*ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ ಹೇಳಿಕೆ
ವಿಕ ಸುದ್ದಿಲೋಕ ಅರಸೀಕೆರೆ
ಹಿಂದೂ ಧರ್ಮವು ಸನಾತನ ಧರ್ಮವಾಗಿದ್ದು, ನಾನಾ ವೈವಿಧ್ಯತೆಗಳಿಂದ ಕೂಡಿದೆ. ಮಹನೀಯರ ಆದರ್ಶಗಳ ಅಡಿಯಲ್ಲಿದೇಶದ ಒಳಿತಿಗಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ನಗರದ ಬಿ.ಎಚ್ . ರಸ್ತೆಯಲ್ಲಿರುವ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಹಿಂದೂ ಮಹಾ ಸಂಗಮ ಆಯೋಜನಾ ಸಮಿತಿ ಆಯೋಜಿಸಿದ್ದ ಬೃಹತ್ ಹಿಂದೂ ಮಹಾ ಸಂಗಮ ಸಮಾವೇಶದಲ್ಲಿಮಾತನಾಡಿದರು.
‘‘ಹಿಂದೂ ಧರ್ಮದ ಒಳಿತಿಗಾಗಿ 12ನೇ ಶತಮಾನದಲ್ಲಿಬಸವಣ್ಣನವರು ಶ್ರಮಿಸಿದ್ದಾರೆ. ನಾವು ದೇಶದ ಒಳಿತಿಗಾಗಿ ಸಂಘಟಿತರಾಗಿ, ನಮ್ಮ ಆಚಾರ, ವಿಚಾರ, ಧರ್ಮದ ಉಳಿವಿಗಾಗಿ ಶ್ರಮಿಸಬೇಕು,’’ ಎಂದರು.
ಯಶನಡು ಮಹಾಸಂಸ್ಥಾನ ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘‘ನಮ್ಮ ಧರ್ಮ ವಿಶ್ವಕ್ಕೆ ಶಾಂತಿ ನೀಡುವ ಧರ್ಮವಾಗಿದೆ. ಇತ್ತೀಚಿನ ದಿನಗಳಲ್ಲಿಜಾತಿ, ಜಾತಿಗಳ ನಡುವೆ ವೈಷಮ್ಯ ಹೆಚ್ಚುತ್ತಿರುವುದು ಸರಿಯಲ್ಲ. ನಮ್ಮ ಸಂಸ್ಕೃತಿ, ಸಂಸ್ಕಾರಗಳ ಉಳಿವಿಗಾಗಿ ಸತತ ಪ್ರಯತ್ನ ಅಗತ್ಯ. ಇಂದಿನ ಧರ್ಮ ಸಂಗಮ, ಮುಂದಿನ ಭವ್ಯ ಭಾರತ ನಿರ್ಮಾಣಕ್ಕೆ ಶಕ್ತಿಯಾಗಲಿ,’’ ಎಂದು ಹೇಳಿದರು.
ಯುವ ಬ್ರಿಗೇಡ್ ನ ಸಂಸ್ಥಾಪಕ ಹಾಗೂ ಸಾಮಾಜಿಕ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ‘‘ಹಿಂದೂ ಧರ್ಮ ಪ್ರಾಚೀನ ಧರ್ಮವಾಗಿದೆ. ವೇದಗಳು, ಪುರಾಣ, ರಾಮಾಯಣ, ಮಹಾಭಾರತ, ಆಗಮಶಾಸ್ತ್ರಗಳು ನಮ್ಮದೇ ಆಗಿದೆ. ಹೆಜ್ಜೆ ಹೆಜ್ಜೆಗೂ ನಮ್ಮ ಆದರ್ಶ ಪುರುಷರು ಮಾರ್ಗದರ್ಶನ ನೀಡಿದ್ದು, ಸಕಲರು ಚೆನ್ನಾಗಿರಲಿ ಎಂದು ಹೇಳುವ ಧರ್ಮ ನಮ್ಮದು,’’ ಎಂದರು.
‘‘ಭಾರತ ದೇಶ ಕಟ್ಟಲು ಎಲ್ಲರೂ ಸಂಘಟಿತರಾಗಬೇಕಿದೆ. ಜಗತ್ತಿನ 4ನೇ ಶ್ರೀಮಂತ ರಾಷ್ಟ್ರವಾಗಿ ಭಾರತ ನಿಂತಿದ್ದು, ಹಿಂದೂ ಸಮಾಜ ಒಟ್ಟಾದರೇ ಜಗತ್ತಿಗೆ ಬೆಳಕು ನೀಡಲಿದ್ದಾರೆ. ಇಂದು ಹಿಂದೂ ಎಂದರೆ ಜಗತ್ತೇ ಗೌರವಿಸುವ ಕಾಲವಾಗಿದೆ. ಜಗತ್ತಿಗೆ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಗಣಿತ, ಮಾನವಶಾಸ್ತ್ರ, ವಿಜ್ಞಾನವನ್ನು ಹೇಳಿಕೊಟ್ಟವರು ಹಿಂದೂಗಳು, ನಾವೆಲ್ಲರೂ ಜಾತಿ ವ್ಯವಸ್ಥೆಯನ್ನು ಬಿಟ್ಟು ಹೊರಬರಬೇಕಿದೆ,’’ ಎಂದು ಹೇಳೀದರು.
‘‘ರಾಜ್ಯದಲ್ಲಿಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಎಫ್ ಐಆರ್ ಹಾಕುವ ಕಾಲವಾಗಿದೆ. ಈಗಾಗಲೇ ರಾಜ್ಯದಲ್ಲಿ3 ಸಾವಿರ ಹಿಂದೂ ಸಮಾವೇಶ ನಡೆದಿದೆ. ವರ್ಷಾಂತ್ಯದಲ್ಲಿ80 ಸಾವಿರದಿಂದ 1 ಲಕ್ಷ ಸಮಾವೇಶಗಳು ನಡೆಯಲಿದ್ದು, ರಾಜ್ಯದಲ್ಲಿಹಿಂದೂ ಸಂಘಟನೆಯಾಗಲಿದೆ,’’ ಎಂದರು.
ದೊಡ್ಡಮೇಟಿಕುರ್ಕೆ ಬೂದಿಹಾಳ್ ವಿರಕ್ತ ಮಠದ ಶಶಿಶೇಖರ ಸಿದ್ಧಬಸವ ಸ್ವಾಮೀಜಿ, ಬಂಜಾರ ಪೀಠ ಚಿತ್ರದುರ್ಗದ ಸರ್ದಾರ್ ಸೇವಾಲಾಲ್ ಶ್ರೀ, ಮಾರುತಿ ಸಚ್ಚಿದಾನಂದ ಆಶ್ರಮದ ಸತೀಶ್ ಶರ್ಮಾ ಗುರೂಜಿ, ಸಮಿತಿ ಅರುಣ್ ಕುಮಾರ್ , ನವೀನ್ ಕಟ್ಟೆಹಳ್ಳಿ, ಪಾರಸ್ , ರವಿ, ನವರತನ್ , ವಿವೇಕಾನಂದ ಮಹಿಳಾ ಸಂಘದವರು ಹಾಜರಿದ್ದರು.
ಬಾಕ್ಸ್
ನಗರದಲ್ಲಿಅದ್ಧೂರಿ ಶೋಭಾಯಾತ್ರೆ
ನಗರದಲ್ಲಿಹಿಂದೂ ಮಹಾ ಸಂಗಮ ಆಯೋಜನಾ ಸಮಿತಿ ಆಯೋಜಿಸಲಾಗಿದ್ದ ಬೃಹತ್ ಹಿಂದೂ ಮಹಾ ಸಂಗಮ ಸಮಾವೇಶದ ಮೆರವಣಿಗೆಯಲ್ಲಿನೂರಾರು ಮಂದಿ ಭಾಗವಹಿಸಿದ್ದರು.
ಹಿಂದೂ ಸಮಾಜದ ಶೋಭಾ ಯಾತ್ರೆಗೆ ಹಾಸನ ರಸ್ತೆಯ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿಯಾದಪುರ ಶ್ರೀ ಜೇನುಕಲ್ಲುಸಿದ್ದೇಶ್ವರ ಸ್ವಾಮಿ, ಚಲ್ಲಾಪುರದ ಶ್ರೀಮಲ್ಲಿಕಾರ್ಜುನ ಸ್ವಾಮಿ ಹಾಗೂ ಬಂಡಿಹಳ್ಳಿ ಶ್ರೀರೇವಣ್ಣ ಸಿದ್ದೇಶ್ವರ ಸ್ವಾಮಿ ಮತ್ತು ಗ್ರಾಮ ದೇವತೆಗಳಾದ ಶ್ರೀಕರಿಯಮ್ಮ ದೇವಿ ಮತ್ತು ಶ್ರೀಮಲ್ಲಿಗಮ್ಮ ದೇವಿಯವರನ್ನು ಅಲಂಕೃತ ಮಂಟಪದಲ್ಲಿಕುಳ್ಳಿರಿಸಿ ಮೆರವಣಿಗೆಯಲ್ಲಿಕೊಂಡೊಯ್ಯಲಾಯಿತು.
ನಗರದ ಪ್ರಮುಖ ರಸ್ತೆಗಳಲ್ಲಿಶೋಭಾಯಾತ್ರೆ ಸಾಗಿತು. ಈ ಸಂದರ್ಭದಲ್ಲಿಭಾರತ ಮಾತೇ ಭಾವಚಿತ್ರದೊಂದಿಗೆ, ವಿವಿಧ ಜಾನಪದ ಕಲಾ ತಂಡಗಳು ಮತ್ತು ದೇಶ ಭಕ್ತರ ಸ್ತಬ್ಧ ಚಿತ್ರಗಳು, ಮಕ್ಕಳ ವೇಷಭೂಷಣ ಎಲ್ಲರ ಗಮನ ಸೆಳೆಯಿತು.
ಮೆರವಣಿಗೆಯುದ್ದಕ್ಕೂ ಸಾರ್ವಜನಿಕರು ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು. ಜತೆಯಲ್ಲಿಸಿಹಿ ಪಾನೀಯ, ಅನ್ನಸಂತರ್ಪಣೆ ಮಾಡಿದರು. ನಗರಾದ್ಯಾಂತ ಬಂಟಿಂಗ್ಸ್ ಗಳು ರಸ್ತೆಯುದ್ದಕ್ಕೂ ರಾರಾಜಿಸುತ್ತಿದ್ದವು.
*ಫೋಟೊ ಇದೆ
ಏಖN02ಅಖಓಧಿP02: ಅರಸೀಕೆರೆ ನಗರದಲ್ಲಿಹಿಂದೂ ಮಹಾ ಸಂಗಮ ಸಮಾವೇಶದ ಹಿನ್ನೆಲೆ ಸ್ವಾಮೀಜಿಗಳು, ಸಾರ್ವಜನಿಕರು ಶೋಭಾಯಾತ್ರೆಯಲ್ಲಿಭಾಗವಹಿಸಿದ್ದರು.
ಏಖN09ಅಖಓಧಿP01: ಅರಸೀಕೆರೆ ಹಿಂದೂ ಮಹಾ ಸಂಗಮ ಆಯೋಜನಾ ಸಮಿತಿ ಆಯೋಜಿಸಿದ್ದ ಬೃಹತ್ ಹಿಂದೂ ಮಹಾ ಸಂಗಮ ಸಮಾವೇಶದ ಉದ್ಘಾಟನೆಯನ್ನು ಶ್ರೀಗಳು ಹಾಗೂ ಗಣ್ಯರು ನೆರವೇರಿಸಿದರು.

