ಬಾಲ್ಯವಿವಾಹ ತಡೆಗೆ ಜಾಗೃತಿ ಕಾರ್ಯಕ್ರಮ | 25 ಇಲಾಖೆ ಮಳಿಗೆಗಳ ಪ್ರದರ್ಶನ
ಕಾನೂನು ಸಾಕ್ಷರತೆ ಆರೋಗ್ಯ ಶಿಬಿರ ಇಂದು
ವಿಕ ಸುದ್ದಿಲೋಕ ಬಾಗಲಕೋಟೆ
‘‘ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತವಾಗಿಸಲು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮಾ.7ರಂದು ಇಳಕಲ್ ನಲ್ಲಿಬೃಹತ್ ಪ್ರಮಾಣದ ಕಾನೂನು ಸಾಕ್ಷರತಾ ಹಾಗೂ ಮೆಗಾ ಆರೋಗ್ಯ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದೆ’’ ಎಂದು ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶ ಎನ್ .ವಿ.ವಿಜಯ್ ಹೇಳಿದರು.
ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶರ ಕಚೇರಿಯಲ್ಲಿಸುದ್ದಿಗೋಷ್ಟಿಯಲ್ಲಿಮಾತನಾಡಿದ ಅವರು, ‘‘ಬಾಲ್ಯವಿವಾಹದಲ್ಲಿಬಾಗಲಕೋಟೆ ಜಿಲ್ಲೆರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇದನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿಜನರಲ್ಲಿಕಾನೂನು ಸಾಕ್ಷರತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಳಕಲ್ ನ ಬಾಬು ಜಗಜೀವನರಾಂ ಸಭಾಭವನದಲ್ಲಿಕಾರ್ಯಕ್ರಮ ಜರುಗಲಿದ್ದು, ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಉದ್ಘಾಟಿಸಲಿದ್ದಾರೆ’’ ಎಂದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷÜ ಅನು ಶಿವರಾಮನ್ , ಉಚ್ಚ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಎಂ., ಹೈಕೋರ್ಟ್ ನ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ ಪಾಲ್ಗೊಳ್ಳಲಿದ್ದಾರೆ. 25 ನಾನಾ ಇಲಾಖೆಗಳ ಮಳಿಗೆ ಹಾಕಲಾಗುತ್ತಿದೆ. ಇದರೊಂದಿಗೆ ಆರೋಗ್ಯ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’’ ಎಂದು ತಿಳಿಸಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ, ‘‘ಜನರಲ್ಲಿಕಾನೂನು ಅರಿವು ಮತ್ತು ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿರಾಜ್ಯ ಮಟ್ಟದ ಕಾರ್ಯಕ್ರಮ ಇಳಕಲ್ ನಲ್ಲಿನಡೆಯಲಿದ್ದು, ನಾನಾ ಇಲಾಖೆಯ ಮಳಿಗೆಗಳ ಪ್ರದರ್ಶನ ಮೂಲಕ ಸರಕಾರದ ಯೋಜನೆಗಳ ಮಾಹಿತಿ ಹಾಗೂ ಸೌಲಭ್ಯ ಕೊಡಿಸುವ ಕೆಲಸ ಮಾಡಲಾಗುತ್ತಿದೆ’’ ಎಂದರು.
ಜಿಲ್ಲೆಯ ಚಾಲಕಮಲದಿನ್ನಿ, ಚಿಕ್ಕಸಿಂಗನಗುತ್ತಿ, ಇಸ್ಲಾಂಪೂರ ಹಾಗೂ ಗೋಪಶ್ಯಾಣಿ ಗ್ರಾಮದಲ್ಲಿರುವ ಒಟ್ಟು 791 ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ಕಾನೂನು ವಿದ್ಯಾರ್ಥಿಗಳಿಂದ ನಡೆಸಲಾಗಿದೆ. ಪ್ರತಿಯೊಂದು ಕುಟುಂಬಸ್ಥರಿಗೆ ಕಾನೂನು ಅರಿವು ಮೂಡಿಸುವ ಮೂಲಕ ಸರಕಾರದಿಂದ ದೊರೆಯುವ ಸೌಲಭ್ಯ ಮಾಹಿತಿ ಸಂಗ್ರಹಿಸಲಾಗಿದೆ. ಮುಖ್ಯವಾಗಿ ರೇಷನ್ ಕಾರ್ಡ್ , ಜನನ ಹಾಗೂ ಮರಣ ಪ್ರಮಾಣಪತ್ರ, ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಆರೋಗ್ಯ ಕಾರ್ಡ್ ನಂತಹ ಸೌಲಭ್ಯಗಳ ಪಟ್ಟಿ ಮಾಡಿ ಸಂಬಂಧಿಸಿದ ಇಲಾಖೆಗೆ ಕಳುಹಿಸಿ ಸೌಲಭ್ಯ ಕೊಡಿಸುವ ಕೆಲಸ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಮಾಡಲಾಗುತ್ತಿದೆ’’ ಎಂದು ಹೇಳಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಮೋಹನರಾವ ನೆಲವಡೆ, ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಉಪಸ್ಥಿತರಿದ್ದರು.
ಜಡ್ಜ್ -ಬಿಜಿಕೆ-6
ನ್ಯಾಯಾಧೀಶ ಎನ್ .ವಿ.ವಿಜಯ

