ವಿಕ ಸುದ್ದಿಲೋಕ ಚಿಂತಾಮಣಿ
ತಾಲೂಕಿನ ಕೆ. ರಾಘುಟ್ಟಹಳ್ಳಿಯಲ್ಲಿನೆಲೆಸಿರುವ ಶ್ರೀಲಕ್ಷ್ಮೇನರಸಿಂಹಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ ಮಾತನಾಡಿ, ಶ್ರೀ ಲಕ್ಷ್ಮೇನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು, ಬೆಳಗ್ಗೆಯಿಂದಲೂ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಮುಖ್ಯ ವಿಷಯವೇನೆಂದರೆ, ಕೋಟಗಲ್ ಬ್ರಹ್ಮರಥೋತ್ಸವ ಮುಗಿದ ಮೇಲೆ ದೇವಸ್ಥಾನದ ತೀರ್ಥವು ಕದರಿ ದೇವಸ್ಥಾನಕ್ಕೆ ತಲುಪುತ್ತದೆ, ತದನಂತರ ಕದಿರಿಯಲ್ಲಿರಥೋತ್ಸವ ಚಾಲನೆಯಾಗುತ್ತದೆ. ಇದು ಈ ದೇವಸ್ಥಾನದ ವಿಶೇಷತೆ ಎಂದರು.
ಈ ದೇವಸ್ಥಾನಕ್ಕೆ ನಾನು ಸುಮಾರು 17 ವರ್ಷಗಳಿಂದ ಬರುತ್ತಿದ್ದು, ಪ್ರತಿ ವರ್ಷ ಬ್ರಹ್ಮರಥೋತ್ಸವದಲ್ಲಿಭಾಗವಹಿಸಿ ದೇವರ ಕೃಪೆಗೆ ಪಾತ್ರನಾಗುತ್ತಿದ್ದೇನೆ. ಈ ದೇವಾಲಯದಲ್ಲಿದಿನೇದಿನೆ ಭಕ್ತರ ಸಂಖ್ಯೆ ಹೆಚ್ಚುಗುತ್ತಿದ್ದು, ಬಹಳ ವಿಜೃಂಭಣೆಯಿಂದ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.
ಈ ದಿನ ವಿಶೇಷವಾಗಿ ದೇವರಿಗೆ ಪೂಜೆ ಸಲ್ಲಿಸಿದ್ದು ಒಳ್ಳೆ ಮಳೆ, ಬೆಳೆ, ಜಾನುವಾರುಗಳಿಗೆ ಮೇವು, ಸುಖ, ಶಾಂತಿ ನೆಮ್ಮದಿ ನೆಲಸಲಿ ಎಂದು ದೇವರಲ್ಲಿವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ. ಈ ಸ್ಥಳವು ಬಹಳ ಪವಿತ್ರ ಸ್ಥಳವಾಗಿದ್ದು, ದೇವರಲ್ಲಿಭಕ್ತಾದಿಗಳು ಏನೇ ಇಷ್ಟಾರ್ಥ ಬೇಡಿಕೊಂಡರೂ, ಆದಷ್ಟು ಬೇಗ ನೆರವೇರಲಿ ಎಂದು ದೇವರಲ್ಲಿಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಆರ್ .ಎಂ.ಜಿ. ಜಯರಾಮಪ್ಪ, ಅಬ್ಬುಗುಂಡ ಮಧು, ವೆಂಕಟರವಣಪ್ಪ ಸೊಣ್ಣಶೆಟ್ಟಳ್ಳಿ, ಗುಡಿ ಶ್ರೀನಿವಾಸ್ ರೆಡ್ಡಿ, ಚಿಮಲ್ ನಿರ್ದೇಶಕ ಕೃಷ್ಣಾರೆಡ್ಡಿ, ಜೆಕೆ ಆಪ್ತ ಸಹಾಯಕ ವೇಣು, ವಾನಿ ಟ್ರೇಡರ್ಸ್ ನ ನಾರಾಯಣಸ್ವಾಮಿ, ಕೆ. ರಾಗುಟ್ಟಹಳ್ಳಿ, ದಂಡೋರ ರಾಮಪ್ಪ, ತಿಪ್ಪನಹಳ್ಳಿ ಶಂಕರಪ್ಪ, ನರಸಾಪುರ ನಾಗರಾಜ್ , ಏನ್ ಕೊತ್ತೊರು ಆನಂದ, ವೀರಪಲ್ಲಿಶಂಕರರೆಡ್ಡಿ, ದೊಡ್ಡಪುರ ಮಂಜುನಾಥ್ , ವಕೀಲ ಸುಬ್ರಮಣಿ ಕೋಟಗಲ್ , ಮೊದಲೇಟಿ ನರಸಿಂಹಯ್ಯ, ಕೊತ್ತೂರು ದಾಸಪ್ಪ, ಕೆರಾಗುಟ್ಟಹಳ್ಳಿ ರಾಘವೇಂದ್ರ, ಸುಬ್ರಮಣಿ, ನರಸಾಪುರ ಶ್ರೀನಿವಾಸ್ , ಪ್ರಕಾಶ್ , ಕುರಮಾರ್ಲಹಳ್ಳಿ ವೆಂಕಟಪತಿ ವೆಂಕಟರವಣಪ್ಪ ಉಪಸ್ಥಿತರಿದ್ದರು.
09ಸಿಎಮ್ ವೈವಿ1
ಚಿಂತಾಮಣಿ ತಾಲೂಕಿನ ಕೆ. ರಾಗುಟ್ಟಹಳ್ಳಿಯ ಶ್ರೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವದಲ್ಲಿಜೆಡಿಎಸ್ ಕೋರ್ ಸಮಿತಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ ಭಾಗವಹಿಸಿದ್ದರು.

