ಮೂಡುಬಿದಿರೆ : ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಕ್ಯಾಂಟೀನ್ ನೌಕರ ರಮೇಶ್ ಅವರು ಕಳೆದ ಫೆ.26ರಂದು ಸ್ಕೂಟರ್ ಪಲ್ಟಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಕಲ್ಲಬೆಟ್ಟುವಿನಿಂದ ರಾತ್ರಿ ಪಾಳಿಯಲ್ಲಿಕೆಲಸ ನಿರ್ವಹಿಸಲು ತನ್ನ ಮನೆಯಿಂದ ಸ್ಕೂಟರಿನಲ್ಲಿಹೊರಟಿದ್ದು ದಾರಿ ಮಧ್ಯೆ ಸ್ಕೂಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತೆಗೆ ದಾಖಲಿಸಲಾಗಿತ್ತು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

