ಚೌಡೇಶ್ವರಿ ದೇಗುಲದ ಪ್ರತಿಷ್ಠಾಪನೆ

Contributed byprk.k73@gmail.com|Vijaya Karnataka

ಮುಳಬಾಗಲು ತಾಲೂಕಿನ ಕುನಿಬಂಡೆ ಗ್ರಾಮದಲ್ಲಿ ನೂತನ ಚೌಡೇಶ್ವರಿ ದೇವಾಲಯದ ಪ್ರತಿಷ್ಠಾಪನೆ ನಡೆಯಿತು. ದೇವಾಲಯಗಳು ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ತರುತ್ತವೆ ಎಂದು ಜಿ.ವಡ್ಡಹಳ್ಳಿ ವೇಣುಗೋಪಾಲ ರೆಡ್ಡಿ ತಿಳಿಸಿದರು. ದೇವಾಲಯಗಳು ಜನರಲ್ಲಿದ್ದ್ವೇಷ, ಅಸೂಯೆಗಳನ್ನು ದೂರಮಾಡಿ ಪ್ರೀತಿ ಬಾಂಧವ್ಯವನ್ನು ಹೆಚ್ಚಿಸುತ್ತವೆ. ಕೃಷಿ ಚಟುವಟಿಕೆಗಳ ನಡುವೆ ಜಾತ್ರೆ, ಪೂಜಾ ಕಾರ್ಯಕ್ರಮಗಳು ಜನರಿಗೆ ವಿಶ್ರಾಂತಿ ನೀಡುತ್ತವೆ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಸಂತೋಷ ಹೆಚ್ಚುತ್ತದೆ.

inauguration of chowdeshwari temple to celebrate unity and peace

ಚೌಡೇಶ್ವರಿ ದೇಗುಲದ ಪ್ರತಿಷ್ಠಾಪನೆ

ವಿಕ ಸುದ್ದಿಲೋಕ ಮುಳಬಾಗಲು

ಗ್ರಾಮಗಳಲ್ಲಿಒಂದು ದೇವಾಲಯ ಹಾಗೂ ಅಶ್ವತ್ಥ ಕಟ್ಟೆ ಇದ್ದರೆ ಅಂತಹ ಗ್ರಾಮಗಳಲ್ಲಿಶಾಂತಿ ನೆಮ್ಮದಿ ಸಿಗುತ್ತದೆ ಎಂದು ಸಮಾಜ ಸೇವಕ ಜಿ.ವಡ್ಡಹಳ್ಳಿ ವೇಣುಗೋಪಾಲ ರೆಡ್ಡಿ ತಿಳಿಸಿದರು.

ತಾಲೂಕಿನ ಕುನಿಬಂಡೆ ಗ್ರಾಮದಲ್ಲಿನೂತನ ಚೌಡೇಶ್ವರಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಗ್ರಾಮಗಳಲ್ಲಿಒಂದೊಂದು ದೇವಾಲಯ ಇದ್ದರೆ ಜನರಲ್ಲಿದ್ವೇಷ, ಅಸೂಯೆ, ಮತ್ಸರ ಮತ್ತಿತರರ ಕೆಟ್ಟ ವಿಚಾರಗಳು ದೂರವಾಗಿ ಭಕ್ತಿ ತುಂಬಿಕೊಳ್ಳುತ್ತದೆ.ಇದರಿಂದಾಗಿ ಜನರಲ್ಲಿಪ್ರೀತಿ ಬಾಂಧವ್ಯಗಳು ಏರ್ಪಡುತ್ತವೆ.ಹೀಗಾಗಿ ಜನರಲ್ಲಿಶುದ್ಧ ಭಕ್ತಿ ಇದ್ದರೆ ಪರಿಶುದ್ಧ ಮನಸ್ಸು ಏರ್ಪಡುತ್ತದೆ ಎಂದರು.

ಸದಾಕಾಲ ಕೃಷಿ ಮತ್ತಿತರರ ಚಟುವಟಿಕೆಗಳಲ್ಲಿಜನ ತೊಡಗಿ ಬಿಡುವಿಲ್ಲದೆ ದಣಿದಿರುತ್ತಾರೆ.ಇಂತಹ ಕಾರಣಗಳಿಂದಾಗಿ ಜಾತ್ರೆ, ದೀಪೋತ್ಸವ ಮತ್ತಿತರರ ಪೂಜಾ ಕಾರ್ಯಕ್ರಮಗಳನ್ನು ನಡೆಸಿದರೆ ಜನ ವಿಶೇಷ ದಿನಗಳಲ್ಲಾದರೂ ವಿಶ್ರಾಂತಿ ತೆಗೆದುಕೊಳ್ಳಲು ಅವಕಾಶ ಸಿಕ್ಕಂತಾಗುತ್ತದೆ. ಇದರಿಂದ ಮಾನಸಿಕ ಒತ್ತಡಗಳು ಕಡಿಮೆಯಾಗಿ ಮನಸ್ಸು ಸಂತೋಷದಿಂದ ಪುಳಕಿತಗೊಳ್ಳುತ್ತದೆ ಎಂದು ಹೇಳಿದರು.

ಟಿಎಪಿಸಿಎಂಎಸ್ ನಿರ್ದೇಶಕ ಅಂಬ್ಲಿಕಲ್ ಮಲ್ಲಿಕಾರ್ಜುನ ರೆಡ್ಡಿ, ಮುಖಂಡರಾದ ವೆಂಕಟರೆಡ್ಡಿ, ರಾಮಾಂಜಿ, ತಾತಿಘಟ್ಟ ರವಿ, ವೆಂಕಟರಾಮ ರೆಡ್ಡಿ, ವೆಂಕಟ ರೆಡ್ಡಿ ಹಾಜರಿದ್ದರು.

13 ಎಂ.ಬಿ.ಎಲ್ ಪೋಟೋ 1 ಮುಳಬಾಗಲು ತಾಲೂಕಿನ ಕುನಿಬಂಡೆ ಗ್ರಾಮದಲ್ಲಿನೂತನ ಚೌಡೇಶ್ವರಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು.