ಇಂದು ಬಳಸಿ... ಸಮಾಜಗಳ ಕೊಡುಗೆ ಅರಿತುಕೊಳ್ಳಿ

Contributed bymahanteshsangam31@gmail.com|Vijaya Karnataka

ಬಸವನಬಾಗೇವಾಡಿಯಲ್ಲಿ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ನಡೆಯಿತು. ಯಾವುದೇ ಸಮುದಾಯವನ್ನು ಟೀಕಿಸದೆ, ಅವರ ಕೊಡುಗೆಗಳನ್ನು ಅರಿಯಬೇಕು ಎಂದು ಪ್ರಾಚಾರ್ಯ ಸಂಗಮೇಶ ಪೂಜಾರಿ ಹೇಳಿದರು. ಸಂಪ್ರದಾಯ ಉಳಿಸುವ ಬ್ರಾಹ್ಮಣರನ್ನು ಎಲ್ಲರೂ ಟೀಕಿಸುತ್ತಾರೆ ಎಂದರು. ಜಂಗಮ ಸಮಾಜದ ಧರ್ಮ ಕಾರ್ಯಗಳಿಗೆ ಸಹಕಾರ ನೀಡುವುದಾಗಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ತಿಳಿಸಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು.

renuka acharya jayanti event understanding the contributions of societies

ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ | ಪ್ರಾಚಾರ್ಯ ಸಂಗಮೇಶ ಪೂಜಾರಿ ಸಲಹೆ

ಸಮಾಜಗಳ ಕೊಡುಗೆ ಅರಿತುಕೊಳ್ಳಿ

ವಿಕ ಸುದ್ದಿಲೋಕ ಬಸವನಬಾಗೇವಾಡಿ

‘‘ಯಾವುದೇ ಸಮುದಾಯವನ್ನು ಟೀಕಿಸುವ ಬದಲು ಸಮಾಜಕ್ಕೆ ಅದರ ಕೊಡುಗೆಗಳೇನು ಎಂಬುದನ್ನು ಅರಿಯಬೇಕು, ಕೊಂಡಾಡಬೇಕು,’’ ಎಂದು ಪ್ರಾಚಾರ್ಯ ಸಂಗಮೇಶ ಪೂಜಾರಿ ಹೇಳಿದರು.

ಇಲ್ಲಿನ ಕಾಳಿಕಾಮಾತೆ ದೇವಾಲಯದ ಗಾಯತ್ರಿ ಭವನದಲ್ಲಿಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿಅವರು ಉಪನ್ಯಾಸ ನೀಡಿದರು.

‘‘ಸಂಪ್ರದಾಯ ಉಳಿಸಿ, ಬೆಳೆಸುತ್ತಿರುವ ಬ್ರಾಹ್ಮಣರು ಯಾರನ್ನೂ ಬೈಯುವುದಿಲ್ಲ. ಆದರೆ, ಅವರನ್ನು ಎಲ್ಲರೂ ಬೈಯುತ್ತಾರೆ. ಸಂಸ್ಕೃತಿ ಉಳಿದರೆ ದೇಶ ಉಳಿಯುತ್ತದೆ,’’ ಎಂದರು.

‘‘28 ಆಮಗದಿಂದ ಬಂದ ವೀರಶೈವ ಶಿವಜಪ, ಶಿವಧ್ಯಾನ, ಶಿವದಾನ, ಶಿವತಪ ಹೇಳಿದೆ. ನಾಲ್ಕು ಯುಗದಿಂದಲೂ ರೇಣುಕಾಚಾರ್ಯರು ಇದ್ದರು ಎಂದೇ ಹೇಳುತ್ತಾರೆ. ಬಹುದೇವೋಪಾಸನೆ, ಏಕದೇವೋಪಾಸನೆಯೂ ದೇಶದಲ್ಲಿದೆ,’’ ಎಂದು ಹೇಳಿದರು.

ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ‘‘ಜಂಗಮ ಸಮಾಜ ಮಾಡುವ ಯಾವುದೇ ಧರ್ಮ ಕಾರ್ಯಗಳಿಗೆ ನಮ್ಮ ಸಹಕಾರವಿದೆ. ಪಟ್ಟಣದಲ್ಲಿರೇಣುಕಾಚಾರ್ಯರ ವೃತ್ತವಾಗಲು ಕೋರಿದ್ದೀರಿ. ಈ ಬಗ್ಗೆ ಜಾಗ ಗುರುತಿಸಿ ಹೇಳಿದರೆ ಸಮಾಲೋಚನೆ ನಡೆಸಲಾಗುವುದು,’’ ಎಂದರು.

ಸಾನ್ನಿಧ್ಯವಹಿಸಿದ್ದ ಮನಗೂಳಿಯ ಸಂಗನಬಸವ ಶಿವಾಚಾರ್ಯರು, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು, ಸಿದ್ದಲಿಂಗ ಮಹಾಸ್ವಾಮಿಗಳು, ಮುಖಂಡ ಶಿವನಗೌಡ ಬಿರಾದಾರ ಮಾತನಾಡಿದರು. ಭೃಂಗೀಶ ಶಿವಾಚಾರ್ಯರು, ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರುದ್ರಮುನಿ ಸಾರಂಗಮಠ, ಬಸವರಾಜ ಹಾರಿವಾಳ, ಸುರೇಶ ಹಾರಿವಾಳ, ಪಿ.ಎಲ್ .ಹಿರೇಮಠ, ರಾಜು ಗಣಾಚಾರಿ, ಶಿವಲಿಂಗಯ್ಯ ತೆಗ್ಗಿನಮಠ ಸೇರಿ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಫೋಟೊ

04ಬಿಬಿಡಿ1 ಫೋಟೊ (ರೇಣುಕಾಚಾರ್ಯರು)

ಬಸವನಬಾಗೇವಾಡಿಯಲ್ಲಿರೇಣುಕಾಚಾರ್ಯರ ಜಯಂತಿ, ಯುಗಮಾನೋತ್ಸವ ಸಮಾರಂಭವನ್ನು ಶ್ರೀಗಳು, ಗಣ್ಯರು ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಉದ್ಘಾಟಿಸಿದರು.