ಕೇಂದ್ರ ರೈತ ಗುರುತಿನ ಸಂಖ್ಯೆ ಕಡ್ಡಾಯ
ವಿಜಯನಗರ (ಹೊಸಪೇಟೆ): ‘‘ಕೇಂದ್ರ ಮತ್ತು ರಾಜ್ಯ ಸರಕಾರಗಳ ನಾನಾ ಕೃಷಿ ಯೋಜನೆಗಳ ಸೌಲಭ್ಯ ಮುಂದುವರೆಸಲು ರೈತರು ತಮ್ಮ ಫ್ರೂಟ್ಸ್ ಐಡಿಯನ್ನು ಕೇಂದ್ರ ಸರಕಾರದ ದತ್ತಾಂಶದೊಂದಿಗೆ ಜೋಡಿಸಿ, ‘ಕೇಂದ್ರ ರೈತ ಗುರುತಿನ ಸಂಖ್ಯೆ’ ಸೃಜಿಸಿಕೊಳ್ಳುವುದು ಕಡ್ಡಾಯವಾಗಿದೆ,’’ ಎಂದು ಜಂಟಿ ಕೃಷಿ ನಿರ್ದೇಶಕ ಡಿ.ಟಿ.ಮಂಜುನಾಥ ತಿಳಿಸಿದ್ದಾರೆ.
‘‘ಕೇಂದ್ರ ಸರಕಾರದ ಹೊಸ ಮಾರ್ಗಸೂಚಿಯಂತೆ ಪಿಎಂ-ಕಿಸಾನ್ ಪ್ರೋತ್ಸಾಹಧನ, ಬರ ಪರಿಹಾರ ಮತ್ತು ಬೆಳೆ ವಿಮೆ ಸೌಲಭ್ಯ ಪಡೆಯಲು ಈ ಪ್ರಕ್ರಿಯೆ ಅತ್ಯಗತ್ಯವಾಗಿದೆ. ಹೊಸ ನಿಯಮದಂತೆ ಫ್ರ್ಯೂಟ್ಸ್ ಮತ್ತು ಭೂಮಿ ದತ್ತಾಂಶಗಳನ್ನು ಪರಸ್ಪರ ಸಂಯೋಜಿಸುವುದು ಕಡ್ಡಾಯ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ರೈತರಿಗೆ ಅಧಿಕೃತ ಕೇಂದ್ರ ರೈತ ಗುರುತಿನ ಸಂಖ್ಯೆ ದೊರೆಯಲಿದ್ದು, ಮುಂದಿನ ಎಲ್ಲಸೌಲಭ್ಯಗಳಿಗೆ ಇದೇ ಗುರುತಿನ ಚೀಟಿ ಆಧಾರವಾಗಲಿದೆ. ಫ್ರೂಟ್ಸ್ ತಂತ್ರಾಂಶದಲ್ಲಿಇ-ಕೆವೈಸಿ ಮಾಡಿಸುವುದು, ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ದಾಖಲಿಸುವುದು, ರೈತರ ಹೆಸರಿನಲ್ಲಿರುವ ಎಲ್ಲ ಭೂ ಹಿಡುವಳಿಗಳನ್ನು ಕಡ್ಡಾಯವಾಗಿ ಎಫ್ ಐಡಿನಲ್ಲಿಸೇರಿಸಬೇಕು. ರೈತರು ಆಧಾರ್ ಕಾರ್ಡ್ , ಮೊಬೈಲ್ , ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಹಾಗೂ ಪಹಣಿಗಳನ್ನು ತೆಗೆದುಕೊಂಡು ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮಒನ್ ಕೇಂದ್ರಗಳಿಗೆ ಹಾಗೂ ತೋಟಗಾರಿಕೆ ಇಲಾಖಾ ಕಚೇರಿಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು,’’ ಎಂದು ಅವರು ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಫೋಟೋ ಕ್ಯಾಪ್ಷನ್ : ವಿಜೆಎನ್ 5ಜಯಪ್ಪ6: ಡಿ.ಟಿ.ಮಂಜುನಾಥ

