ಮೇಜರ್ ಅಭಿಲಾಷಾಗೆ ವಿಶ್ವಸಂಸ್ಥೆ ಗೌರವ
ಭಾರತೀಯ ಸೇನೆಯ ಅಧಿಕಾರಿ ಮೇಜರ್ ಅಭಿಲಾಷಾ ಬರಾಕ್ ಅವರು ‘2025ರ ವಿಶ್ವಸಂಸ್ಥೆಯ ಮಿಲಿಟರಿ ಲಿಂಗ ಸಮಾನತೆ ಪ್ರತಿಪಾದಕ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಲೆಬನಾನ್ ನಲ್ಲಿರುವ ವಿಶ್ವಸಂಸ್ಥೆಯ ಮಧ್ಯಂತರ ಪಡೆಯಲ್ಲಿಭಾರತೀಯ ಬೆಟಾಲಿಯನ್ ನ ‘ಮಹಿಳಾ ತೊಡಗಿಸಿಕೊಳ್ಳುವಿಕೆ ತಂಡ’ದ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿಶ್ವಸಂಸ್ಥೆಯ ಶಾಂತಿ ಪಾಲನಾ ಕಾರ್ಯಾಚರಣೆಗಳ ಇಲಾಖೆಯ ಅಡಿಯಲ್ಲಿಬರುವ ‘ಮಿಲಿಟರಿ ವ್ಯವಹಾರಗಳ ಕಚೇರಿ’ಯು 2016ರಲ್ಲಿಈ ಪ್ರಶಸ್ತಿಯನ್ನು ಸ್ಥಾಪಿಸಿತು. ಲಿಂಗ ಸಮಾನತೆ ಹಾಗೂ ‘ಮಹಿಳೆ, ಶಾಂತಿ ಮತ್ತು ಭದ್ರತೆ’ಗೆ ಸಂಬಂಧಿಸಿದ ಕೆಲಸಗಳಿಗಾಗಿ ಮಿಲಿಟರಿ ಶಾಂತಿ ಪಾಲಕರಿಗೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಮೇಜರ್ ಬರಾಕ್ ಅವರು ಲೆಬನಾನ್ ನಲ್ಲಿನಿಯೋಜನೆಗೊಂಡಿದ್ದ ಅವಧಿಯಲ್ಲಿಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ವಿವಿಧ ಸಾಮಾಜಿಕ ಸಂಪರ್ಕ ಮತ್ತು ಜಾಗೃತಿ ಚಟುವಟಿಕೆಗಳ ನೇತೃತ್ವ ವಹಿಸಿದ್ದರು. ಇದರೊಂದಿಗೆ, ಅವರು ಕಾರ್ಯಾಚರಣೆಯ ಪ್ರದೇಶದಲ್ಲಿದ್ದ ಸಹ ಶಾಂತಿ ಪಾಲಕರಿಗೆ ಲಿಂಗ ಸಂವೇದನಾ ತರಬೇತಿಯನ್ನು ಸಹ ನೀಡಿದ್ದಾರೆ.
ಫೊಟೊ: ಅಭಿಲಾಷಾ

