ವಿಧಿಜಧಿಯೀಧಿಭಧಿವ

Contributed byshashidonihaklu@gmail.com|Vijaya Karnataka

ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಸಲಹೆ ನೀಡಲಾಗಿದೆ. ಪರೀಕ್ಷೆಯನ್ನು ಹಬ್ಬದಂತೆ ಭಾವಿಸಿ, ಭಯಪಡದೆ ಆತ್ಮವಿಶ್ವಾಸದಿಂದ ಎದುರಿಸಲು ಪ್ರೋತ್ಸಾಹಿಸಲಾಗಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ, ಆರೋಗ್ಯ ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಮುಂಚಿತವಾಗಿ ತಲುಪಿ, ಪ್ರಶ್ನೆಪತ್ರಿಕೆಯನ್ನು ಅರ್ಥೈಸಿಕೊಂಡು ಉತ್ತರಿಸಲು ತಿಳಿಸಲಾಗಿದೆ. ಯಶಸ್ಸು ನಿಮ್ಮದಾಗಲಿ ಎಂದು ಹಾರೈಸಲಾಗಿದೆ.

exam article no fear success is yours

ಪ್ರಿಯ ವಿದ್ಯಾರ್ಥಿಗಳೇ,

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಣಿಯಾಗುತ್ತಿರುವ ತಾವೆಲ್ಲರೂ ಪರೀಕ್ಷೆಯನ್ನು ಹಬ್ಬದಂತೆ ಭಾವಿಸಿ. ಯಾವುದೇ ಆತಂಕ, ಭಯ ಪಡುವ ಅಗತ್ಯವಿಲ್ಲ. ಏಕೆಂದರೆ, ಈಗಾಗಲೇ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಎದುರಿಸಿದ್ದು, ತಮ್ಮ ತಪ್ಪುಗಳನ್ನು ತಿದ್ದುಕೊಳ್ಳುವ, ಸರಿಪಡಿಸಿಕೊಳ್ಳುವ ಕಾರ ್ಯ ತಾವೆಲ್ಲರೂ ಮಾಡಿದ್ದೀರಿ. ಉಪನ್ಯಾಸಕರು, ಶಿಕ್ಷಕರ ಮಾರ್ಗದರ್ಶನದಂತೆ ಸಮಯ ವ್ಯರ್ಥ ಮಾಡದೆ ಉಳಿಕೆ ದಿನಗಳಲ್ಲಿಉತ್ತಮ ಅಭ್ಯಾಸ ಮಾಡಿ. ಆರೋಗ್ಯದ ಕಡೆ ಗಮನ ಹರಿಸಿ, ಒಳ್ಳೆಯ ಆಹಾರ ಸೇವಿಸಿ. ಮನೆಯಲ್ಲಿಕ್ಲಿಷ್ಟಕರ ವಿಷಯಗಳಿಗೆ ಒತ್ತು ನೀಡಿ ಅಭ್ಯಾಸ, ಮನನ ಮಾಡಿಕೊಳ್ಳಿ. ಪರೀಕ್ಷಾ ಕೇಂದ್ರ ಸಧಿಮಧಿಯಕ್ಕೆ ಮುಂಚಿಧಿತಧಿವಾಧಿಗಿ ತಲುಪಿ, ಪ್ರಶ್ನೆಪತ್ರಿಕೆ ಎರಡು ಬಾರಿ ಓದಿ ಅರ್ಥೈಸಿಕೊಂಡು ಎಲ್ಲಾ ಪ್ರಶ್ನೆಗಳಿಗೆ ಆತುರ ಪಡದೆ ಉತ್ತರ ಬರೆಯಿರಿ. ಶುಭವಾಗಲಿ.

-ಅರ್ಜುನ್ ಎಚ್ .ಎ. | ವ್ಯವಸ್ಥಾಪಕ ನಿರ್ದೇಶಕ, ವಿದ್ಯಾ ಗ್ರೂಪ್ ಆಫ್ ಇನ್ಸಿ$್ಟಟ್ಯೂಷನ್ಸ್ , ತುಧಿಮಧಿಕೂಧಿರು

ಕೋಟ್

ಪ್ರೀತಿಯ ವಿದ್ಯಾರ್ಥಿಗಳೇ...

ಪರೀಕ್ಷೆ ಭಯಪಡುವ ವಿಷಯವಲ್ಲ, ಅದು ನಿಮ್ಮ ಕನಸುಗಳಿಗೆ ದಾರಿ ತೆರೆದಿಡುವ ಒಂದು ಅವಕಾಶ. ನೆನಪಿರಲಿ; ನೀವು ಬರೆಯುವ ಉತ್ತರಪತ್ರಿಕೆಯ ಪ್ರತಿ ಸಾಲುಗಳು ನಿಮ್ಮ ಉಜ್ವಲ ಭವಿಷ್ಯದ ಯಶೋಗಾಥೆಗೆ ಅಡಿಪಾಯವಾಗಲಿದೆ. ಒತ್ತಡವಿಲ್ಲದೆ, ಹೆಚ್ಚು ಆತ್ಮವಿಶ್ವಾಸದಿಂದಮ ನಿಮ್ಮ ಪರಿಶ್ರಮದಲ್ಲಿನಂಬಿಕೆ ಇಟ್ಟು ಪರೀಕ್ಷೆಗಳನ್ನು ಎದುರಿಸಿ. ಯಶಸ್ಸು ನಿಮ್ಮದಾಗಲಿ, ನಿಮಗೆಲ್ಲಾ ಶುಭವಾಗಲಿ

-ರುದ್ರೇಶ್ ಕೆ.ಎನ್ . | ಪ್ರಿನ್ಸಿಪಾಲ್ , ಪ್ರಿಯದರ್ಶಿನಿ ಪ.ಪೂ.ಕಾಲೇಜು, ಕೊರಟಗೆರೆ

4ಟಿಯುಎಂ1 : ಅರ್ಜುನ್ ಎಚ್ .ಎ, ವ್ಯವಸ್ಥಾಪಕ ನಿರ್ದೇಶಕ, ವಿದ್ಯಾ ಗ್ರೂಪ್ ಆಫ್ ಇನ್ಸಿ$್ಟಟ್ಯೂಷನ್ಸ್

4ಟಿಯುಎಂ2 : ರುದ್ರೇಶ್ ಕೆ.ಎನ್ , ಪ್ರಿನ್ಸಿಪಾಲ್ , ಪ್ರಿಯದರ್ಶಿನಿ ಪ.ಪೂ.ಕಾಲೇಜು, ಕೊರಟಗೆರೆ