ನಾಡಿನ ಸ್ಫೂರ್ತಿ ಕೈಧಿವಾರ ತಾಧಿತಧಿಯ್ಯ

Contributed byprasannanews1985@gmail.com|Vijaya Karnataka

ಕೈವಾರ ತಾತಯ್ಯನವರ 300ನೇ ಜಯಂತಿಯನ್ನು ಆಚರಿಸಲಾಯಿತು. ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಮಾತನಾಡಿ, ತಾತಯ್ಯನವರು ಸಮಾಜ ಸುಧಾರಕರಾಗಿದ್ದು, ಅವರ ಮಾರ್ಗದಲ್ಲಿ ಸಾಗಬೇಕು ಎಂದರು. ತಹಶೀಲ್ದಾರ್‌ ಆರತಿ ಬಿ. ಅವರು ತಾತಯ್ಯನವರ ಭೋದನೆ, ಕೀರ್ತನೆಗಳು ಮನುಕುಲದ ಉದ್ದಾರಕ್ಕೆ ಶ್ರಮಿಸಿವೆ ಎಂದು ತಿಳಿಸಿದರು. ಅವರ ತತ್ವ, ಆದರ್ಶದ ಮೇಲೆ ಬದುಕನ್ನು ರೂಪಿಸಿಕೊಳ್ಳುವಂತೆ ತಿಳಿಸಿದರು.

kaidhivara tadhitadhiyya 300th birth anniversary of a great person of the land

ಗುಬ್ಬಿ : ನಾಡಿಗೆ ಸ್ಫೂರ್ತಿ, ಮನುಕುಲದ ಏಕತೆಗೆ ಶ್ರಮಿಸಿದ ಮಹಾನ್ ವ್ಯಕ್ತಿ ಕೈವಾರ ತಾತಯ್ಯ ಎಂದು ಶಾಸಕ ಎಸ್ .ಆರ್ .ಶ್ರೀನಿವಾಸ್ ತಿಳಿಸಿದರು. ತಾಲೂಕು ಕಚೇರಿಯ ಕೋರ್ಟ್ ನಲ್ಲಿಹಮ್ಮಿಕೊಂಡಿದ್ದ ಕೈವಾರ ತಾತಯ್ಯ ಅವರ 300ನೇ ಜಯಂತಿಯಲ್ಲಿಭಾಗಿಯಾಗಿ ಮಾತನಾಡಿದ ಅವರು, ಕೈವಾರ ತಾತಯ್ಯನವರು ಸಮಾಜ ಸುಧಾರಕರಾಗಿದ್ದು, ಅವರು ತೋರಿದ ಮಾರ್ಗದಲ್ಲಿಪ್ರತಿಯೊಬ್ಬರೂ ಸಾಗಬೇಕಿದೆ. ಅವರು ರಚಿಸಿದ ಕಾಲಜ್ಞಾನದಲ್ಲಿಜಗತ್ತು ಅರಿಯಬೇಕಾದ ಅನೇಕ ಅಂಶಗಳಿವೆ. ಅವರ ತತ್ವ,ತೋರಿದ ಮಾರ್ಗದರ್ಶನ ಪಾಲಿಸಿದರೆ ಎಲ್ಲೆಡೆ ಶಾಂತಿ ನೆಲೆಸುವುದರಲ್ಲಿಸಂಶಯವಿಲ್ಲಎಂದಧಿರು. ಕೈವಾರ ತಾತಯ್ಯರೆಂದೇ ಪ್ರಸಿದ್ಧಿಯಾದ ಶ್ರೀ ಯೋಗಿ ನಾರೇಯಣ ಯತಿಂದ್ರ ಅವರು, ಪದ್ಯ, ಕೀರ್ತನೆ ಹಾಗೂ ಸ್ತೋತ್ರಗಳ ಮೂಲಕ ಸಾಹಿತ್ಯ ರೂಪದಲ್ಲಿಜನತೆಗೆ ತಿಳಿಸಿ ಕೊಟ್ಟ ಮಹಾನ್ ಯೋಗಿ ಎಂದು ತಿಳಿಸಿದರು. ತಹಶೀಲ್ದಾರ್ ಆರತಿ ಬಿ. ಮಾತನಾಡಿ ತಾತಯ್ಯನವರು ತಮ್ಮ ಭೋದನೆ, ಕೀರ್ತನೆಗಳ ಮೂಲಕ ಮನುಕುಲದ ಉದ್ದಾರಕ್ಕೆ ಶ್ರಮಿಸಿದರು. ಅಂತಿಮವಾಗಿ ಕೈವಾರದಲ್ಲಿತಮ್ಮ ಗುರುಪೀಠವನ್ನು ಸ್ಥಾಪಿಸಿ, ಅಲ್ಲಿಂದಲೇ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ ್ಯದಲ್ಲಿನಿರತರಾದರು. ಇಂದಿಗೂ ತಾತಯ್ಯನವರ ಜಯಂತಿಯಂದು ಸಹಸ್ರಾರು ಮಂದಿ ಕೈವಾರಕ್ಕೆ ತೆರಳಿ ತಮ್ಮ ಭಕ್ತಿ ಸಮರ್ಪಣೆ ಮಾಡುತ್ತಾರೆ ಎಂದರು. ತಾತಯ್ಯನವರ ತತ್ವಪದಗಳು ಇಂದಿಗೂ ಪ್ರಸ್ತುತ. ಅವರ ಕೀರ್ತನೆಗಳು ಮಾರ್ಗದರ್ಶನ ಮಾಡುತ್ತವೆ. ಅವರ ತತ್ವ, ಆದರ್ಶದ ಮೇಲೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಿದೆ ಎಂದು ತಿಳಿಸಿದರು. ಗ್ಯಾಧಿರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಆರ್ .ವೆಂಕಟೇಶ್ , ಎ.ಇ. ನಂದಾ, ಗುರುರಾಜ್ , ಪದಾಧಿಕಾರಿಗಳು ಉಪಸ್ಥಿತರಿದ್ದರು.