ಇಂದು ಮಹಿಳಾ ದಿನಾಚರಣೆ

Contributed bychandruhiremath06@gmail.com|Vijaya Karnataka

ಕಲಬುರಗಿಯಲ್ಲಿ ಮಾ.9ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಲಿದೆ. ಭಾರತೀಯ ಮಹಿಳಾ ಒಕ್ಕೂಟ ಜಿಲ್ಲಾಸಮಿತಿಯು ಈ ಕಾರ್ಯಕ್ರಮವನ್ನು ಆಯೋಜಿಸಿದೆ. ನಗರದ ಕನ್ನಡ ಭವನದಲ್ಲಿ ಬೆಳಗ್ಗೆ 11ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ರೊಟ್ಟಿಕೇಂದ್ರದ ಉದ್ಯೋಗಿ ಮಹಾದೇವಿ ನಂದಿಕೋಲಮಠ ಮತ್ತು ಪತ್ರಕರ್ತೆ ಗೀತಾ ಹೊಸಮನಿ ಅವರಿಗೆ ಸನ್ಮಾನ ದೊರೆಯಲಿದೆ.

international womens day 2023 significant event in kalaburagi

ಇಂದು ಮಹಿಳಾ ದಿನಾಚರಣೆ

ಕಲಬುರಗಿ : ಭಾರತೀಯ ಮಹಿಳಾ ಒಕ್ಕೂಟ ಜಿಲ್ಲಾಸಮಿತಿಯಿಂದ ಮಾ.9ರಂದು ಬೆಳಗ್ಗೆ 11ಕ್ಕೆ ನಗರದ ಕನ್ನಡ ಭವನದಲ್ಲಿಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪದ್ಮರಾಜ ರಾಸಣಗಿ ಉದ್ಘಾಟಿಸಲಿದ್ದಾರೆ. ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಪದ್ಮಾವತಿ ಮಾಲಿಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ದಾನಮ್ಮ ಶಹಾಪುರೆ, ಮೀನಾಕ್ಷಿ ಬಾಬುರಾವ ಹಿಪ್ಪರಗಿ, ಯಶೋದಾ ರಾಠೋಡ, ಶಿವಲಿಂಗಮ್ಮ ಲೇಂಗಟಿಕರ್ , ವಿಜಯಲಕ್ಷ್ಮೇ ಯಳಸಂಗಿ ವಿದ್ಯಾಶ್ರೀ ಉಮೇಶ, ಮಹಾನಂದ ತುಕ್ಕಾಣಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರೊಟ್ಟಿಕೇಂದ್ರದ ಉದ್ಯೋಗಿ ಮಹಾದೇವಿ ನಂದಿಕೋಲಮಠ, ಪತ್ರಕರ್ತೆ ಗೀತಾ ಹೊಸಮನಿ ಅವರಿಗೆ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.