ಸೇವಾ ಮನೋಭಾವ ಮೂಡಿಸುವುದೇ ಶಿಕ್ಷಣದ ಗುರಿ
ಟಿಎಪಿಸಿಎಂಎಸ್ ಅಧ್ಯಕ್ಷ ಎಲ್ .ಸಿದ್ದರಾಮಯ್ಯ ಅಭಿಮತ |
ವಿಕ ಸುದ್ದಿಲೋಕ ವಿಜಯನಗರ (ಹೊಸಪೇಟೆ)
‘‘ವಿದ್ಯಾರ್ಥಿ ದೆಸೆಯಲ್ಲಿಯೇ ಸಮಾಜ ಸೇವೆಯ ಸಂಸ್ಕಾರವನ್ನು ಮೈಗೂಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಸೇವಾ ಮನೋಭಾವದ ಅರಿವು ಮೂಡಿಸಬೇಕು,’’ ಎಂದು ಹೊಸಪೇಟೆ ಟಿಎಪಿಸಿಎಂಎಸ್ ಅಧ್ಯಕ್ಷ ಎಲ್ .ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಹಳೇಮಲಪನಗುಡಿಯ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿಗುರುವಾರ ಹಮ್ಮಿಕೊಂಡಿದ್ದ ಉಗಮದೇವಿ ಭವರ್ ಲಾಲ್ ನಾಹರ್ ಥಿಯೋಸಾಪಿಕಲ್ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘‘ಗ್ರಾಮೀಣ ಪ್ರದೇಶಗಳಲ್ಲಿಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಯುವಜನತೆ ಇಂತಹ ಸೇವಾ ಚಟುವಟಿಕೆಗಳಲ್ಲಿಸಕ್ರಿಯವಾಗಿ ಪಾಲ್ಗೊಳ್ಳಬೇಕು. ಹಳೇಮಲಪನಗುಡಿ ಗ್ರಾಮವನ್ನು ಈ ವಿಶೇಷ ಶಿಬಿರಕ್ಕಾಗಿ ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯ. ಗ್ರಾಮದ ಅಭಿವೃದ್ಧಿಗೆ ವಿದ್ಯಾರ್ಥಿನಿಯರ ಶ್ರಮದಾನದ ಕೊಡುಗೆ ಸ್ಮರಣೀಯ,’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜ ಸೇವಕಿ ರಶ್ಮಿ ರಾಜಶೇಖರ್ ಹಿಟ್ನಾಳ್ ಮಾತನಾಡಿ, ‘‘ಇಂದಿನ ವಿದ್ಯಾರ್ಥಿನಿಯರು ಕೇವಲ ಶಿಕ್ಷಣಕ್ಕೆ ಸೀಮಿತವಾಗದೆ ಸಮಾಜದಲ್ಲಿನಾಯಕತ್ವ ವಹಿಸಿಕೊಳ್ಳಬೇಕು. ನಿರ್ಧಾರ ತೆಗೆದುಕೊಳ್ಳುವ ಕೌಶಲ ಬೆಳೆಸಿ ಕೊಳ್ಳಬೇಕು,’’ ಎಂದು ಕಿವಿಮಾತು ಹೇಳಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರಗೌಡ ಮಾತನಾಡಿ, ‘‘ಶಿಕ್ಷಣ ಎಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯದ ಕಲಿಕೆಯಲ್ಲ. ಅದು ಸಮಾಜದ ವಾಸ್ತವಿಕ ಪರಿಸ್ಥಿತಿಯ ಅನುಭವವನ್ನೂ ಒಳಗೊಂಡಿರಬೇಕು. ಎನ್ ಎಸ್ ಎಸ್ ವಿದ್ಯಾರ್ಥಿಗಳಲ್ಲಿಶಿಸ್ತು ಮತ್ತು ಜವಾಬ್ದಾರಿಯನ್ನು ಬೆಳೆಸುತ್ತದೆ,’’ ಎಂದರು.
ಕಾರ್ಯದರ್ಶಿ ಭೂಪಾಳ್ ಪ್ರಹ್ಲಾದ್ ಶಿಬಿರಾರ್ಥಿಗಳಿಗೆ ಟೀ-ಶರ್ಟ್ ಹಾಗೂ ಕ್ಯಾಪ್ ವಿತರಿಸಿದರು. ಜಂಟಿ ಕಾಯ ರ್ ದರ್ಶಿ ಅಶೋಕ ಜೀರೆ ಮಾತನಾಡಿದರು. ಹಳೇಮಲಪನಗುಡಿಯ ಸಾಧಕರಾದ ಕಾರ್ ಮಂಚಪ್ಪ ಮತ್ತು ಎಚ್ . ಕೆ.ಸುಭದ್ರಮ್ಮ ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲರಾದ ಡಾ.ಅನಸೂಯಾ ಅಂಗಡಿ, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಕೆ.ಎನ್ . ಮಲ್ಲಿಕಾರ್ಜುನ್ , ಐಕ್ಯುಎಸಿ ಸಂಚಾಲಕಿ ಡಿ.ಎನ್ .ಸುಜಾತಾ, ಎಂ.ಅಮೃತ ಕುಮಾರ್ , ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಜಂಬಾನಹಳ್ಳಿ ಸತ್ಯನಾರಾಯಣ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಎನ್ ಎಸ್ ಎಸ್ ಸ್ವಯಂ ಸೇವಕಿಯರು ಇದ್ದರು.
ಫೋಟೋ ಕ್ಯಾಪ್ಷನ್ : ವಿಜೆಎನ್ 5ಜಯಪ್ಪ5
ಹೊಸಪೇಟೆ ತಾಲೂಕಿನ ಹಳೇಮಲಪನಗುಡಿಯಲ್ಲಿಗುರುವಾರ ಆರಂಭವಾದ ಎನ್ ಎಸ್ ಎಸ್ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿಸಮಾಜಸೇವಕಿ ರಶ್ಮಿ ರಾಜಶೇಖರ್ ಹಿಟ್ನಾಳ್ ಮಾತನಾಡಿದರು.

