ವಿಕ ಸುದ್ದಿಲೋಕ ಮಾಗಡಿ
ಶಾಸಕರು ಅಭಿವೃದ್ಧಿಗಿಂತ ಮಾತಿನಲ್ಲೇ ಜನರನ್ನು ಮರಳು ಮಾಡುತ್ತಿದ್ದಾರೆ. ನಾನು ಕೂಡ ಈ ಕ್ಷೇತ್ರದ ಮಗನಾಗಿದ್ದು ಮಾಗಡಿಯಲ್ಲಿನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಶ್ನೆ ಮಾಡುವ ಹಕ್ಕು ನನಗಿದೆ ಎಂದು ಶಾಸಕ ಬಾಲಕೃಷ್ಣ ವಿರುದ್ಧ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್ .ಎಂ. ಕೃಷ್ಣಮೂರ್ತಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತಿನಿಂದ ಮಾಗಡಿಗೆ ಯಾವುದೇ ಉಪಯೋಗವಿಲ್ಲ. ಕೆಲಸ ಮಾಡಿ ತೋರಿಸಲಿ. ಜನರಿಗೆ ದಿಕ್ಕು ತಪ್ಪಿಸುವ ಕೆಲಸ ನಿಲ್ಲಿಸಲಿ. ಈ ಮಣ್ಣಿನ ಮಕ್ಕಳನ್ನು ಮಳ್ಳರನ್ನಾಗಿ ಮಾಡಬೇಡಿ ಎಂದು ಕಿಡಿಕಾರಿದರು.
ನೂತನ ಆಸ್ಪತ್ರೆಗೆ ನಿಮ್ಮಿಂದ ಅಡ್ಡಿಯಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಶಾಸಕರು ಮಾಗಡಿಯಲ್ಲಿಆಸ್ಪತ್ರೆ ಕಟ್ಟುವ ವಿಚಾರದ ಬಗ್ಗೆ ಪ್ರಸ್ತಾಪಿಸುತ್ತಿರುವುದನ್ನು ಟೀಕಿಸಿ, ‘ನೀವು ಕಟ್ಟುತ್ತಿರುವ ಕಟ್ಟಡಗಳೇ ಐದಾರು ವರ್ಷಕ್ಕೆ ಬೀಳುವ ಹಂತಕ್ಕೆ ಹೋಗುತ್ತಿವೆ. ಅಂತಹದರಲ್ಲಿನೀವು ಆಸ್ಪತ್ರೆ ಕಟ್ಟಿ ಜನರನ್ನು ಸಂಕಷ್ಟಕ್ಕೆ ಈಡುಮಾಡಬೇಡಿ. ಹತ್ತು-ಹನ್ನೆರಡು ವರ್ಷಕ್ಕೆ ಹಾಳಾಗುವ ಬಿಲ್ಡಿಂಗ್ ಗಳಿಂದ ಯಾವ ಅಭಿವೃದ್ಧಿ ಸಾಧ್ಯ?’ ಎಂದು ಪ್ರಶ್ನಿಸಿದರು.
‘ನಾನು ಈ ಮಣ್ಣಿನ ಮಗ, ಒಕ್ಕಲಿಗ ಮಗ ಹಾಗೂ ಕಾಲಭೈರವನ ಪುತ್ರ. ತಪ್ಪು ಕಂಡಾಗ ಎದೆತಟ್ಟಿ ಖಂಡಿಸುತ್ತೇನೆ. ನೀವು ಮಾಡುತ್ತಿರುವ ತಪ್ಪುಗಳು ಈಗ ಗುಡ್ಡದಷ್ಟಾಗಿದೆ ಎಂದು ಗುಡುಗಿದರು. ಮಾತಿನಿಂದ ಅಭಿವೃದ್ಧಿ ಸಾಧ್ಯವಿಲ್ಲ. ಜನರಿಗೆ ಮತ್ತು ದೇವರಿಗೆ ಮೆಚ್ಚುಗೆಯಾಗುವ ಕೆಲಸವನ್ನು ಶಾಸಕರು ಮಾಡಲಿ. ಕಳ್ಳ ಯಾರು, ಸುಳ್ಳ ಯಾರು ಎಂಬುದು ಇಡೀ ಜಗತ್ತಿಗೆ ತಿಳಿಯುವ ಕಾಲ ದೂರವಿಲ್ಲಎಂದು ಎಚ್ .ಎಂ.ಕೃಷ್ಣಮೂರ್ತಿ ಶಾಸಕರ ವಿರುದ್ಧ ಕಿಡಿಕಾರಿದರು.
3 ಮಾಗಡಿ 2 : ಎಚ್ .ಎಂ.ಕೃಷ್ಣಮೂರ್ತಿ ಭಾವಚಿತ್ರ

