ಸಾಧನೆ ಮುಗಿಯದ ಹಾದಿ: ಪಂ.ಗೋಪಾಲಕೃಷ್ಣ ಹೆಗಡೆ
ವಿಕ ಸುದ್ದಿಲೋಕ ಯಲ್ಲಾಪುರ
ಸಾಧನೆಗೆ ನಿರ್ದಿಷ್ಟ ವ್ಯಾಖ್ಯೆಯಿಲ್ಲ. ಅದು ಮುಗಿಯದ ಹಾದಿ. ಕಣ್ಣಿಗೆ ಕಾಣದ ವಿದ್ಯೆಯನ್ನು ಮನಸ್ಸಿನ ಅಂತರಾಳಕ್ಕೆ ಪರಿಚಯಿಸಿಕೊಂಡು ಅಭ್ಯಾಸದಿಂದ ಅದನ್ನು ಸಾಧಿಸಬೇಕು. ಮನಸ್ಸು ನಿರಾಳವಾಗಲು ಸಂಗೀತ ಬೇಕು ಎಂದು ಖ್ಯಾತ ತಬಲಾ ವಾದಕ ಪಂ.ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಹೇಳಿದರು.
ಪಟ್ಟಣದ ಶ್ರೀ ಶಕ್ತಿಗಣಪತಿ ಆವಾರದಲ್ಲಿಸ್ವರಮಾಧುರಿ ಸಂಗೀತ ವಿದ್ಯಾಲಯದ ಸಂಗೀತ ವೈವಿಧ್ಯ ಕಾರ್ಯಕ್ರಮದಲ್ಲಿ ಸಾಧಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು
‘‘ಸನ್ಮಾನ, ಪುರಸ್ಕಾರ, ಗೌರವ ಎಲ್ಲವೂ ಸಂಗೀತದೆದುರು ಶೂನ್ಯ. ಮಕ್ಕಳಲ್ಲಿಶಾಲಾ ಅಧ್ಯಯನದ ಜೊತೆ ನಿರಂತರ ಸಂಗೀತಾಭ್ಯಾಸವನ್ನು ಮಾಡಲು ಪಾಲಕರು ಪ್ರೋತ್ಸಾಹ ನೀಡಬೇಕು. ಆ ದೃಷ್ಟಿಯಿಂದ ಸ್ವರಮಾಧುರಿ ವಿದ್ಯಾಲಯ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ’’ ಎಂದರು. ಅಧ್ಯಕ್ಷತೆ ವಹಿಸಿದ್ದ ಸ್ವರಮಾಧುರಿ ಸಂಗೀತ ವಿದ್ಯಾಲಯದ ಪ್ರಾಚಾರ್ಯೆ ವಾಣಿ ಹೆಗಡೆ ಮಾತನಾಡಿದರು.
ಮನ ಸೆಳೆದ ಸಂಗೀತ ವೈವಿಧ್ಯ
ಧಾರವಾಡದ ಅಂತಾರಾಷ್ಟ್ರೀಯ ಖ್ಯಾತ ಗಾಯಕ ಪಂ. ಕುಮಾರ ಮರಡೂರ್ ಚೋಗ್ ಕೌಂಸ್ , ಬಸಂತ್ , ದಾಸವಾಣಿ ಮೀರಾಭಜನ್ , ಭೈರವಿ ರಾಗಗಳನ್ನು ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿಪಂ. ಗೋಪಾಲಕೃಷ್ಣ ಹೆಗಡೆ ಕಲ್ಭಾಗ, ಸಂವಾದಿನಿಯಲ್ಲಿಸತೀಶ ಭಟ್ಟ ಹೆಗ್ಗಾರ ಮತ್ತು ತಾಳದಲ್ಲಿಅನಂತ ಯಲ್ಲಾಪುರಕರ್ ಸಹಕರಿಸಿದರು.
ಆಹ್ವಾನಿತ ಕಲಾವಿದರಾದ ಮಂಚಿಕೇರಿಯ ಪಂ.ನಾಗರಾಜ ಹೆಗಡೆ ಶಿರನಾಲಾ ಇವರ ಬಾನ್ಸುರಿ ವಾದನ ನೆರೆದ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿತು. ಇವರು ರಾಗ್ ಮಾರುಬಿಹಾಗ್ ದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಶಿಕ್ಷಕರಾದ ಶ್ರೀಧರ ಹೆಗಡೆ, ಸದಾನಂದ ದಬಗಾರ, ಸುದಾಮ ದಾನಗೇರಿ, ಮಂಜುನಾಥ ನಾಳಸೇರು, ವಿಭಾ ಹೆಗಡೆ ನಿರೂಪಿಸಿದರು. ಸಂಸ್ಥೆಯ ಅಧ್ಯಕ್ಷ ರಮೇಶ ಹೆಗಡೆ, ಶಕ್ತಿ ಗಣಪತಿ ದೇವಾಲಯದ ಅರ್ಚಕ ವೆಂಕಟ್ರಮಣ ಭಟ್ಟ, ಪ್ರಾಚಾರ್ಯ ಗಣಪತಿ ಹೆಗಡೆ, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
03ವೈಎಲಪಿ1
ಯಲ್ಲಾಪುರದ ಶ್ರೀ ಶಕ್ತಿಗಣಪತಿ ಆವಾರದಲ್ಲಿನಡೆದ ಸ್ವರಮಾಧುರಿ ಸಂಗೀತ ವಿದ್ಯಾಲಯದ ಸಂಗೀತ ವೈವಿಧ್ಯ ಕಾರ್ಯಕ್ರಮದಲ್ಲಿಖ್ಯಾತ ತಬಲಾ ವಾದಕ ಪಂ.ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಅವರನ್ನು ಸನ್ಮಾನಿಸಲಾಯಿತು.

