ವಿಕ ಸುದ್ದಿಲೋಕ ಪುತ್ತೂರು
ಚಂದ್ರಗ್ರಹಣದ ಹಿನ್ನೆಲೆಯಲ್ಲಿಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಮಂಗಳವಾರ ಸಂಜೆ ಗ್ರಹಣ ಶಾಂತಿ ಹೋಮ ನಡೆಸಲಾಯಿತು.
ಮಧ್ಯಾಹ್ನದ ಮಹಾಪೂಜೆಯ ಬಳಿಕ ದೇಗುಲ ಮುಚ್ಚಲಾಯಿತು. ಭಕ್ತರಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ ಇರಲಿಲ್ಲ. ಪ್ರಧಾನ ಅರ್ಚಕರಾದ ವಸಂತ ಕೆದಿಲಾಯ ಮಾರ್ಗದರ್ಶನದಲ್ಲಿಗ್ರಹಣ ಶಾಂತಿ ಹೋಮ ನಡೆಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ , ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಮುಸ್ಸಂಜೆ ಗ್ರಹಣ ಮೋಕ್ಷ ಉಂಟಾದ ಬಳಿಕ ದೇವಳದಲ್ಲಿಸ್ವಯಂ ಸೇವಕರಿಂದ ಶುಚೀಕರಣ ಕೆಲಸ ನಡೆಯಿತು. ನಂತರ ರಾತ್ರಿ ಪೂಜೆ ಜರುಗಿತು.
ಫೋಟೋ: 3ಪಿ-ಹೋಮ
ಪುತ್ತೂರು ದೇವಾಲಯದಲ್ಲಿಮಂಗಳವಾರ ಸಂಜೆ ಗ್ರಹಣ ಶಾಂತಿ ಹೋಮ ನಡೆಯಿತು.

