ಮಡಿವಾಳ ಮಾಚಿದೇವರ ಜಯಂತಿ ಆಚರಣೆ

Contributed byshekartnp77@gmail.com|Vijaya Karnataka

ತಿ.ನರಸೀಪುರ ಪಟ್ಟಣದ ಬೈರಾಪುರ ವಾರ್ಡ್‌ನಲ್ಲಿ ಮಡಿವಾಳ ಸಮಾಜದವರು ಶ್ರೀ ವೀರ ಮಡಿವಾಳ ಮಾಚಿದೇವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು. ಮಾಚಿದೇವರ ಮೆರವಣಿಗೆ ನಡೆಯಿತು. ಸಮಾಜದ ಮುಖಂಡರು ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಸಲಹೆ ನೀಡಿದರು. ಮಕ್ಕಳಿಗೆ ಉನ್ನತ ಶಿಕ್ಷಣ, ಸ್ವಸಹಾಯ ಸಂಘಗಳ ಸ್ಥಾಪನೆ, ಸ್ವಂತ ಉದ್ಯೋಗದ ಬಗ್ಗೆ ತಿಳಿಸಿದರು. ಸಮಾಜದ ಮುಖ್ಯವಾಹಿನಿಗೆ ಬರಲು ಕರೆ ನೀಡಿದರು.

celebration of madivala machidevar jayanti a boost to societys development

ಮಡಿವಾಳ ಮಾಚಿದೇವರ

ಜಯಂತಿ ಆಚರಣೆ

ವಿಕ ಸುದ್ದಿಲೋಕ ತಿ.ನರಸೀಪುರ

ಪಟ್ಟಣದ ಬೈರಾಪುರ ವಾರ್ಡ್ ನಲ್ಲಿಮಡಿವಾಳ ಸಮಾಜದ ವತಿಯಿಂದ ಶ್ರೀ ವೀರ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು.

ಈ ವೇಳೆ ಮಾಚಿದೇವರ ಮೆರವಣಿಗೆಗೆ ಚಾಲನೆ ನೀಡಿದ ಬಗರ್ ಹುಕುಂ ಸಮಿತಿ ಸದಸ್ಯರಾದ ಜಯಲಕ್ಷ್ಮಿ ಮಾತನಾಡಿ, ‘‘ಶಿವಶರಣ ಮಾಚಿದೇವರ ಆದರ್ಶ ಪಾಲಿಸುವ ಮೂಲಕ ಮಡಿವಾಳ ಸಮಾಜ ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು,’’ ಎಂದರು.

ಮುಖಂಡ ಗುಂಡಶೆಟ್ಟಿ ಮಾತನಾಡಿ, ‘‘ತಾಲೂಕು ವ್ಯಾಪ್ತಿಯಲ್ಲಿಮಡಿವಾಳ ಸಮಾಜದವರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಮಡಿವಾಳ ಜನಾಂಗ ಸಂಘಟಿತರಾಗಬೇಕು, ಸ್ವಸಹಾಯ ಸಂಘಗಳನ್ನು ಪ್ರಾರಂಭಿಸಬೇಕು. ಸ್ವಂತ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಬೇಕು,’’ ಎಂದು ಸಲಹೆ ನೀಡಿದರು.

ಸಮಾಜದ ಮುಖಂಡರಾದ ಸಿದ್ದರಾಜು, ಕೆಂಪ, ಮುಖಂಡ ರಾದ ಶಂಭುಶೆಟ್ಟಿ, ಶಿವಣ್ಣ, ಬಸವಯ್ಯ, ಸ್ವಾಮಿ, ಜಿ. ಮಹಾದೇವ, ಮಹದೇವಣ್ಣ, ಮಹಾದೇವ, ಮರಿಸ್ವಾಮಿ, ಆಕಾಶ್ , ನವೀನ್ , ಕುಮಾರ್ , ಮಧು, ಪ್ರಕಾಶ್ , ಮಂಜುನಾಥ್ , ಗುರುಪ್ರಸಾದ್ , ಆನಂದಮೂರ್ತಿ, ಮಂಜುನಾಥ್ , ರಾಜು, ಶ್ರುತಿ, ನಾಗರತ್ನಮ್ಮ ಮತ್ತಿತರರು ಭಾಗವಹಿಸಿದ್ದರು.

ಎಂವೈಎಸ್ 1 ಟಿಎನ್ ಪಿ3

ತಿ.ನರಸೀಪುರ ಸಮೀಪದ ಬೈರಾಪುರ ಬಡವಾಣೆಯಲ್ಲಿವೀರ ಮಡಿವಾಳ ಜಯಂತಿ ಆಚರಣೆ ಮಾಡಲಾಯಿತು.