ನಿಷ್ಠಾವಂತ ಕಾರ್ಯಕರ್ತರೇ ಬಿಜೆಪಿ ಶಕ್ತಿ
ವಿಕ ಸುದ್ದಿಲೋಕ ಹೊಸದುರ್ಗ
‘ದೇವರಿಗೆ ತೋರುವ ಭಕ್ತಿ, ಗೌರವದಷ್ಟೇ ಗೌರವವನ್ನು ಪಕ್ಷಕ್ಕೂ ನೀಡುವ ನಿಷ್ಠಾವಂತ ಕಾರ್ಯಕರ್ತರು ಇರುವುದು ಬಿಜೆಪಿಯ ದೊಡ್ಡ ಶಕ್ತಿ,’ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿಶನಿವಾರ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ಸಭೆಯಲ್ಲಿಮಾತನಾಡಿ, ‘ಪಕ್ಷದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಹಾಗೂ ಸಮಾಜದ ಬಗ್ಗೆ ಕಾಳಜಿ ಇಟ್ಟು ದುಡಿಯುವವರಿಗೆ ಬಿಜೆಪಿಯಲ್ಲಿಅನೇಕ ಅವಕಾಶಗಳು ದೊರೆಯುತ್ತವೆ. ಅಧಿಕಾರ ಸಿಗದಿದ್ದರೂ ಗೌರವಯುತವಾದ ಸ್ಥಾನಮಾನ, ಸಮಾಜದ ಮಾನ್ಯತೆ ಸಿಕ್ಕೇ ಸಿಗುತ್ತದೆ,’ ಎಂದು ಹೇಳಿದರು.
ಕೋಲಾರದಿಂದ ದಾವಣಗೆರೆವರೆಗೆ ವ್ಯಾಪಿಸಿರುವ ಆಗ್ನೇಯ ಪದವೀಧರ ಕ್ಷೇತ್ರದಲ್ಲಿನಡೆದ ಹತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿಎಂಟು ಬಾರಿ ಬಿಜೆಪಿ ಜಯಗಳಿಸಿರುವುದು ಪಕ್ಷದ ತತ್ವ ಮತ್ತು ಕಾರ್ಯಕರ್ತರ ಪರಿಶ್ರಮಕ್ಕೆ ದೊರೆತ ಮನ್ನಣೆ. ಈ ಬಾರಿಯ ಚುನಾವಣೆಯಲ್ಲೂಕಾರ್ಯಕರ್ತರ ಶಕ್ತಿ ಮತ್ತು ಪದವೀಧರರ ಬೆಂಬಲದಿಂದ ಭಾರೀ ಮತಗಳ ಅಂತರದಲ್ಲಿಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ1994ರಿಂದ ನಡೆದ ಎಲ್ಲಚುನಾವಣೆಗಳಲ್ಲಿಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಪದವೀಧರ ಕ್ಷೇತ್ರದಲ್ಲಿಸ್ಪರ್ಧಿಸಲು ಪಕ್ಷ ಅವಕಾಶ ನೀಡಿದೆ. ಇದರ ಭಾಗವಾಗಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿಕ್ಷೇತ್ರ ಪ್ರವಾಸ ಮಾಡಿ, ಮತದಾರರನ್ನು ಸಂಪರ್ಕಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬುರುಡೇಕಟ್ಟೆ ರಾಜೇಶ್ ಮಾತನಾಡಿ, ದಾವಣಗೆರೆ ನಗರದ ಸೋಮೇಶ್ವರ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕರಾಗಿರುವ ಕೆ.ಎಂ.ಸುರೇಶ್ , ಮೂರು ದಶಕಗಳಿಂದ ಬಿಜೆಪಿಯಲ್ಲಿದ್ದಾರೆ. ವಿದ್ಯಾರ್ಥಿ ಪರಿಷತ್ ಮೂಲಕ ರಾಜಕೀಯ ಪ್ರವೇಶಿಸಿ, ಬಿಜೆಪಿ ಯುವ ಮೋರ್ಚಾ, ಶಿಕ್ಷಕರ ಪ್ರಕೋಷ್ಠ ಸೇರಿ ಹಲವು ಘಟಕಗಳಲ್ಲಿಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ. ಪಕ್ಷ ಇವರ ಸೇವೆಯನ್ನು ಗುರುತಿಸಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಇವರ ಗೆಲುವಿಗೆ ತಾಲೂಕು ಬಿಜೆಪಿ ಘಟಕ ಶ್ರಮವಹಿಸಿ ದುಡಿಯಲಿದೆ ಎಂದರು.
ಇದೇ ವೇಳೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗೂಳಿಹಟ್ಟಿ ಜಗದೀಶ್ , ಜಿಲ್ಲಾಕಾರ್ಯದರ್ಶಿ ಎನ್ .ಆರ್ .ಜಗದೀಶ್ , ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ್ , ಚಿತ್ತಪ್ಪ, ಪನ್ನಗ ರಾಯ್ಕರ್ , ಸುಧಾಕರ್ ಕಾರ್ಯದರ್ಶಿ ಅನುಸೂಯ ಜಗನ್ನಾಥ್ , ಹೇರೂರು ಮಂಜುನಾಥ್ , ಮಧು, ಮಲ್ಲಿಕಾರ್ಜುನ್ , ಹೆಗ್ಗೆರೆ ಶಂಕ್ರಪ್ಪ, ಶ್ರೀನಿವಾಸ್ , ಮೂಡಲಗಿರಿ, ಕಲ್ಲೇಶ್ , ಮಳಲಿ ವಿಜಯಕುಮಾರ್ ಇತರರಿದ್ದರು.
ಅಭ್ಯರ್ಥಿ ಕೆ.ಎಂ.ಸುರೇಶ್ ಅವರು ಸಭೆಗೂ ಮುನ್ನ ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಭೇುಟಿಯಾಗಿ ಆಶೀರ್ವಾದ ಪಡೆದರು.
--
ಚಿತ್ರಮಾಹಿತಿ23ಎಚ್ .ಎಸ್ .ಡಿ1:
ಹೊಸದುರ್ಗ ಪಟ್ಟಣದ ಬಿಜೆಪಿ ಕಚೇರಿಯಲ್ಲಿಶನಿವಾರ ನಡೆದ ಸಭೆಯಲ್ಲಿಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್ ಮಾತನಾಡಿದರು.

