ಅಪೂರ್ವ ಹೋಮ್ ಸ್ಟೇ ಆರಂಭ

Contributed byBASAVARAJU KG|Vijaya Karnataka

ದಾವಣಗೆರೆ ಹೊರವಲಯದ ಮಲ್ಲಶೆಟ್ಟಿಹಳ್ಳಿ ಬಳಿ ಅಪೂರ್ವ ಹೋಮ್‌ ಸ್ಟೇ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಇದನ್ನು ಉದ್ಘಾಟಿಸಿದರು. 7 ಎಕರೆ ಜಾಗದಲ್ಲಿ ನಿರ್ಮಾಣವಾದ ಈ ಹೋಮ್‌ ಸ್ಟೇಯಲ್ಲಿ ಪ್ರವಾಸಿಗರಿಗೆ ಎಲ್ಲ ಸೌಲಭ್ಯಗಳಿವೆ. ಮಣ್ಣಿನ ಮಡಿಕೆಯಲ್ಲಿ ಆಂಧ್ರ ಶೈಲಿಯ ಅಡುಗೆಯೂ ಇಲ್ಲಿ ಲಭ್ಯವಿದೆ. ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಇದರ ಮಾಲೀಕರಾಗಿದ್ದಾರೆ.

inauguration of apoorva home stay by ss mallikarjun
ದಾವಣಗೆರೆ : ನಗರದ ಹೊರವಲಯದ ಮಲ್ಲಶೆಟ್ಟಿಹಳ್ಳಿ ಬಳಿ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಅವರ ' ಅಪೂರ್ವ ಹೋಮ್‌ ಸ್ಟೇ 'ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಭಾನುವಾರ ಸಂಜೆ ಉದ್ಘಾಟಿಸಿದರು. 7 ಎಕರೆ ವಿಶಾಲವಾದ ಜಾಗದಲ್ಲಿ, ಪ್ರಕೃತಿಯ ಮಡಿಲಲ್ಲಿ ನಿರ್ಮಾಣವಾಗಿರುವ ಈ ಹೋಮ್‌ ಸ್ಟೇ ಪ್ರವಾಸಿಗರಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸಿದ್ದು, ಮಣ್ಣಿನ ಮಡಿಕೆಯಲ್ಲಿ ತಯಾರಿಸುವ ಆಂಧ್ರ ಶೈಲಿಯ ಅಡುಗೆ ಇದರ ವಿಶೇಷತೆಯಾಗಿದೆ.

ಸಚಿವರು ಹೋಮ್‌ ಸ್ಟೇ ಉದ್ಘಾಟಿಸಿ, ರಾಜಣ್ಣ ಅವರಿಗೆ ಶುಭ ಹಾರೈಸಿದರು. ಅವರು ಮಾತನಾಡಿ, "ಸಿರಿಗೆರೆ ಹಾಸ್ಟೆಲ್‌ನಲ್ಲಿ ಹೋಟೆಲ್ ಆರಂಭಿಸಿದ ಅಣಬೇರು ರಾಜಣ್ಣನವರು, ದರ್ಶನ್‌ ಲಾಡ್ಜ್‌ ಬಳಿ, ತ್ರಿಶೂಲ್‌ ಚಿತ್ರಮಂದಿರದ ಎದುರು ಹೋಟೆಲ್‌ಗಳನ್ನು ತೆರೆದಿದ್ದರು. ಬಳಿಕ ಅಪೂರ್ವ ರೆಸಾರ್ಟ್‌ ಆರಂಭಿಸಿ, ಈಗ ಅಪೂರ್ವ ಹೋಮ್‌ ಸ್ಟೇಯನ್ನೂ ಪ್ರಾರಂಭಿಸಿದ್ದಾರೆ" ಎಂದು ಅವರ ಉದ್ಯಮಶೀಲತೆಯನ್ನು ಶ್ಲಾಘಿಸಿದರು.
ಅಪೂರ್ವ ಹೋಮ್‌ ಸ್ಟೇ ಮಾಲೀಕ ಅಣಬೇರು ರಾಜಣ್ಣ ಅವರು, ದಾವಣಗೆರೆಗೆ ದಿ. ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು. "ಕೈಗಾರಿಕೆ, ಶಿಕ್ಷಣ, ವ್ಯಾಪಾರ, ರಾಜಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದಾರೆ. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಸಚಿವರಾಗಿ ಅತ್ಯುತ್ತಮ ಮತ್ತು ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ" ಎಂದು ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಲೆಕ್ಕ ಪರಿಶೋಧಕ ಅಥಣಿ ಎಸ್‌.ವೀರಣ್ಣ, ದೂಡಾ ಅಧ್ಯಕ್ಷ ದಿನೇಶ್‌ ಶೆಟ್ಟಿ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ಉದ್ಯಮಿ ಎಸ್‌.ಕೆ. ವೀರಣ್ಣ, ಆರ್‌.ಎಚ್‌. ಶೇಖರಪ್ಪ, ಬೆನಕಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ದಾವಣಗೆರೆ ಹೊರವಲಯದ ಮಲ್ಲಶೆಟ್ಟಿಹಳ್ಳಿ ಬಳಿ ನಿರ್ಮಾಣಗೊಂಡಿರುವ ಈ ಅಪೂರ್ವ ಹೋಮ್‌ ಸ್ಟೇ ಪ್ರವಾಸಿಗರಿಗೆ ಹೊಸ ಅನುಭವ ನೀಡುವ ನಿರೀಕ್ಷೆಯಿದೆ.