ಸರಣಿ ಭಾಗ -2
ಹಳ್ಳಿಗಳಲ್ಲೂನೀರಿಗಾಗಿ ಹಾಹಾಕಾರ! (ಹೆಡ್ )
ಗದಗ ಜಿಲ್ಲೆಗೆ ಜಲಕ್ಷಾಮದ ಬಿಸಿ; ಬೇಸಿಗೆಯಲ್ಲಿ76 ಹಳ್ಳಿಗಳಲ್ಲಿನೀರಿನ ಬರ (ಕಿಕ್ಕರ್ )
ಸಲೀಮ್ ಬಳಬಟ್ಟಿ ಗದಗ
*ಚಿಟhhp.dಚಿಟಚಿdಚಿಣಣå*ಣåph*sಜಿåಟಿಜåಚಿ.ಛಿsp
ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಇತಿಹಾಸದ ಪುಟಗಳಲ್ಲಿದಾಖಲಾಗಿದ್ದು ಒಂದೆಡೆಯಾದರೆ, ಜಿಲ್ಲೆಯ ಗ್ರಾಮೀಣ ಭಾಗದಲ್ಲೂಬೇಸಿಗೆ ವೇಳೆ ಕುಡಿಯುವ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆಗಳು ಸ್ಪಷ್ಟವಾಗಿವೆ.
ಮಾರ್ಚ್ ಮೊದಲ ವಾರದಲ್ಲಿಯೇ ಬಿಸಿಲಿನ ಪ್ರಖರತೆ ಏರುತ್ತಿದ್ದು, ಮುಂಬರುವ ದಿನಗಳಲ್ಲಿಜಿಲ್ಲೆಯ ಗ್ರಾಮೀಣ ಜನತೆ ನೀರಿಗಾಗಿ ಪರಿತಪಿಸುವ ದುಸ್ಥಿತಿ ಎದುರಾಗುವ ಮುನ್ಸೂಚನೆ ಸಿಗುತ್ತಿದೆ.
ಜಿಲ್ಲೆಯ ಪ್ರಮುಖ ನೀರಿನ ಮೂಲಗಳಾದ ತುಂಗಭದ್ರಾ ಮತ್ತು ಮಲಪ್ರಭಾ ನದಿಗಳಿಂದ ನೀರು ಹರಿಸಲಾಗುತ್ತಿದ್ದರೂ, ಪೂರೈಕೆಯಲ್ಲಿನ ತಾಂತ್ರಿಕ ಲೋಪಗಳಿಂದಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿಜಿಲ್ಲೆಯ 76 ಹಳ್ಳಿಗಳಲ್ಲಿಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳೇ ಅಂದಾಜಿಸಿದ್ದಾರೆ.
ರೋಣ, ಗಜೇಂದ್ರಗಡ ಮತ್ತು ನರಗುಂದ ತಾಲೂಕಿನ 123 ಹಳ್ಳಿಗಳಿಗೆ ನಿತ್ಯ 26 ಎಂಎಲ್ ಡಿ ನೀರು ಅಗತ್ಯವಿದ್ದು, ಪ್ರಸ್ತುತ ಕೇವಲ 16 ರಿಂದ 20 ಎಂಎಲ್ಡಿ ಪೂರೈಕೆಯಾಗುತ್ತಿದೆ. ಅದೇ ರೀತಿ ಗದಗ, ಮುಂಡರಗಿ, ಲಕ್ಷೆ ್ಮೕಶ್ವರ ಹಾಗೂ ಶಿರಹಟ್ಟಿ ತಾಲೂಕಿನ 219 ಹಳ್ಳಿಗಳಿಗೆ 40 ಎಂಎಲ್ ಡಿ ನೀರಿನ ಅವಶ್ಯಕತೆ ಇದೆ. ಈಗ ಕೇವಲ 30 ಎಂಎಲ್ ಡಿ ನೀರು ಪೂರೈಕೆಯಾಗುತ್ತಿದೆ ಎಂದು ನೀರು ಸರಬರಾಜು ಇಲಾಖೆ ದಾಖಲೆಗಳು ಹೇಳುತ್ತಿವೆ. ಈ ಕೊರತೆಯು ಬೇಸಿಗೆಯ ಕಡು ಬಿಸಿಲಿನಲ್ಲಿಗ್ರಾಮೀಣ ಭಾಗದ ಜನರನ್ನು ಸಂಕಷ್ಟಕ್ಕೆ ದೂಡುವ ಭೀತಿ ಮೂಡಿಸಿದೆ.
ಹೀಗಾಗಿ ಮುಂದಿನ ದಿನಗಳಲ್ಲಿಗದಗ ತಾಲೂಕಿನ ಎಚ್ .ಎಸ್ . ವೆಂಕಟಾಪುರ, ನಾಗಸಮುದ್ರ, ಸೊರಟೂರು, ಅಡವಿಸೋಮಾಪುರ, ಎಲಿಶಿರೂರು, ತಿಮ್ಮಾಪುರ, ಹಿರೇಹಂದಿಗೊಳ, ಕೋಟಮುಚಗಿ, ಕದಡಿ, ಗಾವರವಾಡ, ಚಿಂಚಲಿ, ಸಾರಿಗೆ ನಗರ, ಲಿಂಗದಾಳ ಮತ್ತು ಹೊಂಬಳ ಗ್ರಾಮಗಳು. ಮುಂಡರಗಿ ತಾಲೂಕಿನ ಹಳ್ಳಿಕೇರಿ, ಚಿಕ್ಕವಡ್ಡಟ್ಟಿ, ಪೇಟಾಲೂರು, ಹೈತಾಪುರ, ಬೆಣ್ಣಿಹಳ್ಳಿ ಮತ್ತು ಗುಡ್ಡದ ಬುದಿಹಾಳ. ನರಗುಂದ ತಾಲೂಕಿನ ಹದಲಿ, ಗಂಗಾಪುರ, ಕುರ್ಕುಲಗೇರಿ, ಶಿರೋಳ, ಕಲ್ಲಾಪುರ, ಕಪ್ಪಲಿ, ಕೊಣ್ಣೂರು, ಬೂದೀಹಾಳ, ರಡ್ಡೇರ ನಾಗನೂರು, ಖಾನಾಪುರ, ವಾಸನ, ಬೆಳ್ಳೇರಿ, ಹಿರೇಕೊಪ್ಪ, ಕುರಗೋವಿನಕೊಪ್ಪ, ಬೆನಕೊಪ್ಪ, ಸಂಕದಾಳ, ಮೂಗನೂರು ಮತ್ತು ಭೈರನಹಟ್ಟಿ. ಗಜೇಂದ್ರಗಡದ ಮಾಟರಂಗಿ, ಗುಡಗೇರಿ, ನಾಗರಶಿಕೊಪ್ಪ ಮತ್ತು ಲಕ್ಕಲಕಟ್ಟಿ. ರೋಣ ತಾಲೂಕಿನ ಸ್ಥಳಾಂತರಗೊಂಡ ಮೆಣಸಗಿ, ಮಾಳವಾಡ, ಹೊಳೆಮಣ್ಣೂರು, ಭೋಪಳಾಪುರ, ಗಾಡಗೋಳಿ, ಕುರವಿನಕೊಪ್ಪ, ಬಸರಕೋಡ, ಹೊಳೆಆಲೂರು, ಸವಡಿ, ಅಬ್ಬಿಗೇರಿ, ಹಿರೇಹಾಳ, ಬಳಗೋಡ, ಹೊನ್ನಿಗನೂರು, ಚಿಕ್ಕಮಣ್ಣೂರು, ಮಾಡಲಗೇರಿ ಮತ್ತು ಮುದೇನಗೂಡಿ. ಶಿರಹಟ್ಟಿ ವ್ಯಾಪ್ತಿಯ ಮಾಗಡಿ, ಬನ್ನಿಕೊಪ್ಪ, ಕಡಕೊಳ, ಹೆಬ್ಬಾಳ, ಚವಡಾಳ, ಬೂದಿಹಾಳ, ಹೊಸರು, ಗೋಜನೂರು, ಯತ್ತಿನಹಳ್ಳಿ, ಮಾಡಳ್ಳಿ, ಬಾಳೆಹೊಸರು, ಆದ್ರಳ್ಳಿ, ಹುಲ್ಲೂರು, ಅಕ್ಕಿಗುಂದ ಮತ್ತು ಅಕ್ಕಿಗುಂದ ತಾಂಡಾಗಳಲ್ಲಿಜಲಕ್ಷಾಮದ ಭೀತಿ ಎದುರಾಗಿದೆ.
ಬಾಕ್ಸ್
ದೇಶದಲ್ಲೇ ಮೊದಲ ಬಾರಿಗೆ ಜಿಲ್ಲೆಯ ಎಲ್ಲಜನವಸತಿಗಳಿಗೆ ನದಿ ಮೂಲದಿಂದ ನೀರು ಪೂರೈಸುವ ಬಹುಗ್ರಾಮ ಯೋಜನೆ ಅನುಷ್ಠಾನಗೊಂಡಿದ್ದರೂ ನೀರಿನ ಬೇಡಿಕೆ ಮತ್ತು ಪೂರೈಕೆಯ ನಡುವೆ ದೊಡ್ಡ ವ್ಯತ್ಯಾಸವಿರುವ ಕಾರಣಕ್ಕೆ ಜಿಲ್ಲೆಯಲ್ಲಿಜಲಕ್ಷಾಮದ ಭೀತಿ ಎದುರಾಗಿದೆ.
ಕೋಟ್
ಜಿಲ್ಲಾಡಳಿತ ಬೇಸಿಗೆ ಪೂರ್ವದಲ್ಲಿಯೇ ತುರ್ತು ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಮಸ್ಯೆ ಎದುರಾಗಬಹುದಾದ ಗ್ರಾಮಗಳಲ್ಲಿನ ಕೆರೆಗಳಿಗೆ ಸಾಧ್ಯವಾದಷ್ಟು ನದಿ ನೀರನ್ನು ಭರ್ತಿ ಮಾಡಿಕೊಳ್ಳಬೇಕು ಮತ್ತು ಕೆಟ್ಟು ನಿಂತಿರುವ ಕೊಳವೆಬಾವಿಗಳನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು. ಜಿಲ್ಲೆಯ ಜನರಿಗೆ ಹಾಗೂ ಜಾನುವಾರುಗಳಿಗೆ ಬೇಸಿಗೆಯಲ್ಲಿಕುಡಿಯುವ ನೀರಿನ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ.
-ಯಲ್ಲಪ್ಪ ಬಾಬರಿ, ರೈತ ಮುಖಂಡ
ಫೋಟೊ: 6 ಸಲೀಮ 2, 2ಎ:
ಗದಗ ಗ್ರಾಮೀಣ ಭಾಗದಲ್ಲೂನೀರು ಪೂರೈಕೆಯಲ್ಲಿವ್ಯತ್ಯಯ ಉಂಟಾಗಿರುವುದು.

