ ಇರಬೇಕಾದ ಖಾದ್ಯವಾಗಿದೆ. ಮಟ್ಟುಗುಳ್ಳ ಕೇವಲ ತರಕಾರಿಯಾಗಿರದೆ ಶ್ರೀಕೃಷ್ಣನ ಪೂಜಾ ಪರಂಪರೆಯ ಭಾಗವಾಗಿದೆ. ಇದರಲ್ಲಿಕಡಿಮೆ ಬೀಜ ಹೆಚ್ಚು ತಿರುಳು ಇದ್ದು ಮೃದುವಾದ ಗುಣ ಹೊಂದಿದೆ. ಈ ಹಿನ್ನೆಲೆಯಲ್ಲಿಶ್ರೀಕೃಷ್ಣ ದೇವರ ಮೂಲ ರೂಪ ಶ್ರೀ ಜನಾರ್ದನ ಸ್ವಾಮಿಗೆ ಮಟ್ಟುಗುಳ್ಳವನ್ನು ಬೆಳೆದು ಅರ್ಪಿಸುವ ಜಯರಾಂ ಹಾಗೂ ರೋಹಿತ್ ಅವರ ತಂಡದ ಕನಸು ನನಸಾಗಿದೆ.

ಕೋಟ್

ಹದಿಮೂರನೇ ಶತಮಾನದಲ್ಲಿದ್ವೈತ ಸಿದ್ಧಾಂತ ಪ್ರತಿಪಾದಕ ಶ್ರೀ ಮಧ್ವಾಚಾರ್ಯರು ಉಚ್ಛಭೂತಿಯೆಂದೇ ಕರೆಯಲ್ಪಡುತ್ತಿದ್ದ ಉಜಿರೆಯ ಶ್ರೀ ಜನಾರ್ದನ ದೇವಾಲಯವನ್ನು ಸಂದರ್ಶಿಸಿ, ಇಲ್ಲಿಯ ಘನ ವೇದ ವಿದ್ವಾಂಸರೊಂದಿಗೆ ವಾದ ವಿವಾದಗಳಲ್ಲಿತರ್ಕ ನಡೆಸಿ ಸ್ಫೂ್ಪರ್ತಿಗೊಂಡು ಶ್ರೀ ಸುಮಧ್ವ ವಿಜಯದ ಖಂಡಾರ್ಥ ನಿರ್ಣಯ ಗ್ರಂಥ ರಚಿಸಿರುವುದಕ್ಕೆ ಉಲ್ಲೇಖಗಳಿವೆ. ಉಡುಪಿ ಹಾಗೂ ಉಜಿರೆ ಕ್ಷೇತ್ರಗಳು ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧ ಹೊಂದಿವೆ. ಇದೀಗ ಮಟ್ಟಿನಿಂದ ಗುಳ್ಳವನ್ನು ಉಜಿರೆಯಲ್ಲಿಬೆಳೆಸಿ ದೇವರಿಗೆ ಸಮರ್ಪಿಸುವ ಮೂಲಕ ಮತ್ತೊಮ್ಮೆ ಆ ಸಂಬಂಧ ಗಟ್ಟಿಗೊಳಿಸುವ ಕಾರ್ಯವಾಗಿದೆ.

-ಶರತ್ ಕೃಷ್ಣ ಪಡ್ವೆಟ್ನಾಯ

ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀ ಜನಾರ್ದನ ದೇವಸ್ಥಾನ ಉಜಿರೆ

ಪೊಟೋ...04ಎಂಜೆ ಬದನೆ.

ಚಿತ್ರ ವಿವರ-

ಬ್ರಹ್ಮಕಲಶೋತ್ಸವಕ್ಕೆ ಬಂದ ಮಟ್ಟುಗುಳ್ಳ.