ಬೇಸಿಗೆಗೆ ಮಸಾಲ ಮಜ್ಜಿಗೆಗೆ ಬೇಡಿಕೆ ಹೆಚ್ಚಳ

Contributed byvenkatesh.narasappa@timesgroup.com|Vijaya Karnataka

ಕಲಬುರಗಿ ಜಿಲ್ಲೆಯಲ್ಲಿ ಬೇಸಿಗೆಯ ತಾಪಮಾನ ಏರಿಕೆಯಿಂದಾಗಿ ನಂದಿನಿ ಮಜ್ಜಿಗೆ ಮತ್ತು ಮೊಸರಿಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿದಿನ 12 ಸಾವಿರ ಲೀಟರ್ ಮಜ್ಜಿಗೆ ಮಾರಾಟದ ಗುರಿ ಹೊಂದಲಾಗಿದೆ. ಸಾಮಾನ್ಯ ದಿನಗಳಿಗಿಂತ 10 ಸಾವಿರ ಲೀಟರ್ ಮೊಸರಿಗೆ ಬೇಡಿಕೆ ಬರುತ್ತಿದೆ. ದೇಸಿ ರುಚಿಯ ಮಜ್ಜಿಗೆಗೆ ವಿಶೇಷ ಆದ್ಯತೆ ದೊರಕುತ್ತಿದೆ. ಮೊಸರು ತಯಾರಿಕೆಗೆ ಹೊಸ ಯಂತ್ರ ಅಳವಡಿಸಲಾಗುತ್ತಿದೆ.

kalaburagi massive demand for spiced buttermilk during summer

ಪ್ರತಿದಿನ ಮಜ್ಜಿಗೆ ಮಾರಾಟದ ವಿವರ (ಲೀಟರ್ ಗಳಲ್ಲಿ)

ತಿಂಗಳು 2023-24 2024-25 2025-26 (ಗುರಿ)

ಮಾರ್ಚ್ 5,510 6,106 8,000

ಏಪ್ರಿಲ್ 6,270 6,378 12,000

ಮೇ 4,276 3,252 8,000

**

ಚಿತ್ರ: ಮೊಸರು

**

(ಕಿಕ್ಕರ್ ) ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ಬೇಡಿಕೆ | ಬೇಸಿಗೆಯ ಮೂರು ತಿಂಗಳಲ್ಲಿಗ್ರಾಹಕರಿಂದ ಹೆಚ್ಚು ಖರೀದಿ

ಬೇಸಿಗೆಗೆ ಮಸಾಲ ಮಜ್ಜಿಗೆಗೆ ಬೇಡಿಕೆ ಹೆಚ್ಚಳ

ವೆಂಕಟೇಶ ಏಗನೂರು ಕಲಬುರಗಿ

್ಖಛ್ಞಿkaಠಿಛಿsh.್ಞa್ಟasappaಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಬೇಸಿಗೆಯಲ್ಲಿತಾಪಮಾನ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಜನರು ತಂಪುಪಾನೀಯಗಳ ಮೊರೆ ಹೋಗುತ್ತಿದ್ದು, ನಂದಿನಿ ಮಜ್ಜಿಗೆ ಹಾಗೂ ಮೊಸರಿಗೆ ಈ ಬಾರಿ ಬೇಡಿಕೆ ಹೆಚ್ಚಾಗಿದೆ.

ಜಿಲ್ಲೆಯಲ್ಲಿದಿನದಿಂದ ದಿನಕ್ಕೆ ಬೇಸಿಗೆ ಹೆಚ್ಚಾಗುತ್ತಿದೆ. ಈ ಬೇಸಿಗೆಯಲ್ಲಿಕಲಬುರಗಿ-ಬೀದರ್ - ಯಾದಗಿರಿ ಹಾಲು ಒಕ್ಕೂಟ ತಯಾರಿಸುವ ಮಜ್ಜಿಗೆಗೆ ಬೇಡಿಕೆ ಹೆಚ್ಚುತ್ತಿದೆ. ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷದಲ್ಲಿಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಒಕ್ಕೂಟದಲ್ಲಿತಯಾರಾಗುವ 200 ಮಿ.ಲೀ ಪಾಕೆಟ್ ಗಳಿಗೆ ಹೆಚ್ಚಿನ ಬೇಡಿಕೆಯಿದೆ.

*ದಿನಕ್ಕೆ 12 ಸಾವಿರ ಲೀಟರ್ ಮಜ್ಜಿಗೆ ಟಾರ್ಗೆಟ್ : ಜಿಲ್ಲೆಯಲ್ಲಿಪ್ರತಿದಿನ 12 ಸಾವಿರ ಲೀಟರ್ ಮಸಾಲೆ ಮಜ್ಜಿಗೆಯ ಟಾರ್ಗೆಟ್ ಇದ್ದು, ಪ್ರಸ್ತುತ ಮಾರ್ಚ್ ಆರಂಭದಲ್ಲಿಕನಿಷ್ಠ 5ರಿಂದ 6 ಸಾವಿರ ಲೀಟರ್ ಮಜ್ಜಿಗೆ ಮಾರಾಟವಾಗುತ್ತಿದೆ. ಒಕ್ಕೂಟದಿಂದ ನಂದಿನಿ ಮಳಿಗೆಗಳಿಗೆ ಮಜ್ಜಿಗೆ ಸರಬರಾಜು ಮಾಡಲು ನಾಲ್ಕು ಭಾಗಗಳಲ್ಲಿಮೂರರಿಂದ ನಾಲ್ಕು ವಾಹನಗಳು ಸರಬರಾಜು ಮಾಡುತ್ತಿವೆ.

*ಮೊಸರು ಬೇಡಿಕೆಯಲ್ಲೂಹೆಚ್ಚಳ: ಪ್ರತಿ ಸಾಮಾನ್ಯ ದಿನಗಳಲ್ಲಿಮೊಸಲು 7 ಸಾವಿರ ಲೀಟರ್ ಮೊಸರು ಪ್ರತಿದಿನ ಬೇಡಿಕೆ ಇರುತಿತ್ತು. ಆದರೆ, ಈಗ ಬೇಸಿಗೆಯಾಗಿರುವುದರಿಂದ ಪ್ರತಿದಿನ 10 ಸಾವಿರ ಲೀಟರ್ ಮೊಸರಿಗೆ ಬೇಡಿಕೆ ಬರುತ್ತಿದೆ ಎಂದು ಒಕ್ಕೂಟದ ಅಧಿಕಾರಿಗಳು ಹೇಳುತ್ತಾರೆ.

*

ಬಾಕ್ಸ್ ...

ಕಲಬುರಗಿ ಮಜ್ಜಿಗೆಗೆ ಬೇಡಿಕೆ ಏಕೆ ?

ಕಲಬುರಗಿ-ಬೀದರ್ - ಯಾದಗಿರಿ ಹಾಲು ಒಕ್ಕೂಟದಲ್ಲಿತಯಾರಾಗುವ ಮಸಾಲೆ ಮಜ್ಜಿಗೆ ವಿಶೇಷ ಬೇಡಿಕೆಯಿದೆ. ಬೇರೆ ಒಕ್ಕೂಟದಲ್ಲಿತಯಾರಾಗುವ ಮಜ್ಜಿಗೆಗಿಂತ ಈ ಮಜ್ಜಿಗೆ ವಿಶೇಷವಿದೆ. ಕಲ್ಯಾಣ ಕರ್ನಾಟಕ ಭಾಗದ ಜನರು ಇಷ್ಟಪಡುವ ಕಾರ, ಸ್ವಾಭಾವಿಕ ರುಚಿಯನ್ನು ಬೇಡುತ್ತಾರೆ. ಈ ಕಾರಣಕ್ಕಾಗಿ ಬೇರೆ ಒಕ್ಕೂಟದಲ್ಲಿಎಸೆನ್ಸ್ ಕೃತಕ ದ್ರವ್ಯದ ಲಿಕ್ವಿಡ್ ಬಳಸಿ ತಯಾರಿಸಲಾಗುತ್ತದೆ. ಆದರೆ, ಕಲಬುರಗಿ ಹಾಲು ಒಕ್ಕೂಟದಲ್ಲಿಅಲ್ಲ, ಶುಂಠಿ, ಬೆಳ್ಳುಳ್ಳಿ, ಮೆಂತೆ, ಪುದಿನಾ, ಜೀರಿಗೆ, ಉಪ್ಪು, ಮಸಾಲೆ ಪದಾರ್ಥಗಳನ್ನು ಬಳಸಿ ದೇಸಿ ರೀತಿಯ ಮಸಾಲೆ ಮಜ್ಜಿಗೆ ತಯಾರಿಸುವುದರಿಂದ ಈ ಮಜ್ಜಿಗೆಗೆ ಹೆಚ್ಚಿನ ಬೇಡಿಕೆಯಿದೆ.

ಬಾಕ್ಸ್ ...

ಮೊಸರಿಗಾಗಿ ಅತ್ಯಾಧುನಿಕ ಯಂತ್ರ

ಮೊಸರು ತಯಾರಿಸಲು ಹಾಲು ಒಕ್ಕೂಟ ಈ ಬಾರಿ ಬ್ಲಾಸ್ಟ್ ಚಿಲ್ಲರ್ ತಂತ್ರಜ್ಞಾನದ 1.20 ಕೋಟಿ ರೂ. ವೆಚ್ಚದ ಮಶಿನ್ ಅಳವಡಿಸಲಾಗುತ್ತಿದೆ. 10 ದಿನದಲ್ಲಿಈ ಮಶಿನ್ ನಿಂದ ತಯಾರಿಸಿದ ಮೊಸರು ಸಾರ್ವಜನಿಕರಿಗೆ ತಲುಪಲಿದೆ. ಈ ತಂತ್ರಜ್ಞಾನದ ಯಂತ್ರದಿಂದ ತಯಾರಿಸಿದ ಮೊಸರು ಗಟ್ಟಿ ಹಾಗೂ ಐದು ದಿನಗಳವರೆಗೆ ಹುಳಿಯಾಗುವುದಿಲ್ಲಎಂದು ಅಧಿಕಾರಿಗಳು ಹೇಳುತ್ತಾರೆ.

*

ಕೋಟ್ ...

ಹಾಲು ಒಕ್ಕೂಟದಲ್ಲಿನ ಮಜ್ಜಿಗೆಗೆ ಉತ್ತಮ ಬೇಡಿಕೆಯಿದೆ. ಬೇಸಿಗೆ ಹಿನ್ನೆಲೆಯಲ್ಲಿಹೆಚ್ಚು ಮಾರಾಟವಾಗುತ್ತದೆ. ಅದರಲ್ಲೂನಮ್ಮ ಮಜ್ಜಿಗೆ ದೇಸಿ ರುಚಿ, ಈ ಭಾಗದ ಜನರ ರುಚಿಗೆ ತಕ್ಕಂತೆ ತಯಾರಿಸುವುದರಿಂದ ಹೆಚ್ಚು ಮಾರಾಟವಾಗುತ್ತದೆ.

- ಡಾ.ಪಾಂಡುರಂಗ ಪಾಟೀಲ್ , ಎಂ.ಡಿ, ಕಲಬುರಗಿ-ಬೀದರ್ - ಯಾದಗಿರಿ ಹಾಲು ಒಕ್ಕೂಟ

*

ಕೋಟ್ ...

ಬೇಸಿಗೆಯಲ್ಲಿಕಲಬುರಗಿ ಹಾಲು ಒಕ್ಕೂಟ ತಯಾರಿಸುವ ಮಜ್ಜಿಗೆ ಉತ್ತಮ ಬೇಡಿಕೆ ಇದೆ. ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ಮಜ್ಜಿಗೆ ಮಾರಾಟ ಆಗುವ ನಿರೀಕ್ಷೆ ಹೊಂದಲಾಗಿದೆ. ಅದರಲ್ಲೂಈಗ ರಂಜಾನ್ ಸೇರಿ ಇತರೆ ಹಬ್ಬಗಳಲ್ಲಿಸಾಮಾನ್ಯ ದಿನಗಳಿಗಿಂತ ಹಾಲು, ಮೊಸರು, ಮಜ್ಜಿಗೆ ಹೆಚ್ಚು ಮಾರಾಟ ಆಗುತ್ತದೆ.

- ಆರ್ .ಕೆ.ಪಾಟೀಲ್ , ಅಧ್ಯಕ್ಷ, ಕಲಬುರಗಿ-ಬೀದರ್ - ಯಾದಗಿರಿ ಹಾಲು ಒಕ್ಕೂಟ