ಕಾಗದದ ಮೇಲಷ್ಟೇ ಭರವಸೆ
ಸಿಎಂ ಮಂಡಿಸಿದ ಬಜೆಟ್ ನಲ್ಲಿಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಜನತೆಗೆ ಕೇವಲ ಕಾಗದದ ಮೇಲೆ ಭರವಸೆ ನೀಡಿ ವಂಚಿಸಲಾಗಿದೆ. ಪ್ರಭಾವಿ ಸಚಿವರಾದ ಎಂ.ಬಿ.ಪಾಟೀಲರು ತಮ್ಮ ಸ್ವಕ್ಷೇತ್ರಕ್ಕೆ ವಾಸ್ತವಿಕ ಅನುದಾನ ತರುವಲ್ಲಿಮತ್ತು ಆಡಳಿತಾತ್ಮಕ ಮೂಲಸೌಕರ್ಯ ಒದಗಿಸುವಲ್ಲಿಸಂಪೂರ್ಣ ವಿಫಲರಾಗಿದ್ದಾರೆ. ವಿಜಯಪುರ ಜಿಲ್ಲೆಯ ಬಾಬಾ ನಗರದಲ್ಲಿ0.67 ಟಿಎಂಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯಯನ್ನು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ನಿರ್ಮಿಸಲು ಕೇವಲ ತಾತ್ವಿಕ ಅನುಮೋದನೆ ನೀಡಲಾಗಿದೆ. ಯೋಜನೆಗೆ ಬಿಡಿಗಾಸು ಮೀಸಲಿಡದೆ ರೈತರ ಕಣ್ಣಿಗೆ ಮಂಕುಬೂದಿ ಎರಚುವ ತಂತ್ರವಾಗಿದೆ.
-ಸಂತೋಷ ಕುರದಡ್ಡಿ, ತಾಲೂಕು ಅಧ್ಯಕ್ಷ, ಬಿಜೆಪಿ ಮಂಡಲ ಬಬಲೇಶ್ವರ .
ಫೋಟೊ

