3 ಎನ್ ಆರ್ ಡಿ-8
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ವಿಕ ಸುದ್ದಿಲೋಕ ನರಗುಂದ
ತಾಲೂಕಿನ ಕುರ್ಲಗೇರಿಯ ವಿ.ಎನ್ .ಪಾಟೀಲ ಪ್ರೌಢ ಶಾಲೆಯಲ್ಲಿರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ವಸ್ತುಪ್ರದರ್ಶನ ನಡೆಯಿತು.
ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ ಹಸಿರು ಪಡೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿಪರಿಸರ ಕುರಿತಾಗಿ ಅನೇಕ ಪ್ರದರ್ಶನಗೊಳಿಸಿ ವಸ್ತುಪ್ರದರ್ಶನದಲ್ಲಿಭಾಗಿಯಾಗಿದ್ದ ವೀಕ್ಷಕರಿಂದ ಮಣ್ಣನೆ ಗಳಿಸಿದರು.
8, 9 ಮತ್ತು 10ನೇ ತರಗತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿಜ್ಞಾನ ವಸ್ತುಪ್ರದರ್ಶನದಲ್ಲಿಭಾಗಿಯಾಗಿದ್ದರು. ವಿಜ್ಞಾನ ವಿಷಯದ ಶಿಕ್ಷಕಿ ಆರ್ .ಸಿ.ಹೂಲಿಗೇರಿ ಮಾತನಾಡಿ, ವಿಜ್ಞಾನ ಅನುಭವ ಮತ್ತು ಅದರ ಅಧ್ಯಯನ ಮಕ್ಕಳಿಗೆ ಅಗತ್ಯವಾಗಿದೆ. ಅವಿಷ್ಕಾರ ಹೊಂದಿದ ಈ ದಿನಗಳಲ್ಲಿನಾವೆಲ್ಲವೈಜ್ಞಾನಿಕವಾಗಿ ಮುಂದುವರಿದಿದ್ದು, ಅದರ ಅನುಭವ ಪಡೆಯುವುದು ಇಂದು ಮುಖ್ಯವಾಗಿದೆ ಎಂದು ತಿಳಿಸಿದರು.
ಶಿಕ್ಷಕ ಉಮೇಶ ಎಂ. ಅವರು, ವೈಜ್ಞಾನಿಕ ಯುಗದಲ್ಲಿಇರುವ ಅನೇಕ ಅವಿಷ್ಕಾರಗಳ ಕುರಿತು ಮಾಹಿತಿ ನೀಡಿದರು. ಶಿಕ್ಷಕ ಬಿ.ಸಿ.ಶರಾಫ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಜ್ಞಾನ ವಸ್ತುಪ್ರದರ್ಶನದಲ್ಲಿಭಾಗಿಯಾಗಿ ವಿಜೇತರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಶಾಲಾ ಶಿಕ್ಷಣ ಮಂಡಳಿಯಿಂದ ಸನ್ಮಾನಿಸಲಾಯಿತು. ಎಸ್ .ಎಂ.ಯಂಡಿಗೇರಿ ಇನ್ನಿತರ ಗÜಣ್ಯರು ಉಪಸ್ಥಿತರಿದ್ದರು. ಶಿಕ್ಷಕ ಎಸ್ .ಪಿ.ದೊಡಮನಿ ಸ್ವಾಗತಿಸಿದರು. ಎಲ್ .ಬಿ.ಬಸವರಡ್ಡೇರ ನಿರೂಪಿಸಿದರು. ಬಿ.ವಿ.ಹೂಗಾರ ವಂದಿಸಿದರು.
ಫೋಟೊ: 3 ಎನ್ ಆರ್ ಡಿ-8:
ನರಗುಂದ ತಾಲೂಕು ಕುರ್ಲಗೇರಿಯ ವಿ.ಎನ್ . ಪಾಟೀಲ ಪ್ರೌಢಶಾಲೆಯಲ್ಲಿರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ವಸ್ತುಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳು ಹಸಿರೇ ಉಸಿರು ಎನ್ನುವ ಅನುಭವದೊಂದಿಗೆ ವಿವಿಧ ಕಲೆಗಳನ್ನು ಪ್ರದರ್ಶನಗೊಳಿಸಿದರು.

