ವಿಕ ಸುದ್ದಿಲೋಕ ಗುಂಡ್ಲುಪೇಟೆ
ಸಮಾಜದ ಸಮಾನತೆಗಾಗಿ ಹೋರಾಡಿದ ಪಂಚಚಾರ್ಯ ಪೀಠಗಳಿಗೆ ಪ್ರಾಚೀನ ಇತಿಹಾಸವಿದೆ ಎಂದು ಚಿಂತಕ ವಿಶ್ವರಾಧ್ಯ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಆರಾಧ್ಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಜಗದ್ಗುರುಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿಮಾತನಾಡಿದರು.
‘‘ಪಂಚಾಚಾರ್ಯ ಜಗದ್ಗುರುಗಳ ಪಟ್ಟಿ 120 ಕ್ಕೂ ಮೀರಿ ಬೆಳೆಯುತ್ತದೆ. ಹೀಗಾಗಿ ಪೀಠಗಳು ತನ್ನದೇ ಆದ ಇತಿಹಾಸ ಇದೆ,’’ ಎಂದು ಹೇಳಿದರು.
‘‘ಜೀವನದಲ್ಲಿಒಳಿತಾಗಬೇಕು ಎಂದು ಬಯಸುವ ಎಲ್ಲರಿಗೂ ದೇವರ ಬಗ್ಗೆ ನಂಬಿಕೆ ಇರಬೇಕು. ಜ್ಞಾನದಿಂದ ವಿಜ್ಞಾನ. ಜ್ಞಾನವಿಲ್ಲದೇ ವಿಜ್ಞಾನ ಪ್ರಯೋಜನಕ್ಕೆ ಬರುವುದಿಲ್ಲ. ಸಮಾಜ ಅಧಃಪತನಕ್ಕೆ ಹೋದಾಗಿ ಧರ್ಮ ನಮ್ಮನ್ನ ಕಾಪಾಡಿದೆ. ಅಲ್ಲದೇ ದಾಖಲೆಗಳಿಲ್ಲಎಂಬ ಕಾರಣಕ್ಕೆ ಪುರಾಣವನ್ನು ನಿರ್ಲಕ್ಷಿಸಲಾಗದು,’’ ಎಂದು ತಿಳಿಸಿದರು.
‘‘ಸರ್ವ ಧರ್ಮ ಸಮಾನತೆ ಸಾರುವ ಏಕೈಕ ಧರ್ಮ ವೀರಶೈವ ಧರ್ಮವಾಗಿದೆ. ಅದೇ ರೀತಿ ಧರ್ಮದ ಹೆಸರಿನಲ್ಲಿಶೋಷÜಣೆ ಮಾಡಬಾರದು ಎಂದು ಪಂಚಚಾರ್ಯರು ಹೇಳಿದ್ದಾರೆ. ಆದ್ದರಿಂದ ಪಂಚಚಾರ್ಯರಿಂದ ಶರಣ ಸಂಸ್ಕೃತಿ ವರೆಗಿನ ಎಲ್ಲಾಬದಲಾವಣೆಗಳನ್ನು ತಿಳಿದು ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿಮುನ್ನಡೆಬೇಕು,’’ ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಎಂ.ಎಸ್ .ತನ್ಮಯ್ , ಆರಾಧ್ಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪುಟ್ಟಸ್ವಾಮಾರಾಧ್ಯ, ಉಪಾಧ್ಯಕ್ಷ ಕೆ.ಸಿ.ರಾಜಶೇಖರ ಆರಾಧ್ಯ, ಕಾರ್ಯದರ್ಶಿ ಎಂ.ಎಸ್ .ಶಿವಕುಮಾರ್ ಆರಾಧ್ಯ ಮತ್ತು ಪದಾಧಿಕಾರಿಗಳು ಹಾಜರಿದ್ದರು.
ಸಿಎಚ್ ಎನ್ 4ಜಿಪಿಟಿ1
ಗುಂಡ್ಲುಪೇಟೆಯಲ್ಲಿನಡೆದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿಚಿಂತಕ ವಿಶ್ವರಾಧ್ಯ ಮಾತನಾಡಿದರು.

