‘ಗ್ರಾಮೀಣ ಸಮಸ್ಯೆಗಳಿಗೆ ಸ್ಪಂದಿಸಿ’
ವಿಕ ಸುದ್ದಿಲೋಕ ಮರಿಯಮ್ಮನಹಳ್ಳಿ
‘‘ಗ್ರಾಮೀಣ ಭಾಗದ ಮೂಲ ಸಮಸ್ಯೆಗಳಿಗೆ ಕರವೇ ಘಟಕದ ಪದಾಧಿಕಾರಿಗಳು ಹೋರಾಟ ಮಾಡಬೇಕು,’’ ಎಂದು ವಿಜಯನಗರ ಜಿಲ್ಲಾಯುವಘಟಕದ ಅಧ್ಯಕ್ಷ ಎಂ.ಭರತ್ ಕುಮಾರ ಹೇಳಿದರು.
ಪಟ್ಟಣದ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿಕರವೇ(ಶಿವರಾಮೇಗೌಡ ಬಣ) ಮರಿಯಮ್ಮನಹಳ್ಳಿ ಹೋಬಳಿ ಯುವ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಗುರುವಾರ ಮಾತನಾಡಿದರು.
‘‘ಕರವೇ ಪದಾಧಿಕಾರಿಗಳು, ನಾಡು,ನುಡಿ,ಭಾಷೆ,ನೆಲ,ಜಲ ಸಂರಕ್ಷಣೆ ಜತೆಗೆ ಸಾಮಾಜಿಕ ಹೋರಾಟಗಳಲ್ಲಿಭಗವಹಿಸಿ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಬೇಕು,’’ ಎಂದು ಸಲಹೆ ನೀಡಿದರು.
ತಾಲೂಕು ಯುವ ಘಟಕದ ರವಿ ಯಾದವ್ , ಎ ಉಮೇಶ್ ಇದ್ದರು.
ಪದಾಧಿಕಾರಿಗಳ ಆಯ್ಕೆ:
ಹೊಸದಾಗಿ ಮರಿಯಮ್ಮನಹಳ್ಳಿ ಹೋಬಳಿ ಘಟಕ ರಚಿಸಲಾಗಿದೆ. ಸುರೇಶ್ ಎ.(ಅಧ್ಯಕ್ಷ), ಶರಣ್ ಕುಮಾರ್ ಎ.( ಉಪಾಧ್ಯಕ್ಷ), ಸಾಗರ್ ಕುಮಾರ್ (ಪ್ರಧಾನ ಕಾರ್ಯದರ್ಶಿ), ವಸಂತ ಕುಮಾರ್ (ಖಜಾಂಚಿ), ವಿವೇಕ್ ಕೆತಾವತ್ , ಸುಮಂತ ಯು.ಬಿ.,( ಕಾರ್ಯದರ್ಶಿ), ಶರಣ್ ಗೌಡ, ಕಾರ್ತಿಕ್ ಯು.ಬಿ. ದರ್ಶನ್ ಎಂ.,( ಸಹ ಕಾರ್ಯದರ್ಶಿ), ಮಂಜುನಾಥ ಟಿ, ಅಲ್ತಾಫ್ , ಕೊಟ್ರೇಶ್ ಎಚ್ .ಎಂ. ರಂಗ ಕೆ.(ಸಂ.ಕಾರ್ಯದರ್ಶಿ), ಅಭಿಷೇಕ್ , ಪುನೀತ್ ಜಿ. ನಾಗರಾಜ್ ಪೂಜಾರ್ , ಜಾನು ಪ್ರಭು( ಸಂಚಾಲಕರು) ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಫೋಟೊ: 5 ಮಮಹಳ್ಳಿ 1: ಮರಿಯಮ್ಮನಹಳ್ಳಿ ಕರವೇ ಹೋಬಳಿ ಯುವ ಘಟಕಕ್ಕೆ ಜಿಲ್ಲಾಯುವ ಘಟಕದ ಅಧ್ಯಕ್ಷ ಎಂ.ಭರತ್ ಕುಮಾರ ಗುರುವಾರ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

