ರಾಜ್ಯಕ್ಕೆ ಗ್ಯಾರಂಟಿ ಭಾರ (ಚೂರುಪಾರು)

Contributed byvkhdlreporter@gmail.com|Vijaya Karnataka

ರಾಜ್ಯಕ್ಕೆ ಗ್ಯಾರಂಟಿ ಯೋಜನೆಗಳಿಂದ ಸಾಲದ ಹೊರೆ ಹೆಚ್ಚಾಗುತ್ತಿದೆ ಎಂದು ಬಿಜೆಪಿ ಮುಖಂಡ ಎಂ.ಬಿ.ಬಸವರಾಜ ಟೀಕಿಸಿದ್ದಾರೆ. ಅಭಿವೃದ್ಧಿ ಯೋಜನೆಗಳ ಬದಲಿಗೆ ಹಳಸಲು ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಇದು ವೈಯಕ್ತಿಕ ಪ್ರತಿಷ್ಠೆಯ ಬಜೆಟ್ ಎಂದು ಅವರು ಲೇವಡಿ ಮಾಡಿದ್ದಾರೆ. ರಾಜಕೀಯ ಓಲೈಕೆ ಸಿದ್ದರಾಮಯ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.

congress chief minister responds to bjps critique of guaranteed scheme budget

ರಾಜ್ಯಕ್ಕೆ ಗ್ಯಾರಂಟಿ ಭಾರ (ಚೂರುಪಾರು)

ವಿಕ ಸುದ್ದಿಲೋಕ ಹೂವಿನಹಡಗಲಿ

‘‘ಗ್ಯಾರಂಟಿ ಯೋಜನೆಗಳ ಮೂಲಕ ಉಚಿತ ಭಾಗ್ಯಗಳನ್ನು ನೀಡಿ ರಾಜ್ಯದ ಜನತೆಯ ಪಾಲಿಗೆ ಸಾಲದ ಹೊರೆಯ ಬಜೆಟ್ ,’’ ಎಂದು ಬಿಜೆಪಿ ಮುಖಂಡ ಎಂ.ಬಿ.ಬಸವರಾಜ ಟೀಕಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಭಿವೃದ್ಧಿಗೆ ಬೇಕಿರುವ ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಸ್ಥಾಪನೆ, ಶಿಕ್ಷಣ ನೀಡುವಂತಹ ಯೋಜನೆಗಳನ್ನು ಜಾರಿಗೊಳಿಸುವ ಬದಲು ಹಳಸಲು ಗ್ಯಾರಂಟಿ ಯೋಜನೆಗಳನ್ನೇ ಪ್ರಸ್ತಾಪಿಸಿ ಸಿಎಂ ಸಿದ್ದರಾಮಯ್ಯ ರಾಜ್ಯದ ಜನರ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಕೇವಲ ಹೋಲಿಕೆ, 17 ಬಾರಿ ಮಂಡಿಸಿದ ಎಂಬ ವೈಯಕ್ತಿಕ ಹಾಗೂ ಸ್ವ ಪ್ರತಿಷ್ಠೆಯ ಬಜೆಟ್ ಆಗಿದೆ. ರಾಜಕಾರಣವನ್ನು ಹೊರತುಪಡಿಸಿ ಜನಪರ ಕಾಳಜಿ ಮತ್ತು ಅಭಿವೃದ್ಧಿ ಪರ ಬಜೆಟ್ ಮಂಡಿಸಬೇಕಿತ್ತು. ದುರ್ಬಲ ಬಜೆಟ್ ಮಂಡಿಸುವ ಮೂಲಕ ತಾವೊಬ್ಬ ಅಪ್ಪಟ ರಾಜಕೀಯ ಓಲೈಕೆ ಸಿದ್ದರಾಮಯ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಚಿತ್ರ:ವಿಎನ್ ಆರ್ 6ಎಚ್ ಡಿಎಲ್ ಪಿ1-ಬಸವರಾಜ