ಆಧಿರೋಧಿಗ್ಯಧಿವಾಧಿಗಿಧಿರಲು ನಿತ್ಯ ಯೋಗ ಮಾಡಿ
ಹೊಸದುರ್ಗ: ಪ್ರತಿನಿತ್ಯ ಗುಣಮಟ್ಟದ ಆಹಾರ ಹಾಗೂ ವ್ಯಾಯಾಮ , ಯೋಗಸಾನಗಳಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ವಾಕರ್ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಬಾಬು ಹೇಳಿದರು.
ಪಟ್ಟಣದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿವಾಕರ್ಸ್ ಅಸೋಸಿಯೇಷನ್ ಸಪ್ತಗಿರಿ ಆಸ್ಪತ್ರೆ ಹಾಗೂ ಸಂಜಯ್ ಮಲ್ಟಿ ಸ್ಪೆಧಿಷಾಲಿಟಿ ಆಸ್ಪತ್ರೆ ಧಿಆಶ್ರಯದಲ್ಲಿನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರೋಗಿಗಳಿಗೆ ಚಿಕಿತ್ಸೆ ಕಾರ್ಯಕ್ರಮದಲ್ಲಿಮಾತನಾಡಿದರು.
ಮಾನವ ಪ್ರತಿನಿತ್ಯ ಜಂಜಾಟದ ಜೀವನ ನಡೆಸುತ್ತಿದ್ದು, ತನ್ನ ಆರೋಗ್ಯದ ಕಡೆ ಕಾಳಜಿ ವಹಿಸುತ್ತಿಲ್ಲ. ಕೇವಲ ದುಡಿಮೆ ನೆಪದಲ್ಲಿಆರೋಗ್ಯ ಕಡೆಗಣಿಸುತ್ತಿದ್ದಾನೆ. ಹಣದಿಂದ ಆರೋಗ್ಯ ಖರೀದಿಸಲು ಸಾಧ್ಯವಿಲ್ಲಎಂದರು.
ಕಳೆದ 15 ವರ್ಷಗಳಿಂದ ಆಕರ್ಸ್ ಅಸೋಸಿಯೇಷನ್ ಅಡಿಯಲ್ಲಿಆರೋಗ್ಯ ತಪಾಸಣೆ ಶಿಬಿರ, ಮ್ಯಾರಥಾನ್ ನಂತ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿದ್ದು ಇದು ಒಂದು ಮಾದರಿ ಕಾರ್ಯಕ್ರಮ ಎಂದರು.
ಕಾರ್ಯಕ್ರಮದಲ್ಲಿಸಂಜಯ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಧಿವೈದ್ಯಾಧಿಕಾರಿ ಡಾಕ್ಟರ್ ಸಂಜಯ್ , ವಾಕರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಎಸ್ .ಲಿಂಗಮೂರ್ತಿ, ಉಪಾಧ್ಯಕ್ಷ ಜಗದೀಶ್ ಗೂಳಿಹಟ್ಟಿ, ಸುರೇಶ್ ಸಾಗರ್ , ಲಕ್ಷ್ಮಿಕಾಂತ್ , ಅರುಣ್ , ಪ್ರಕಾಶ್ , ವೇಣುಗೋಪಾಲ್ , ದೇವಿಗೆರೆ ಮಲ್ಲಿಕಾರ್ಜುನ್ , ಉಮೇಶ್ , ಯೋಗ ವೈದ್ಯ ಪರಮೇಶ್ವರಪ್ಪ, ವೀರೇಂದ್ರ ಪಾಟೀಲ್ , ರಮೇಶ್ ಗುರುಮೂರ್ತಿ, ತಣಿಗೆಕಲ್ಲುಲೋಕೇಶ್ , ರೇವಣ್ಣ ಇದ್ದರು.
6ಎಚ್ .ಎಸ್ .ಡಿ1
ಹೊಸದುರ್ಗ ಪಟ್ಟಣದಲ್ಲಿಸಿದ್ದರಾಮೇಶ್ವರ ಸಮುದಾಯ ಭವನದಲ್ಲಿಆರೋಗ್ಯ ತಧಿಪಾಧಿಸಧಿಣಾ ಶಿಬಿರ ನಡೆಯಿತು.

