ವಕೀಲರ ಪರಿಷತ್ ಸದಸ್ಯ ಸ್ಥಾನಕ್ಕೆ ಮತಯಾಚನೆ

Contributed byhudemkrishnamurthy@gmail.com|Vijaya Karnataka

ಕೂಡ್ಲಿಗಿ ತಾಲೂಕಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಲೋಕೇಶ್‌ ವಿ.ನಾಯಕ್‌ ಅವರು ಈಗ ರಾಜ್ಯ ವಕೀಲರ ಪರಿಷತ್‌ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಅವರು ಕೂಡ್ಲಿಗಿ ವಕೀಲರ ಸಂಘಕ್ಕೆ ಭೇಟಿ ನೀಡಿ ಮತಯಾಚಿಸಿದರು. ಈ ಹಿಂದೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದಾಗಿ ತಿಳಿಸಿದರು. ವಕೀಲರು ತಮ್ಮನ್ನು ಆಶೀರ್ವದಿಸಬೇಕು ಎಂದು ಕೋರಿದರು. ವಕೀಲರ ಸಂಘದ ಪದಾಧಿಕಾರಿಗಳು ಅವರನ್ನು ಸನ್ಮಾನಿಸಿದರು.

lokesh v nayak seeks votes for the lawyers council member position in koodligi

ವಕೀಲರ ಪರಿಷತ್ ಸದಸ್ಯ ಸ್ಥಾನಕ್ಕೆ ಮತಯಾಚನೆ

ಕೂಡ್ಲಿಗಿ: 2023ರ ವಿಧಾನಸಭಾ ಚುನಾವಣೆಯಲ್ಲಿಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದ ಲೋಕೇಶ್ ವಿ.ನಾಯಕ್ ಸದ್ಯ ರಾಜ್ಯ ವಕೀಲರ ಪರಿಷತ್ ಸದಸ್ಯ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ ಹಿನ್ನೆಲೆ ಪಟ್ಟಣದಲ್ಲಿರುವ ವಕೀಲರ ಸಂಘದ ಕಚೇರಿಗೆ ಬುಧವಾರ ಭೇಟಿ ನೀಡಿ, ಮತಯಾಚಿಸಿದರು.

ನಂತರ ಮಾತನಾಡಿ, ‘‘ಕೂಡ್ಲಿಗಿ ಕ್ಷೇತ್ರದಲ್ಲಿಈ ಹಿಂದೆ ಸೇವೆ ಸಲ್ಲಿಸಿದ್ದು, ಈಗ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ. ವಕೀಲರು ಮತ ನೀಡಿ ಆಶೀರ್ವದಿಸಬೇಕು,’’ ಎಂದು ಕೋರಿದರು. ವಕೀಲರ ಸಂಘದ ತಾಲೂಕು ಅಧ್ಯಕ್ಷ ಜಿ.ಹೊನ್ನೂರಪ್ಪ, ಉಪಾಧ್ಯಕ್ಷ ಟಿ.ಮಲ್ಲಿಕಾರ್ಜುನ, ಪಾಪಯ್ಯ, ಡಿ.ಕೆ.ಬಿ.ರಾಜು, ಸಾಣೇಹಳ್ಳಿ ಹನುಮಂತಪ್ಪ, ಕಾಟಯ್ಯ, ಹುಡೇಂ ಗುರುಮೂರ್ತಿ, ಪಾಲಯ್ಯನಕೋಟೆ ಭೀಮೇಶ್ , ರಾಜು, ಡಿ.ಲಕ್ಷಿತ್ರ್ಮ ಸೇರಿ ಇತರರಿದ್ದರು.

ಫೋಟೋ ಕ್ಯಾಪ್ಷನ್ : 5 ಕೂಡ್ಲಿಗಿ 3

ಕೂಡ್ಲಿಗಿ ತಾಲೂಕು ವಕೀಲರ ಸಂಘದ ಕಚೇರಿಗೆ ಭೇಟಿ ನೀಡಿದ್ದ ರಾಜ್ಯ ವಕೀಲರ ಪರಿಷತ್ ಸದಸ್ಯ ಸ್ಥಾನದ ಅಭ್ಯರ್ಥಿ ಲೋಕೇಶ್ ವಿ.ನಾಯಕ್ ಅವರನ್ನು ಸನ್ಮಾನಿಸಲಾಯಿತು.