ವಿಜೃಂಭಣೆಯಿಂದ ನಡೆದ ಪ್ರಸನ್ನ ಲಕ್ಷ್ಮೇವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

Contributed byvenki_dhreporter@rediffmail.com|Vijaya Karnataka

ಕೆಜಿಎಫ್‌ನಗರದ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ 91ನೇ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಬೆಳಗಿನ ಜಾವ 5 ಗಂಟೆಗೆ ಆರಂಭವಾದ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ರಾಜ ಬೀದಿಯಲ್ಲಿ ಸಂಚರಿಸಿತು. ಭಕ್ತರು ಹರಕೆ ಹೊತ್ತು ದೇವರ ದರ್ಶನ ಪಡೆದರು. ಅನ್ನ ಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಚಂದ್ರಗ್ರಹಣದ ಕಾರಣ ದೇವಾಲಯದ ಬಾಗಿಲುಗಳನ್ನು ಮಧ್ಯಾಹ್ನ ಮುಚ್ಚಲಾಯಿತು.

grand brahmarathotsava of prasanna lakshmi temple

ವಿಕ ಸುದ್ದಿಲೋಕ ಕೆಜಿಎಫ್

ನಗರದ ಪುರಾಣ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷಿತ್ರ್ಮೕ ವೆಂಕಟರಮಣಸ್ವಾಮಿ ದೇವಾಲಯದ 91ನೇ ವರ್ಷದ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಋುತ್ವಿಜರ ವೇದ ಮಂತ್ರ ಘೋಷಗಳೊಂದಿಗೆ ಬ್ರಾಹ್ಮಿ ಮುಹೂರ್ತದಲ್ಲಿನೆರವೇರಿತು.

ಬೆಳಗಿನ ಜಾವ 5ರಿಂದ 5.15 ಗಂಟೆಯವರೆಗಿನ ಶುಭ ಮಕರ ಲಗ್ನದಲ್ಲಿವಿಪ್ರರ ವೇದ ಮಂತ್ರ ಘೋಷಗಳೊಂದಿಗೆ ಮತ್ತು ಮಂಗಳವಾದ್ಯಗಳೊಂದಿಗೆ ಜರುಗಿತು. ಈ ಬಾರಿ ಚಂದ್ರಗ್ರಹಣ ಇರುವ ಪ್ರಯುಕ್ತ ರಥೋತ್ಸವವು ಬೆಳಗಿನ ಜಾವ 5 ಗಂಟೆಗೆ ಪ್ರಾರಂಭವಾಗಿ ರಥ ಬೀದಿಯಲ್ಲಿಸಂಚರಿಸಿ 11 ಗಂಟೆಗೆ ದೇವಾಲಯವನ್ನು ವಾಪಸ್ಸು ತಲುಪಿತು. ಬ್ರಹ್ಮರಥೋತ್ಸವಕ್ಕೆ ತಹಸೀಲ್ದಾರ್ ಎಚ್ .ಜೆ.ಭರತ್ , ಮುಜರಾಯಿ ತಹಸೀಲ್ದಾರ್ ಮೋಹನ್ ಚಾಲನೆ ನೀಡಿದರು. ನಗರದ ಕಿಂಗ್ ಜಾಜ್ ರ್ ಹಾಲ್ ವರೆಗೂ ವೇದ ಮಂತ್ರಘೋಷಗಳೊಂದಿಗೆ ತೇರು ರಾಜ ಬೀದಿಯಲ್ಲಿಸಹಸ್ರಾರು ಭಕ್ತರ ಸಮ್ಮುಖದಲ್ಲಿತೆರಳಿತು.

ಸಾವಿರಾರು ಭಕ್ತರು ರಥೋತ್ಸವದಲ್ಲಿಪಾಲ್ಗೊಂಡು ದೇವರ ದರ್ಶನ ಪಡೆದರು. ಹರಕೆ ಹೊತ್ತವರು ಸ್ವಾಮಿಗೆ ಬಾಳೆಹಣ್ಣು ಮತ್ತು ಮರಗ, ಉಪ್ಪು, ಮೆಣಸುಗಳನ್ನು ತೇರಿನ ಶಿಖರಕ್ಕೆ ಎಸೆದು ಕೃತಾರ್ಥರಾದರು. ಬೆಳಗ್ಗೆ 5 ಗಂಟೆಗೆ ಪ್ರಾರಂಭವಾದ ರಥೋತ್ಸವವು ಗೀತಾರಸ್ತೆ, ಸೂರಜ್ ಮಲ್ ವೃತ್ತ, ಪ್ರಿಚರ್ಡ್ ರಸ್ತೆ, ಡಾ.ರಾಜ್ ಕುಮಾರ್ ವೃತ್ತ, ಗಾಂಧಿ ವೃತ್ತ, ಕಿಂಗ್ ಜಾಜ್ ಹಾಲ್ ಮುಂತಾದ ರಸ್ತೆಗಳಲ್ಲಿಸಂಚರಿಸಿತು. ರಥೋತ್ಸವ ಸಾಗುವ ಬೀದಿಯುದ್ದಕ್ಕೂ ಭಕ್ತರಿಂದ ಪಾನಕ, ಮಜ್ಜಿಗೆ, ಕೋಸಂಬರಿ, ಅನ್ನ ಸಂತರ್ಪಣೆ, ಪ್ರಸಾದ ವಿನಿಯೋಗ ಮಾಡಲಾಯಿತು.

ಭಕ್ತರ ಅನುಕೂಲಕ್ಕಾಗಿ ಶಂಕರ ಸೇವಾ ಸಮಿತಿ ವತಿಯಿಂದ ಶ್ರೀಶಂಕರ ಮಠದಲ್ಲಿಮತ್ತು ಧರ್ಮಸಭಾ ವತಿಯಿಂದ 6ನೇ ಕ್ರಾಸ್ ನ ಸನಾತನ ಧರ್ಮಸಭಾದಲ್ಲಿಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಬ್ರಹ್ಮ ರಥೋತ್ಸವದಲ್ಲಿಭಾಗವಹಿಸಿ, ಭಗವಂತನ ಪ್ರಸಾದ ಸ್ವೀಕರಿಸಿದರು. ಚಂದ್ರಗ್ರಹಣದ ಪ್ರಯುಕ್ತ ದೇವಾಲಯದ ಬಾಗಿಲುಗಳನ್ನು ಮಧ್ಯಾಹ್ನ 12 ಗಂಟೆಗೆ ಮುಚ್ಚಲಾಗಿತ್ತು.

ಬ್ರಹ್ಮರಥೋತ್ಸವದಲ್ಲಿವೆಂಕಟರಮಣಸ್ವಾಮಿ ದೇವಾಲಯದ ಇಒ ಕೆ.ಆರ್ .ಮಂಜುನಾಥ್ , ಬ್ರಾಹ್ಮಣ ಸಂಘದ ಕಾರ್ಯದರ್ಶಿ ನಾರಾಯಣಮೂರ್ತಿ, ದೇವಾಲಯದ ಪ್ರಧಾನ ಅರ್ಚಕ ರಂಜಿತ್ , ಡಾ.ಗುರುದೀಕ್ಷಿತ್ , ಪ್ರಸನ್ನ ಕುಮಾರ್ ದೀಕ್ಷಿತ್ , ಶ್ರೀಧರ್ , ಸೋಮನಾಥ ಶರ್ಮ, ಅರುಣ್ , ಕೃಷ್ಣಮೂರ್ತಿ, ವಿಜಯಕುಮಾರ್ , ನಟರಾಜ ಅಯ್ಯರ್ , ಡಾ.ಮಂಜುನಾಥ್ , ವಕೀಲ ರಾಘವನ್ , ನಾಗೇಂದ್ರ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಅ.ಮು.ಲಕ್ಷಿತ್ರ್ಮನಾರಾಯಣ, ನಗರಸಭೆ ಸದಸ್ಯ ಕರುಣಾಕರನ್ , ಶೇಷ ಬಾಬು, ಪೇಷ್ಕಾರ್ ಶ್ರೀನಿವಾಸರೆಡ್ಡಿ ಭಾಗವಹಿಸಿದ್ದರು.

3ಕೆಜಿಎಫ್ 4: ನಗರದ ಪ್ರಸನ್ನ ಲಕ್ಷಿತ್ರ್ಮೕ ವೆಂಕಟರಮಣಸ್ವಾಮಿ ದೇವಾಲಯದಲ್ಲಿ91ನೇ ವರ್ಷದ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯಿತು.