ಸಿಂಗಲ್ ಸುಖಿ ಡೈಸಿ ಶಾ

Contributed bybabitha.salian@timesgroup.com|Vijaya Karnataka

ನಟಿ ಡೈಸಿ ಶಾ ಅವರು 41ನೇ ವಯಸ್ಸಿನಲ್ಲಿ ಸಿಂಗಲ್‌ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಕುಟುಂಬದ ಉದ್ದೇಶಕ್ಕೆ ಮದುವೆಯಾಗುವ ಅಗತ್ಯವಿಲ್ಲ ಎಂದಿದ್ದಾರೆ. ತಮ್ಮ ಅಂಡಾಣುಗಳನ್ನು ಫ್ರೀಜ್ ಮಾಡಿದ್ದು, ಬೇಕಾದಾಗ ತಾಯಿಯಾಗುವ ಸಾಮರ್ಥ್ಯ ತಮಗಿದೆ ಎಂದು ತಿಳಿಸಿದ್ದಾರೆ. ಹಿಂದಿನ ಸಂಬಂಧ ಕಹಿ ಅನುಭವ ನೀಡಿತ್ತು ಎಂದು ಹೇಳಿದ್ದಾರೆ. ಹಣದ ವಿಷಯದಲ್ಲಿ ಸ್ವಾವಲಂಬಿಯಾಗಿದ್ದೇನೆ ಎಂದಿದ್ದಾರೆ.

daisy shah i am single and happy no need for family

ಲವಲvk ಸುದ್ದಿ ಲೋಕ ್ಛಛಿಛಿdಚಿa್ಚk್ಝvkಃvಜ್ಜಿayka್ಟ್ಞaಠಿaka.್ಚಟಞ ಕನ್ನಡದ ‘ಭದ್ರ’, ‘ಬಾಡಿಗಾರ್ಡ್ ’, ‘ಗಜೇಂದ್ರ’, ‘ಬಚ್ಚನ್ ’, ‘ಆಕ್ರಮಣ’ ಸಿನಿಮಾಗಳಲ್ಲಿನಟಿಸಿರುವ ಡೈಸಿ ಶಾ ತಾವು ಸಿಂಗಲ್ ಆಗಿಯೇ ಸಂತೋಷವಾಗಿದ್ದೇನೆ ಎಂದಿದ್ದಾರೆ. ತಮಗೀಗ 41 ವರ್ಷ. ನನ್ನ ಅಂಡಾಣುಗಳನ್ನು ಆಗಲೇ ಫ್ರೀಜ್ ಮಾಡಿದ್ದೇನೆ. ಕುಟುಂಬ ಹೊಂದುವ ಉದ್ದೇಶಕ್ಕೆ ಮದುವೆಯಾಗುವ ಅಗತ್ಯ ತಮಗಿಲ್ಲಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಸಂದರ್ಶನ ಒಂದರಲ್ಲಿವೈಯಕ್ತಿಕ ಬದುಕಿನ ಬಗ್ಗೆ

ಮಾತನಾಡುತ್ತಿದ್ದ ಅವರು, ‘ನನ್ನ ಬದುಕಿನಲ್ಲಿನನಗೆ ಪುರುಷನ ಅಗತ್ಯವಿದೆ ಎಂದು ಅನಿಸುವುದಿಲ್ಲ. ಹಣದ ವಿಷಯದಲ್ಲಿನಾನು ನನಗಾಗಿ ಚೆನ್ನಾಗಿ ಸಂಪಾದನೆ ಮಾಡುತ್ತಿದ್ದೇನೆ. ಮದುವೆಯ ನೆಪದಲ್ಲಿನಾನು ಬೆಳೆದ ಪುರುಷನೊಬ್ಬನ ತಾಯಿಯಾಗಲಾರೆ. ಸಿಹಿ ಮಾತುಗಳು ಮೊದಲಿಗೆ ಚೆನ್ನಾಗಿ ಅನಿಸುತ್ತವೆ, ಆದರೆ ನಂತರ ಅವು ನೀರಸವೆನಿಸುತ್ತವೆ’ ಎಂದಿದ್ದಾರೆ. ‘ಪ್ರತಿದಿನವೂ ನನ್ನ ಸುತ್ತಮುತ್ತ ಏನಾದರೊಂದು ಆಗುತ್ತಿರುತ್ತದೆ. ಕೆಲವು ದಂಪತಿ ಪರಸ್ಪರ ದೂರವಾಗುತ್ತಿದ್ದಾರೆ. ಇವೆಲ್ಲಭಯ ಹುಟ್ಟಿಸುತ್ತದೆ. ಈ ವಿಷಯದಲ್ಲಿನಾನು ತುಂಬಾ ಪ್ರ್ಯಾಕ್ಟಿಕಲ್ ಮತ್ತು ಸ್ವತಂತ್ರ ದೃಷ್ಟಿಕೋನ ಹೊಂದಿದ್ದೇನೆ. ಅಲ್ಲದೆ ನನ್ನ ಅಂಡಾಣುಗಳನ್ನು ಫ್ರೋಝನ್ ಮಾಡಿದ್ದೇನೆ. ಆದ್ದರಿಂದ ನಾನು ನನಗೆ ಬೇಕೆಂದಾಗ ತಾಯಿಯಾಗಬಲ್ಲೆ’ ಎಂದು ವಿವರಿಸಿ ದ್ದಾರೆ ಡೈಸಿ ಶಾ. ತಮ್ಮ ಹಿಂದಿನ ರಿಲೇಶನ್ ಶಿಪ್ ಕಹಿ ಅನುಭವ ನೀಡಿತ್ತು ಎಂದಿರುವ ಅವರು, ಮಾಜಿ ಸಂಗಾತಿ ತಮಗೆ ನಟ ರೊಂದಿಗೆ ಅಭಿನಯಿಸಲು ನಿರ್ಬಂಧಿಸಿದ್ದ ಎಂದು ತಿಳಿಸಿದ್ದಾರೆ.