ವಾರದಲ್ಲೇ ಸಂಚಾರಕ್ಕೆ ಅನುಕೂಲ ಮಾಡಿಕೊಡಿ

Contributed byn.narayanor101@gmail.com|Vijaya Karnataka

ಯಾದಗಿರಿ ಜಿಲ್ಲೆಯ ಕಂದಳ್ಳಿ ಬ್ರಿಜ್‌ ಕಂ ಬ್ಯಾರೇಜ್‌ ಸಂಪರ್ಕ ರಸ್ತೆ ಭೀಮಾ ನದಿ ಪ್ರವಾಹದಿಂದ ಹಾನಿಗೊಂಡಿದೆ. ವಡಗೇರಾ ತಾಲೂಕು ಮತ್ತು ಸುತ್ತಲಿನ ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ ಅವರು ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡಿದ್ದಾರೆ. ದುರಸ್ತಿ ಮಾಡದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಕೃಷಿ ಕಾರ್ಯಕ್ಕೆ ಅನುಕೂಲ ಮಾಡಿಕೊಂಡಿದ್ದಾರೆ.

kandalli bridge connectivity road severely affected by bhima river flood

ಚಿತ್ರ : 10ವೈರುಲ-1:

ಭೀಮಾ ನದಿ ಪ್ರವಾಹದಿಂದ ಕಡಿತಗೊಂಡಿರುವ ಕಂದಳ್ಳಿ ಬ್ರಿಜ್ ಕಂ ಬ್ಯಾರೇಜ್ ನ ಎರಡೂ ಬದಿಯ ಸಂಪರ್ಕ ರಸ್ತೆಯ ದುರಸ್ತಿಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ ನೇತೃತ್ವದಲ್ಲಿಜಿಲ್ಲಾಡಳಿತಕ್ಕೆ ಆಗ್ರಹಿಸಲಾಯಿತು.

* ಕಂದಳ್ಳಿ ಬ್ರಿಜ್ ಕಂ ಬ್ಯಾರೇಜ್ ಸಂಪರ್ಕ ರಸ್ತೆ ಕಡಿತ | ದುರಸ್ತಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ ಆಗ್ರಹ

ವಾರದಲ್ಲೇ ಸಂಚಾರಕ್ಕೆ ಅನುಕೂಲ ಮಾಡಿಕೊಡಿ

ವಿಕ ಸುದ್ದಿಲೋಕ ಯಾದಗಿರಿ ಗ್ರಾಮೀಣ

ಜಿಲ್ಲೆಯ ಕಂದಳ್ಳಿ ಬ್ರಿಜ್ ಕಂ ಬ್ಯಾರೇಜ್ ಸಂಪರ್ಕ ರಸ್ತೆ ಕಡಿತಗೊಂಡಿದ್ದು, ವಾರದಲ್ಲೇ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ ಆಗ್ರಹಿಸಿದ್ದಾರೆ.

ಮುಂಗಾರಿನಲ್ಲಿಮಹಾರಾಷ್ಟ್ರದಲ್ಲಿಸುರಿದ ಭಾರಿ ಮಳೆಯಿಂದ ಉಂಟಾಗಿದ್ದ ಭೀಮಾ ನದಿ ಪ್ರವಾಹದಿಂದ ಕಂದಳ್ಳಿ ಬ್ರಿಜ್ ಕಂ ಬ್ಯಾರೇಜ್ ನ ಎರಡೂ ಬದಿಯ ರಸ್ತೆಗಳು ಸಂಪೂರ್ಣವಾಗಿ ಕಿತ್ತುಹೋದ ಪರಿಣಾಮ ವಡಗೇರಾ ತಾಲೂಕು ಕೇಂದ್ರ ಒಳಗೊಂಡಂತೆ ಅದರ ವ್ಯಾಪ್ತಿಯ ಬಿಳ್ಹಾರ, ಕಂದಳ್ಳಿ, ಮಾಚನೂರು, ಬೆನಕನಳ್ಳಿ ಸೇರಿ ಹತ್ತಾರು ಗ್ರಾಮಗಳ ಜನರು ಸೈದಾಪುರ ಹಾಗೂ ಸುತ್ತಲಿನ ಗ್ರಾಮಗಳ ಮಧ್ಯೆ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಭೇಟಿ ನೀಡಿದ ಮುದ್ನಾಳ ನೇತೃತ್ವದ ತಂಡ ರೈತರ ಜತೆ ಸೇರಿ ತಗ್ಗು ಗುಂಡಿಗಳ ಮಧ್ಯೆ ಕುಂಟಲೀಪಿ ಆಟ ಆಡುವ ಮುಖಾಂತರ ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಸಿದರು. ಆದರೆ ಆರೇಳು ತಿಂಗಳು ಕಳೆದರೂ ದುರಸ್ತಿಗೆ ಮುಂದಾಗದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ಒಂದು ವಾರ ಗಡುವು ನೀಡಿದ್ದು, ವಿಫಲವಾದಲ್ಲಿಬೃಹತ್ ಪ್ರತಿಭಟನೆ ಮಾಡುವುದಾಗಿ ಗುಡುಗಿದ್ದಾರೆ.

ಇದೇ ಸಂದರ್ಭದಲ್ಲಿಮಾಣಿಕರಡ್ಡಿ ಪಾಟೀಲ್ , ಹಣಮಂತ, ಸುನೀಲ್ ಶೆಟ್ಟಿ, ಬನ್ನಪ್ಪ, ನಬಿಸಾಬ್ , ಭೀಮರಾಯ, ಪವನ, ಶರಣಪ್ಪ, ಸಾಬಣ್ಣ, ಮರಿಲಿಂಗಪ್ಪ, ಮಲ್ಲಪ್ಪ, ಪ್ರಭು, ಮರೆಪ್ಪ, ಭೀಮಾಶಂಕರ, ರೆಡ್ಡೆಪ್ಪ, ಸತೀಶ, ಮೋನಪ್ಪ, ಭಾಗಪ್ಪ, ಸಿದ್ದಪ್ಪ, ಬನ್ನಪ್ಪ, ಬಸಪ್ಪ, ಮಹಾದೇವಪ್ಪ, ಹಣಮಂತ, ಜಗದೀಶ, ಬನ್ನಪ್ಪ, ಸುರೇಶ, ಚಂದ್ರು, ಶಾಂತಪ್ಪ, ಹಸೇನ, ಗಂಗು, ಅನೀಲ್ , ಭೀಮಣ್ಣ, ಮೆಹಬೂಬಸಾಬ್ , ಶರಣಪ್ಪ ನಿಂಗಪ್ಪ, ಕಲ್ಲಪ್ಪ, ಶಾಂತಪ್ಪ, ಮಲ್ಲಪ್ಪ, ಮರಗಪ್ಪ, ದೇವಪ್ಪ, ಬನ್ನಪ್ಪ, ಕುಮಾರ, ನರಸಪ್ಪ, ಬೂದೆಪ್ಪ, ಸುರೇಶ, ರವಿ, ತಾಯಪ್ಪ, ಭರತ್ , ಪೀರಮಹ್ಮದ್ , ದೇವಪ್ಪ, ಶಿವಾನಂದ ಸೇರಿ ರೈತರು ಭಾಗವಹಿಸಿದ್ದರು.

* ಕೋಟ್

ಮಹಾ ಮಳೆಗೆ ಭೀಮಾ ಪ್ರವಾಹ ಬಂದು ರಸ್ತೆ ಕಡಿತಗೊಂಡು ಸಾರಿಗೆ ಬಸ್ ಗಳ ಸಂಚಾರ ಬಂದ್ ಆಗಿದೆ. ರೈತರೇ ಸ್ವಂತ ಹಣ ಖರ್ಚು ಮಾಡಿ ಕೃಷಿ ಕಾರ್ಯಕ್ಕೆ ಜಮೀನುಗಳಿಗೆ ಟ್ರ್ಯಾಕ್ಟರ್ ಸಂಚರಿಸಲು ಅನುಕೂಲ ಮಾಡಿಕೊಂಡಿದ್ದಾರೆ. ಆದರೆ ಇತರ ವಾಹನಗಳ ಸಂಚಾರ ಸಂಪೂರ್ಣ ಕಡಿತಗೊಂಡಿದ್ದು, ಆರೇಳು ತಿಂಗಳಾದರು ದುರಸ್ತಿಗೆ ಮುಂದಾಗದಿರುವುದು ನೋವಿನ ಸಂಗತಿ, ಮುಂದಿನ ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಡಳಿತದ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲಾಗುವುದು.

-ಉಮೇಶ ಕೆ. ಮುದ್ನಾಳ, ಸಾಮಾಜಿಕ ಹೋರಾಟಗಾರರು, ಯಾದಗಿರಿ