ವಿಕ ಸುದ್ದಿಲೋಕ ಕಡೂರು ಅಲ್ಲಮಪ್ರಭು ದೇವರು ಕನ್ನಡ ನಾಡು ಕಂಡ ಅಪರೂಪದ ಅನುಭಾವಿ ಎಂದು ಪ್ರಾಧ್ಯಾಪಕ ಡಾ. ಎಸ್ .ಎನ್ .ಆನಂದ್ ಹೇಳಿದರು. ತಾಲೂಕಿನ ಅಣ್ಣೀಗೆರೆಯಲ್ಲಿತಾಲೂಕು ಶರಣ ಸಾಹಿತ್ಯ ಪರಿಷತ್ , ಕದಳಿ ಮಹಿಳಾ ವೇದಿಕೆ, ಯಶಸ್ವಿನಿ ಯೋಗಸಂಸ್ಥೆ ಮತ್ತು ಅಣ್ಣೀಗೆರೆ ಗ್ರಾಮಸ್ಥರ ಸಹಯೋಗದಲ್ಲಿಏರ್ಪಡಿಸಿದ್ದ ಶರಣರ ಬೆಳದಿಂಗಳು ಉಪನ್ಯಾಸ ಮಾಲಿಕೆ ಮತ್ತು ಅಭಿನಂದನಾ ಸಮಾರಂಭದಲ್ಲಿಉಪನ್ಯಾಸ ನೀಡಿದರು. ಅಲ್ಲಮಪ್ರಭು ದೇವರು ಲೋಕದ ಜನರಂತೆ ಇದ್ದವರಲ್ಲ. ಅಲೆಮಾರಿಯಾಗಿದ್ದರು. ಲೋಕ ಸಂಚಾರಿಯಾದ ಅವರು ಎಲ್ಲಿಯೂ ನೆಲೆಯೂರಿ ನಿಂತವರಲ್ಲ. ಅಂತಹ ಅಲೆಮಾರಿಯನ್ನು ಕಟ್ಟಿಹಾಕಿ ಅನುಭವ ಮಂಟಪದ ಅಧ್ಯಕ್ಷರನ್ನಾಗಿ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹೇಳಿದರು. ಜನರಲ್ಲಿನ ಮೌಢ್ಯ ನಿವಾರಿಸಿ ಅವರಲ್ಲಿಅರಿವಿನ ಕಣ್ಣು ತೆರೆಸಿ ಅನುಭಾವಿಗಳನ್ನಾಗಿ ಮಾಡುವ ಉದ್ದೇಶ ಅಲ್ಲಮರದ್ದಾಗಿತ್ತು. 1636 ವಚನಗಳ ಮೂಲಕ ಅರಿವಿನ ಕಣ್ತೆರೆಸುವ ತೆರೆಸುವ ಕಾರ್ಯ ಮಾಡಿದ್ದಾರೆ. ಅವರು ಹುಟ್ಟಿ ಬೆಳೆದದ್ದು ಶಿಕಾರಿಪುರ ತಾಲೂಕಿನ ಬಳ್ಳಿಗಾವಿ ಯಾದರು ಅವರ ಕ್ಷೇತ್ರ ಜಗದಗಲ. ಅಂತಹ ಅಲ್ಲಮಪ್ರಭುವಿನ ಕಾರುಣ್ಯದಿಂದಲೇ ಅನುಭವ ಮಂಟಪಕ್ಕೆ ವಿಶೇಷ ಕಳೆ ಬಂದದ್ದು ಎಂದು ತಿಳಿಸಿದರು. ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಚಿನ್ನು ದೇವರಾಜ್ ಕಾರ್ಯಕ್ರಮ ಉದ್ಘಾಟಿಸಿ ದರು. ಅಂಚೆ ಇಲಾಖೆಯಲ್ಲಿಸೇವೆ ಸಲ್ಲಿಸಿ ನಿವೃತ್ತರಾದ ಗ್ರಾಮದ ಸಿ.ವಿರೂಪಾಕ್ಷಪ್ಪ, ಎಂ.ಈಶ್ವರಪ್ಪ, ತಾಲೂಕು ನೊಳಂಬ ಸಹಕಾರ ಸಂಘದ ನೂತನ ಅಧ್ಯಕ್ಷ ಕೆ.ಬಿ.ಬಸವರಾಜಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಎ.ಬಿ.ಈಶ್ವರಪ್ಪ, ಈಶ್ವರ ಸ್ವಾಮಿ ಭಜನ ಮಂಡಳಿ ಅವರನ್ನು ಗೌರವಿಸಲಾಯಿತು. ತಾಲೂಕು ಶಸಾಪ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತ ಜಡೆ ಮಲ್ಲಪ್ಪ, ಜಿಲ್ಲಾಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಆರ್ .ಪ್ರಕಾಶ್ , ಯಶಸ್ವಿನಿ ಯೋಗಸಂಸ್ಥೆ ಅಧ್ಯಕ್ಷ ಎ.ಎಂ.ಕುಮಾರಪ್ಪ, ಯೋಗ ಗುರು ಬಿ.ಸಿ.ದೇವೇಂದ್ರಪ್ಪ, ಉಪಾಧ್ಯಕ್ಷ ಕೆ.ಜಯಪ್ಪ, ಅಂಚೆ ಇಲಾಖೆ ಅಧೀಕ್ಷಕ ಬಿ.ಎಂ.ಶಂಕರಪ್ಪ, ಸಹಾಯಕ ಅಧೀಕ್ಷಕ ಗಂಗಪ್ಪ, ಎ.ಎಂ.ಶಿÊ Üಕುಮಾರ್ , ಗ್ರಾ.ಪಂ. ಮಾಜಿ ಅಧ್ಯಕ್ಷ ಎ.ಎಂ.ತಮ್ಮಯ್ಯ, ಎಂ.ವಸಂತಕುಮಾರ್ , ಎ.ಎಸ್ .ಅಶೋಕ್ , ಜಿ.ಟಿ.ರಾಜಶೇಖರ್ , ಕೆ.ಬಿ. ಸುನೀತಾ, ಎಸ್ .ಬಿ.ರಾಜಣ್ಣ, ಗಂಗಾಧರ ಶಿವ ಪುರ, ಚಂದ್ರಪ್ರಕಾಶ, ಮೋಹನ್ ಇದ್ದರು.

