ಇರಾನ್ ಗೆ ತೆರಳಿದ್ದ ಯುವಕ ಸಂಪರ್ಕಕ್ಕೆ ಸಿಗದೆ ಪೋಷಕರು ಕಂಗಾಲು

Contributed byjalandhara223149@gmail.com|Vijaya Karnataka

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗಡಿಕಲ್‌ನ ನಿಶ್ಚಿತ್‌ ಎಂಬ ಯುವಕ ಇರಾನ್‌ಗೆ ತೆರಳಿದ್ದರು. ಐದು ತಿಂಗಳ ಹಿಂದೆ ಮರ್ಚೆಂಟ್‌ ನೇವಿ ಉದ್ಯೋಗಿಯಾಗಿ ಅಲ್ಲಿಗೆ ಹೋಗಿದ್ದರು. ಕಳೆದ ಶನಿವಾರದಿಂದ ಯುವಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಪೋಷಕರು ಆತಂಕಗೊಂಡಿದ್ದಾರೆ. ತಮ್ಮ ಮಗನನ್ನು ಹುಡುಕಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಘಟನೆ ಹಿರೇಕೊಡಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

youth missing in iran parents frantic to find their child

ಇರಾನ್ ಗೆ ತೆರಳಿದ್ದ ಯುವಕ ಸಂಪರ್ಕಕ್ಕೆ ಸಿಗದೆ ಪೋಷಕರು ಕಂಗಾಲು

ವಿಕ ಸುದ್ದಿಲೋಕ ಕೊಪ್ಪ (ಚಿಕ್ಕಮಗಳೂರು)

ಮರ್ಚೆಂಟ್ ನೇವಿಯಿಂದ ಕೆಲಸದ ನಿಮಿತ್ತ ಇರಾನ್ ಗೆ ತೆರಳಿದ್ದ ಯುವಕ ಸಂಪರ್ಕ ಸಿಗದೆ ಪೋಷಕರು ಕಂಗಾಲಾಗಿರುವ ಘಟನೆ ತಾಲೂಕಿನ ಹಿರೇಕೊಡಿಗೆ ಗ್ರಾ.ಪಂ. ವ್ಯಾಪ್ತಿಯ ಗಡಿಕಲ್ ಗಣಪತಿ ಕಟ್ಟೆಯಲ್ಲಿಬೆಳಕಿಗೆ ಬಂದಿದೆ.

ಗ್ರಾಮದ ಆಟೊ ಚಾಲಕ ಮಹೇಶ್ ಪೂಜಾರಿ, ಗೀತ ದಂಪತಿ ಪುತ್ರ ನಿಶ್ಚಿತ್ (21) 5 ತಿಂಗಳ ಹಿಂದೆ ಮರ್ಚೆಂಟ್ ನೇವಿ ಉದ್ಯೋಗಿಯಾಗಿದ್ದು, ಕಾರ್ಯನಿಮಿತ್ತ ಇರಾನ್ ಗೆ ತೆರಳಿದ್ದರು. ಕಳೆದ ಶನಿವಾರದಿಂದ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಪೋಷಕರು ಕಂಗಾಲಾಗಿದ್ದು, ತಮ್ಮ ಮಗನನ್ನು ಹುಡುಕಿ ಕೊಡಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಫೋಟೊ-3ಕೆಪಿಎಚ್ ಜೆಎಲ್ ಎನ್ ಡಿಆರ್ 1- ನಿಶ್ಚಿತ್