ಗುರುವಾಯೂರು: ಗುರುವಾಯೂರು ದೇಗುಲದ ಉತ್ಸವದ ಪ್ರಮುಖ ತಾಂತ್ರಿಕ ಸಮಾರಂಭವಾದ ಉತ್ಸವಬಲಿ ವಿಧಿವಿಧಾನ ಶನಿವಾರ ಶಾಸ್ತೊ್ರೕಕ್ತವಾಗಿ ನೆರವೇರಿತು.
ಪಾಣಿಕೊಟ್ ್ಟ ಆಚರಣೆ ಮೂಲಕ ಗುರುವಾಯೂರಪ್ಪನ ಭೂತಗಣಗಳನ್ನು ಆಹ್ವಾನಿಸಿ ಬಲಿ ಅರ್ಪಿಸಿ ಅವರನ್ನು ತೃಪ್ತಿಪಡಿಸುವ ಉತ್ಸವ ಬಲಿ ಸಮಾರಂಭದಲ್ಲಿಸಾವಿರಾರು ಭಕ್ತರು ಭಕ್ತಿ ಭಾವದಿಂದ ಪಾಲ್ಗೊಂಡರು.
ಬೆಳಗ್ಗೆ ಪತ್ತಿರಡಿ ಪೂಜೆಯ ಬಳಿಕ ಸಮಾರಂಭ ಪ್ರಾರಂಭವಾಯಿತು. ತಂತ್ರಿ ಬ್ರಹ್ಮಶ್ರೀ ಚೆನ್ನಾಸ್ ದಿನೇಶನ್ ನಂಬೂದಿರಿಪಾಡ್ ಉಪಸ್ಥಿತಿಯಲ್ಲಿ ಅವರ ಪುತ್ರ ಕೃಷ್ಣನ್ ನಂಬೂದಿರಿಪಾಡ್ ಉತ್ಸವ ಬಲಿಯ ತಾಂತ್ರಿಕ ಆಚರಣೆಗಳನ್ನು ಪೂರ್ಣಗೊಳಿಸಿದರು.ಉತ್ಸವ ಬಲಿಯ ದರ್ಶನ ಪಡೆಯಲು ಮೂವತ್ತಮೂರು ಕೋಟಿ ದೇವತೆಗಳು ಗುರುವಾಯೂರು ದೇಗುಲಕ್ಕೆ ಆಗಮಿಸುವುದಾಗಿ ನಂಬಲಾಗಿದೆ. ಉತ್ಸವಬಲಿಯಂದು ಭಕ್ತರು, ಪ್ರಾಣಿಗಳು ಮತ್ತು ಮೀನುಗಳು ಹಸಿವಿನಿಂದ ಬಳಲಬಾರದು ಎಂಬ ಸಂಕಲ್ಪದೊಂದಿಗೆ ಆಹಾರ,ಧಾನ್ಯಗಳನ್ನು ನೀಡಲಾಯಿತು.
(8 ಪಿಎಲ್ ಉತ್ಸವ ಬಲಿ )

