ಯೋಗದಿಂದ ಆರೋಗ್ಯಪೂರ್ಣ ಜೀವನ

Contributed bymadhugirinews@gmail.com|Vijaya Karnataka

ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ ನಿಸರ್ಗ ಯೋಗ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ. ವೆಂಕಟೇಶ್ವರಲು ಎಂ. ಅವರು ಯೋಗದ ಮಹತ್ವ ಸಾರಿದರು. ಯೋಗದಿಂದ ಆರೋಗ್ಯ ವೃದ್ಧಿಸುತ್ತದೆ. ಆಸ್ಪತ್ರೆಗೆ ಹೋಗುವ ಅಗತ್ಯತೆ ತಗ್ಗುತ್ತದೆ. ರೋಗಮುಕ್ತ ಸಮಾಜಕ್ಕೆ ಯೋಗ ಅತ್ಯಗತ್ಯ. ಯುವಜನತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಗುಣಮಟ್ಟದ ಆಹಾರ ಸೇವನೆ ಸಂತೋಷಕ್ಕೆ ಮುಖ್ಯ. ಪ್ರಕೃತಿ ರಕ್ಷಣೆ ನಮ್ಮ ಕರ್ತವ್ಯ. ಯೋಗಾಭ್ಯಾಸದಿಂದ ಉತ್ತಮ ಜೀವನ ಸಾಧ್ಯ.

importance of yoga and health

(ತುಮಕೂರು ವಿವಿಯ ಕುಲಪತಿ ಪ್ರೊ. ವೆಂಕಟೇಶ್ವರಲು ಎಂ. ಹೇಳಿಕೆ)

ವಿಕ ಸುದ್ದಿಲೋಕ ತುಮಕೂರು

ಯೋಗ ಾಭ್ಯಾಸ ಮಾಡುವುದರಿಂದ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಕಡಿಮೆಯಾಗುತ್ತದೆ. ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಯೋಗ ಅತ್ಯಗತ್ಯವಾಗಿದೆ ಎಂದು ತುಮಕೂರು ವಿವಿಯ ಕುಲಪತಿ ಪ್ರೊ. ವೆಂಕಟೇಶ್ವರಲು ಎಂ. ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದ ಯೋಗ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಂಯುಕ್ತಾಶ್ರಯದಲ್ಲಿಶುಕ್ರವಾರ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿಆಯೋಜಿಸಿದ್ದ ನಿಸರ್ಗ ಯೋಗ ಎಂಬ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಯುವಜನತೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ನಮ್ಮ ದುಡಿಮೆ ಆರೋಗ್ಯಕರ ಜೀವನಕ್ಕೆ ಆಧಾರವಾಗಬೇಕು. ಜೀವನದುದ್ದಕ್ಕೂ ಸಂತೋಷವಾಗಿರಲು ಗುಣಮಟ್ಟದ ಆಹಾರ ಸೇವನೆ ಮುಖ್ಯ. ನಾವು ಪ್ರಕೃತಿಯನ್ನು ರಕ್ಷಿಸಿದರೆ ಮಾತ್ರ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಜಾಗತಿಕ ಮಟ್ಟದಲ್ಲಿಹೆಸರು ಗಳಿಸಬೇಕು ಎಂದರು.

ಶ್ರೀ ಸಿದ್ಧಗಂಗಾ ಸ್ವಾಮೀಜಿ 111 ವರ್ಷಗಳ ಸಾರ್ಥಕ ಜೀವನ ನಡೆಸಲು ಅವರ ಸಕಾರಾತ್ಮಕ ಆಲೋಚನೆಗಳೇ ಕಾರಣ. ಅತಿಯಾದ ಮೊಬೈಲ್ ಬಳಕೆಯಿಂದ ಸಾಧನೆ ಮಾಡಲು ಸಾಧ್ಯವಿಲ್ಲ. ಪೋಷಕರ ಶ್ರಮಕ್ಕೆ ವಿದ್ಯಾರ್ಥಿಗಳ ಸಾಧನೆಯೇ ನೀಡುವ ದೊಡ್ಡ ಪ್ರಶಸ್ತಿಯಾಗಲಿ ಎಂದರು.

ವಿಜ್ಞಾನ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಎಸ್ . ಶ್ರೀನಿವಾಸ್ ಮಾತನಾಡಿ, ಇಂದಿನ ಕಾಲದಲ್ಲಿಎಲ್ಲವೂ ಕೃತಕವಾಗಿದೆ. ರಾಸಾಯನಿಕಯುಕ್ತ ಆಹಾರ ಸೇವಿಸುತ್ತಿರುವ ನಮಗೆ ಆರೋಗ್ಯ ಕಾಪಾಡಿಕೊಳ್ಳಲು ಯೋಗವೊಂದೇ ದಾರಿ ಎಂದರು.

ಈ ಸಂದರ್ಭದಲ್ಲಿÜ ಹಿರಿಯ ನಿಸರ್ಗ ಯೋಗ ತಜ್ಞ ಜಿ.ವಿ.ವಿ. ಶಾಸ್ತ್ರಿ, ಯೋಗ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕ ಡಾ. ಎ.ಎಂ. ಮಂಜುನಾಥ, ಪರಿಕ್ಷಾಂಗ ಕುಲಸಚಿವ ಪ್ರೊ. ಮೋಹನ್ ಎಚ್ .ಎಸ್ . ಹಾಜರಿದ್ದರು.

ಕೋಟ್ 1:

ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಆರೋಗ್ಯದ ಕುರಿತು ಶಿಕ್ಷಣ ಅಗತ್ಯ. ಪ್ರಕೃತಿಯನ್ನು ನೋಡಿ ನಾವು ಕಲಿಯುವುದು ತುಂಬಾ ಇದೆ. ಅರೋಗ್ಯಕರ ಜೀವನಕ್ಕೆ ಪ್ರಕೃತಿಯೊಂದಿಗಿನ ಯೋಗ ತುಂಬಾ ಮುಖ್ಯ. ಇತ್ತೀಚಿನ ದಿನಗಳಲ್ಲಿಮಕ್ಕಳಿಗೆ ಯೋಗದ ಬಗ್ಗೆ ಶಿಕ್ಷಣ ಸಿಗದೇ ಇರುವುದು ಅತ್ಯಂತ ದುಃಖಕರವಾದ ವಿಚಾರ ಎಂಬುದು ಕಳವಳ.

- ಜಿ.ವಿ.ವಿ. ಶಾಸ್ತ್ರಿ, ಹಿರಿಯ ನಿಸರ್ಗ ಯೋಗ ತಜ್ಞ.

ಫೋಟೋ 6ಕೆಜಿಎಚ್ 2: ತುಮಕೂರು ವಿವಿ ಯೋಗ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ವಿವಿ ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಂಯುಕ್ತಾಶ್ರಯದಲ್ಲಿನಿಸರ್ಗ ಯೋಗ ಎಂಬ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.