ಮಂಜೇಶ್ವರ ತಾಲೂಕು ಕಚೇರಿಗೆ ಸ್ವಂತ ಕಟ್ಟಡಕ್ಕೆ ಪ್ರಸ್ತಾವನೆ

Contributed bygangadhar.korekkana@gmail.com|Vijaya Karnataka

ಮಂಜೇಶ್ವರ ತಾಲೂಕಿಗೆ ಸ್ವಂತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2014ರಲ್ಲಿ ರಚನೆಯಾದ ತಾಲೂಕು ಕಚೇರಿ ಇನ್ನೂ ತಾತ್ಕಾಲಿಕ ಕಟ್ಟಡದಲ್ಲಿದೆ. ಇದು ಸಾರ್ವಜನಿಕ ಸೇವೆಗೆ ಅಡ್ಡಿಯಾಗುತ್ತಿದೆ. ಶಾಶ್ವತ ಕಟ್ಟಡ ಅತ್ಯಗತ್ಯ ಎಂದು ಅಭಿವೃದ್ಧಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷದ್‌ ವರ್ಕಾಡಿ ಅಧ್ಯಕ್ಷತೆ ವಹಿಸಿದ್ದರು.

proposal for a permanent building for mangaluru tahsil office development committees suggestion

ಕಾಸರಗೋಡು : ಮಂಜೇಶ್ವರ ತಾಲೂಕಿಗೆ ತನ್ನದೇ ಆದ ಶಾಶ್ವತ ಕಚೇರಿ ಕಟ್ಟಡವನ್ನು ಮಂಜೂರು ಮಾಡಲು ತಾಲೂಕು ಅಭಿವೃದ್ಧಿ ಸಮಿತಿ ಸಭೆ ಪ್ರಸ್ತಾಪಿಸಿದೆ.

ಮಂಜೇಶ್ವರ ತಾಲೂಕು ಸಭಾಂಗಣದಲ್ಲಿ ಸಭೆ ಸೇರಿದ ಅಭಿವೃದ್ಧಿ ಸಮಿತಿಯು ಈ ಬೇಡಿಕೆಯನ್ನು ಮುಂದಿಟ್ಟಿತು. 2014 ರಲ್ಲಿರಚನೆಯಾದ ಮಂಜೇಶ್ವರ ತಾಲೂಕು ಕಚೇರಿಯು ಸ್ವಂತ ಕಟ್ಟಡವಿಲ್ಲದೆ ತಾತ್ಕಾಲಿಕ ಕಟ್ಟಡದಲ್ಲಿಕಾರ್ಯನಿರ್ವಹಿಸುತ್ತಿದೆ. ಇದು ಸಾರ್ವಜನಿಕ ಸೇವೆಗೆ ಸಮಸ್ಯೆಯಾಗುತ್ತಿದೆ ಎಂದು ಸಭೆಯು ಗಮನಿಸಿತು.

ಮಂಜೇಶ್ವರ ತಾಲೂಕಿನ ಜನರ ಆಡಳಿತ ಮತ್ತು ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲು ಶಾಶ್ವತ ಕಚೇರಿ ಕಟ್ಟಡ ಅತ್ಯಗತ್ಯ ಎಂದು ಅಭಿವೃದ್ಧಿ ಸಮಿತಿಯು ಅವಲೋಕಿಸಿದೆ.ಜಿಲ್ಲಾಪಂಚಾಯಿತಿ ಸದಸ್ಯ ಹರ್ಷದ್ ವರ್ಕಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಮಂಜೇಶ್ವರ ತಹಸೀಲ್ದಾರ್ ಪಿ.ಸಜಿತ್ ಸ್ವಾಗತಿಸಿದರು. ಸಭೆಯಲ್ಲಿಜನÜ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.