ಆಹಾರ ಸಂಸ್ಕೃತಿ

Contributed byShridevi Ambekallu|Vijaya Karnataka

ಅಕ್ಕಿ ಹಿಟ್ಟಿನಿಂದ ತಯಾರಿಸಿದ ಶಾವಿಗೆಯಿಂದ ರುಚಿಕರವಾದ ಬೆಳಗಿನ ಉಪಾಹಾರ ಸಿದ್ಧಪಡಿಸಬಹುದು. ಒತ್ತು ಶಾವಿಗೆ ಚಿತ್ರಾನ್ನ, ಸಿಹಿ ಶಾವಿಗೆ ಮತ್ತು ಶಾವಿಗೆ ಪುಳಿಯೋಗರೆ ಮಾಡುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ. ಈ ಸರಳ ವಿಧಾನಗಳಿಂದ ಮನೆಯಲ್ಲಿಯೇ ಸುಲಭವಾಗಿ ಶಾವಿಗೆಯ ವಿವಿಧ ಖಾದ್ಯಗಳನ್ನು ತಯಾರಿಸಿ ಸವಿಯಬಹುದು. ಅಕ್ಕಿ, ಬೆಲ್ಲ, ತೆಂಗಿನ ತುರಿ ಮತ್ತು ಪುಳಿಯೋಗರೆ ಗೊಜ್ಜು ಬಳಸಿ ರುಚಿಕರ ಅಡುಗೆ ತಯಾರಿಸಿ.

recipes for rice flour dishes

ಸಾಂಪ್ರದಾಯಿಕ ತಿನಿಸು ಶಾವಿಗೆ

-------------

ಅಕ್ಕಿ ಹಿಟ್ಟನ್ನು ಹದವಾಗಿ ಬೇಯಿಸಿ, ಅದರಿಂದಮೃದುವಾಗಿ ಶಾವಿಗೆ ತಯಾರಿಸಬಹುದು. ಆ ಶಾವಿಗೆಯಿಂದ ಬೆಳಗಿನ ಉಪಾಹಾರಕ್ಕೆ ವಿವಿಧ ಬಗೆಯ ತಿನಿಸುಗಳನ್ನು ಮಾಡಬಹುದು. ಅವುಗಳ ವಿಧಾನ ಇಲ್ಲಿದೆ.

---------

*ಸುಧಾ ಪ್ರಭಾಕರ್

--------

ಒತ್ತು ಶಾವಿಗೆ ಚಿತ್ರಾನ್ನ

ಬೇಕಾಗುವ ಸಾಮಗ್ರಿ: ಅಕ್ಕಿ ಒಂದು ಕೆಜಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ನೆರಳಿನಲ್ಲಿಒಣಗಿಸಿ ಹಿಟ್ಟು ಮಾಡಿಸಿ. ಬಿಸಿ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಆ ನೀರಿಗೆ ಅಕ್ಕಿ ಹಿಟ್ಟು ಹಾಕಿ, ಸಣ್ಣ ಉರಿಯಲ್ಲಿಗಂಟಾಗದಂತೆ ಕದಡುತ್ತಿರಿ. ಬೆಂದ ಹಿಟ್ಟನ್ನು ಉಂಡೆ ಮಾಡಿಕೊಂಡು ಇಡ್ಲಿಪಾತ್ರೆಯಲ್ಲಿ20 ನಿಮಿಷ ಬೇಯಿಸಿ. ಚಕ್ಕುಲಿ ಒರಳಿನಲ್ಲಿ ಉಂಡೆಯನ್ನು ಹಾಕಿ ಶಾವಿಗೆ ಮಾಡಿ. ಆ ಶಾವಿಗೆಯನ್ನು ಚಿತ್ರಾನ್ನದಂತೆ ಒಗ್ಗರಣೆ ಹಾಕಿ ಅದರೊಂದಿಗೆ ಮಿಶ್ರಣ ಮಾಡಿ.

-----------------

ಸಿಹಿ ಶಾವಿಗೆ

ಬೇಕಾಗುವ ಸಾಮಗ್ರಿ: ಅಕ್ಕಿ ಒಂದು ಕೆಜಿ, ಬೆಲ್ಲದ ಪುಡಿ ಒಂದು ಕಪ್ , ತೆಂಗಿನ ತುರಿ 1ಕಪ್ .

ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ನೆರಳಿನಲ್ಲಿಒಣಗಿಸಿ ಹಿಟ್ಟು ಮಾಡಿಸಿ. ಬಿಸಿ ನೀರಿಗೆ ಅಕ್ಕಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿಗಂಟಾಗದಂತೆ ಕದಡುತ್ತಿರಿ. ಬೆಂದ ಹಿಟ್ಟನ್ನು ಉಂಡೆ ಮಾಡಿಕೊಂಡು ಇಡ್ಲಿಪಾತ್ರೆಯಲ್ಲಿ20 ನಿಮಿಷ ಬೇಯಿಸಿ. ಚಕ್ಕುಲಿ ಒರಳಿನಲ್ಲಿಉಂಡೆಯನ್ನು ಹಾಕಿ ಶಾವಿಗೆ ಮಾಡಿ. ಅದಕ್ಕೆ ಾಯಿ ತುರಿ, ಬೆಲ್ಲದ ಪುಡಿ ಹಾಕಿ ಮಿಶ್ರಣ ಮಾಡಿದರೆ ಸಿಹಿ ಶಾವಿಗೆ ಸವಿಯಲು ರೆಡಿ.

-----

ಶಾವಿಗೆ ಪುಳಿಯೋಗರೆ

ಬೇಕಾಗುವ ಸಾಮಗ್ರಿ: ಅಕ್ಕಿ 1ಕೆಜಿ, ಉಪ್ಪು ರುಚಿಗೆ ತಕ್ಕಷ್ಟು, ಪುಳಿಯೋಗರೆ ಗೊಜ್ಜು/ಅಥವಾ ಹುಡಿ.

ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ನೆರಳಿನಲ್ಲಿಒಣಗಿಸಿ ಹಿಟ್ಟು ಮಾಡಿಸಿ. ಬಿಸಿ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಆ ನೀರಿಗೆ ಅಕ್ಕಿ ಹಿಟ್ಟು ಹಾಕಿ, ಸಣ್ಣ ಉರಿಯಲ್ಲಿಗಂಟಾಗದಂತೆ ಕದಡುತ್ತಿರಿ. ಬೆಂದ ಹಿಟ್ಟನ್ನು ಉಂಡೆ ಮಾಡಿಕೊಂಡು ಇಡ್ಲಿಪಾತ್ರೆಯಲ್ಲಿ20 ನಿಮಿಷ ಬೇಯಿಸಿ. ಚಕ್ಕುಲಿ ಒರಳಿನಲ್ಲಿ ಉಂಡೆಯನ್ನು ಹಾಕಿ ಶಾವಿಗೆ ಮಾಡಿ. ಆ ಶಾವಿಗೆಗೆ ಪುಳಿಯೋಗರೆ ಗೊಜ್ಜು ಅಥವಾ ಪುಡಿ ಹಾಕಿ ಒಂದು ಚಮಚ ಬಿಸಿಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ.