ಶಶಿಧರ್ ಎಸ್ .ದೋಣಿಹಕ್ಲುತುಮಕೂರು shashಜಿda್ಟa.dsಃಠಿಜಿಞಛಿsಟ್ಛಜ್ಞಿdಜಿa.್ಚಟಞ ಗ್ರೇಟರ್ ತುಮಕೂರು ಕನಸಿಗೆ ‘ಬಜೆಟ್ ’ ನಿರೀಕ್ಷೆಗಳು ಸಾಕಷ್ಟಿವೆ. ಟೆಕ್ ಪಾರ್ಕ್, ತೆಂಗು ಪಾರ್ಕ್ ಬಗ್ಗೆ ತುಮಕೂರು ಕೈಗಾರಿಕಾ, ಔಧ್ಯಮಿಕ ವಲಯ ಆಶಯ ಇಟ್ಟುಕೊಂಡಿದೆ. ಸರಕಾರಿ ಮೆಡಿಕಲ್ ಕಾಲೇಜು, ಈಜುಕೊಳ, ಹಾಕಿ ಸ್ಟೇಡಿಯಂ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಜಿಲ್ಲೆಯ ಜನತೆಯದ್ದು. ಜಿಲ್ಲಾಉಸ್ತುವಾರಿ ಸಚಿವರಾಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜಿಲ್ಲೆಯ ಅಭಿವೃದ್ಧಿಗಾಗಿ ಕೆಲವೊಂದಿಷ್ಟು ಯೋಜನೆಗಳನ್ನು ಬಜೆಟ್ ನಲ್ಲಿತರುವ ಪ್ರಯತ್ನದಲ್ಲಿಇದ್ದಾರೆ. ಜಿಲ್ಲಾಡಳಿತದಿಂದ ಹತ್ತಾರು ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರಿಗೆ ಪರ್ಯಾಯವಾಗಿ ಅಭಿವೃದ್ಧಿಯಾಗುತ್ತಿರುವ ತುಮಕೂರಿನಿಂದ ಬೆಂಗಳೂರಿನ ವಿವಿಧ ಕಂಪನಿಗಳಿಗೆ ಐಟಿ ಉದ್ಯೋಗಿಗಳು ಹೋಗುತ್ತಿದ್ದಾರೆ. ಇಲ್ಲೇ ಐಟಿ ಪಾರ್ಕ್ ನಿರ್ಮಾಣವಾದರೆ ಕಂಪನಿಗಳಿಗೆ ಹಾಗೂ ಉದ್ಯೋಗಿಗಳಿಗೂ ಅನುಕೂಲವಾಗುತ್ತದೆ. ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ7 ಎಂಜಿನಿಯರಿಂಗ್ ಕಾಲೇಜು, 3 ವೈದ್ಯಕೀಯ ಕಾಲೇಜು, ಐಟಿಐ, ಪಾಲಿಟೆಕ್ನಿಕ್ ಕಾಲೇಜುಗಳಿವೆ. ಅಲ್ಲದೆ ತುಮಕೂರು ವಿಶ್ವವಿದ್ಯಾಲಯವೂ ಇದೆ. ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಇತ್ತೀಚೆಗೆ ಐಟಿ ಕಂಪನಿಗಳನ್ನು ತುಮಕೂರಿಗೆ ಆಹ್ವಾನಿಸಿದ್ದು, ಇಲ್ಲಿಂದಲೇ ಇಲ್ಲಿನ ನಿವಾಸಿಗಳು ಕೆಲಸ ಮಾಡುವಂತಹ ವಾತಾವರಣ ಸೃಷ್ಟಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಐಟಿ ಪಾರ್ಕ್ ನಿರ್ಮಾಣದ ಕನಸಿಗೆ ರೆಕ್ಕೆ ಕಟ್ಟಿದೆ. ತೆಂಗು ಪಾರ್ಕ್ ನಿರ್ಮಾಣ: ತೆಂಗು ಮೌಲ್ಯವರ್ಧನೆ, ಮಾರುಕಟ್ಟೆ, ಸಂಶೋಧನಾ ಅವಕಾಶಗಳನ್ನು ಒಂದೇ ಸೂರಿನಲ್ಲಿಕಲ್ಪಿಸುವ ತೆಂಗು ಪಾರ್ಕ್ ತುಮಕೂರಿನ ತೆಂಗು ಬೆಳೆಗಾರರು, ಉದ್ಯಮಗಳ ಬಹುಕಾಲದ ಬೇಡಿಕೆ. ಈ ಬಾರಿ ಈ ಬೇಡಿಕೆಯೂ ಸಿಎಂ ಸಿದ್ದರಾಮಯ್ಯ ಆಯವ್ಯಯದಲ್ಲಿಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯಿದೆ. ಅಲ್ಲದೆ ಹುಣಸೆ, ಮಾವು, ನೇರಳೆ, ಹಲಸು ಇವುಗಳನ್ನು ಒಳಗೊಂಡಂತೆ ಸುಮಾರು 500 ಎಕರೆ ವಿಸ್ತೀರ್ಣದಲ್ಲಿಆಗ್ರೋ ಪಾರ್ಕ್ ಸ್ಥಾಪಿಸುವ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿಮಾರಾಟ ಕೇಂದ್ರ, ಸಂಶೋಧನಾ ಕೇಂದ್ರ, ತರಬೇತಿ ವಿಭಾಗ ಸ್ಥಾಪಿಸುವ ಬಹುಕಾಲದ ಬೇಡಿಕೆ ಈಡೇರಲಿದೆಯೇ ಎಂಬ ಕುತೂಹಲವಿದೆ.

