ಜೀಮ ವಿಮೆ ಯೋಜನೆ ಸಹಕಾರಿ

Contributed byasmysvkr@gmail.com|Vijaya Karnataka

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮಡಿಕೇರಿ ಪ್ರಾದೇಶಿಕ ವ್ಯವಸ್ಥಾಪಕ ಉದಯ ಕುಮಾರ್‌ ಅವರು ಜೀವ ವಿಮೆ ಯೋಜನೆಗಳ ಮಹತ್ವವನ್ನು ತಿಳಿಸಿದರು. ಚಪ್ಪರದಹಳ್ಳಿ ಗ್ರಾಮದಲ್ಲಿ ಪಿಎಂಜೆಜೆಬಿವೈ ವಿಮೆದಾರರಾದ ಶೋಭಾ ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಅವರ ಪತಿ ಪ್ರದೀಪ್‌ ಅವರಿಗೆ ಎರಡು ಲಕ್ಷ ರೂ. ವಿಮೆ ಚೆಕ್‌ ಹಸ್ತಾಂತರ ಮಾಡಲಾಯಿತು. ಗ್ರಾಮೀಣ ಬ್ಯಾಂಕ್‌ ನಲ್ಲಿ ದೊರೆಯುವ ವಿಮೆ ಯೋಜನೆಗಳಿಗೆ ನೋಂದಣಿ ಮಾಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.

family support through jeeva insurance scheme uday kumar from karnataka grameena bank

ಜೀಮವಿಮೆ ಯೋಜನೆ ಸಹಕಾರಿ

ವಿಕ ಸುದ್ದಿಲೋಕ ಪಿರಿಯಾಪಟ್ಟಣ

ಜೀವ ವಿಮೆ ಯೋಜನೆಗಳು ಭವಿಷ್ಯಕ್ಕೆ ಸಾಕಷ್ಟು ಸಹಕಾರಿಯಾಗಿವೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಡಿಕೇರಿ ಪ್ರಾದೇಶಿಕ ವ್ಯವಸ್ಥಾಪಕ ಉದಯ ಕುಮಾರ್ ಹೇಳಿದರು.

ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಪ್ಪರದಹಳ್ಳಿ ಶಾಖೆಯಲ್ಲಿವಿಮೆ ಯೋಜನೆಯ ಚೆಕ್ ಹಸ್ತಾಂತರ ಮಾಡಿ ಮಾತನಾಡಿದ ಅವರು, ‘‘ಆಧುನಿಕ ಜೀವನದಲ್ಲಿದುಡಿಯುವ ವ್ಯಕ್ತಿಯು ತನ್ನ ಕುಟುಂಬಕ್ಕೆ ಅವಲಂಬಿತನಾಗಿರುತ್ತಾನೆ. ಕೆಟ್ಟ ಸಮಯದಿಂದ ವ್ಯಕ್ತಿಯನ್ನು ಕಳೆದುಕೊಂಡಾಗ ಕುಟುಂಬಕ್ಕೆ ಎಲ್ಲಾರೀತಿಯ ಸಂಕಷ್ಟಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿವ್ಯಕ್ತಿ ವಿಮೆ ಯೋಜನೆಗೆ ಒಳಪಟ್ಟು, ಮಾಡಿಸಿದರೆ ಅದು ಅವರ ಕುಟುಂಬಕ್ಕೆ ಸಹಕಾರಿಯಾಗಲಿದೆ. ಹಾಗಾಗಿ ಪ್ರತಿಯೊಬ್ಬರೂ ಗ್ರಾಮೀಣ ಬ್ಯಾಂಕ್ ನಲ್ಲಿದೊರೆಯುವ ಪಿಎಂಜೆಜೆಬಿವೈ ಹಾಗೂ ಪಿಎಂಎಸ್ ಬಿವೈ ಎಂಬ ಕೇಂದ್ರ ಸರಕಾರದ ಮತ್ತು ಕಡಿಮೆ ಮೊತ್ತದ ವಿಮೆಗಳಿಗೆ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಅಲ್ಲದೆ, ಸಿಗುವಂತಹ ಎಲ್ಲಾಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು,’’ ಎಂದರು.

ಬ್ಯಾಂಕ್ ಗ್ರಾಹಕರು ಹಾಗೂ ಪಿಎಂಜೆಜೆಬಿವೈ ವಿಮೆದಾರರಾದ ಶೋಭಾ ಅವರು ಅಕಾಲಿಕ ಮರಣ ಹೊಂದಿದ ಹಿನ್ನೆಲೆ ಅವರ ಪತಿ ಪ್ರದೀಪ್ ಅವರಿಗೆ ಎರಡು ಲಕ್ಷ ರೂ. ವಿಮೆ ಚೆಕ್ ಅನ್ನು ಹಸ್ತಾಂತರ ಮಾಡಲಾಯಿತು. ಶಾಖಾ ವ್ಯವಸ್ಥಾಪಕ ಜಿ.ಮಧುಸೂದನ್ , ಸಿಬ್ಬಂದಿ ಜಾದಿ ಸಂದೀಪ್ ಕುಮಾರ್ , ಪುನೀತ್ , ಗ್ರಾಮಸ್ಥರು ಇದ್ದರು.

ಫೋಟೋ

ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಪ್ಪರದಹಳ್ಳಿ ಶಾಖೆಯಿಂದ ವಿಮೆ ಯೋಜನೆಯ ಚೆಕ್ ಅನ್ನು ಮಡಿಕೇರಿ ಪ್ರಾದೇಶಿಕ ವ್ಯವಸ್ಥಾಪಕ ಉದಯ ಕುಮಾರ್ ಹಸ್ತಾಂತರ ಮಾಡಿದರು.

ಎಂವೈಎಸ್ 28ಬಿಟಿಪಿ2