ಏಜೆಂಟಿಕ್ ಎಐ
ಸ್ಲಗ್ : ಟೆಕ್ ನಾಲೆಜ್
ಇಂಟ್ರೋ
ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಇಂದು ಜಗತ್ತನ್ನು ವೇಗವಾಗಿ ಬದಲಾಯಿಸುತ್ತಿದೆ. ನಾವು ಪ್ರತಿದಿನ ಬಳಸುವ ಚಾಟ್ ಬಾಟ್ ಗಳು, ಇಮೇಜ್ ಕ್ರಿಯೇಟರ್ ಗಳು ನಮ್ಮ ಕೆಲಸವನ್ನು ಸುಲಭಗೊಳಿಸುತ್ತಿವೆ. ಆದರೆ ತಂತ್ರಜ್ಞಾನದ ಜಗತ್ತು ಇಲ್ಲಿಗೇ ನಿಂತಿಲ್ಲ. ಈಗ ಎಐ ಕ್ಷೇತ್ರದಲ್ಲಿ‘ಏಜೆಂಟಿಕ್ ಎಐ’ ಆರಂಭವಾಗಿದೆ. ಇದು ಕೇವಲ ಮಾಹಿತಿಯನ್ನು ನೀಡುವ ಸಾಧನವಾಗಿ ಉಳಿಯದೆ, ಮನುಷ್ಯನಂತೆ ಸ್ವತಂತ್ರವಾಗಿ ಯೋಚಿಸಿ ಕೆಲಸ ಮಾಡುವ ಶಕ್ತಿಯನ್ನು ಹೊಂದಿದೆ. ಈ ಹೊಸ ತಂತ್ರಜ್ಞಾನದ ಸ್ವರೂಪ ಮತ್ತು ಇದು ನಾವು ಬಳಸುವ ಸಾಮಾನ್ಯ ಎಐ ಪರಿಕರಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಇಲ್ಲಿವಿವರವಾಗಿ ತಿಳಿಯೋಣ.
ಏಜೆಂಟಿಕ್ ಎಐ ಎನ್ನುವುದು ಕೃತಕ ಬುದ್ಧಿಮತ್ತೆಯ ಮುಂದಿನ ಹಂತ. ಸರಳವಾಗಿ ಹೇಳುವುದಾದರೆ, ನಿರ್ದಿಷ್ಟ ಗುರಿಯನ್ನು ತಲುಪಲು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ, ಯೋಜನೆಗಳನ್ನು ರೂಪಿಸುವ ಮತ್ತು ಯಾವುದೇ ಮನುಷ್ಯನ ನಿರಂತರ ಮೇಲ್ವಿಚಾರಣೆ ಇಲ್ಲದೆ ಕೆಲಸವನ್ನು ಪೂರ್ಣಗೊಳಿಸುವ ಸ್ವಾಯತ್ತ ವ್ಯವಸ್ಥೆಯನ್ನು ಏಜೆಂಟಿಕ್ ಎಐ ಎನ್ನಲಾಗುತ್ತದೆ.
ಸಾಮಾನ್ಯ ಎಐ ಉಪಕರಣಗಳಿಗೆ ನಾವು ಪ್ರತಿ ಹಂತದಲ್ಲೂಕಮಾಂಡ್ ಅಥವಾ ಪ್ರಾಂ±್ಟ… ನೀಡಬೇಕಾಗುತ್ತದೆ. ಆದರೆ ಏಜೆಂಟಿಕ್ ಎಐಗೆ ಒಂದು ಅಂತಿಮ ಗುರಿಯನ್ನು ನೀಡಿದರೆ ಸಾಕು, ಅದು ತನ್ನದೇ ಆದ ಬುದ್ಧಿವಂತಿಕೆಯನ್ನು ಬಳಸಿ ಆ ಗುರಿಯನ್ನು ತಲುಪಲು ಬೇಕಾದ ಸಣ್ಣ ಸಣ್ಣ ಹಂತಗಳನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ. ಉದಾಹರಣೆಗೆ, ‘ನನಗೆ ಮುಂದಿನ ವಾರ ದಿಲ್ಲಿಗೆ ಹೋಗಲು ವಿಮಾನ ಟಿಕೆಟ್ ಮತ್ತು ಹೋಟೆಲ್ ಬುಕ್ ಮಾಡು‘ ಎಂದು ಹೇಳಿದರೆ, ಅದು ನಿಮ್ಮ ಬಜೆಟ್ , ನಿಮ್ಮ ಹಳೆಯ ಇಷ್ಟಗಳು ಮತ್ತು ಲಭ್ಯತೆಯನ್ನು ಪರಿಶೀಲಿಸಿ, ತಾನೇ ವೆಬ್ ಸೈಟ್ ಗಳಿಗೆ ಭೇಟಿ ನೀಡಿ, ನಿರ್ಧಾರಗಳನ್ನು ತೆಗೆದುಕೊಂಡು ಬುಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ.
ಈ ವ್ಯವಸ್ಥೆಯು ಮುಖ್ಯವಾಗಿ ನಾಲ್ಕು ಸೂತ್ರಗಳ ಆಧಾರದ ಮೇಲೆ ಕೆಲಸ ಮಾಡುತ್ತದೆ: ಗ್ರಹಿಕೆ ಘ್ಕಿ(Pಛ್ಟ್ಚಿಛಿpಠಿಜಿಟ್ಞ - ಸುತ್ತಲಿನ ಪರಿಸರ ಅಥವಾ ದತ್ತಾಂಶವನ್ನು ಅರ್ಥಮಾಡಿಕೊಳ್ಳುವುದು), ವಿವೇಚನೆ (್ಕಛಿasಟ್ಞಜ್ಞಿಜ - ಸಮಸ್ಯೆಗಳನ್ನು ವಿಶ್ಲೇಷಿಸಿ ಯೋಜನೆ ರೂಪಿಸುವುದು), ಕ್ರಿಯೆ (ಅ್ಚಠಿಜಿಟ್ಞ - ಸಾಫ್ಟ್ ವೇರ್ ಅಥವಾ ಎಪಿಐ ಬಳಸಿ ಕೆಲಸ ಮುಗಿಸುವುದು) ಮತ್ತು ಕಲಿಕೆ (ಔಛಿa್ಟ್ಞಜ್ಞಿಜ - ಮಾಡಿದ ಕೆಲಸದಿಂದ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಬಾರಿ ಇನ್ನು ಉತ್ತಮವಾಗಿ ಕಾರ್ಯನಿರ್ವಹಿಸುವುದು). ಇದು ಕೇವಲ ಮಾಹಿತಿಯನ್ನು ಜ್ಞಾನವಾಗಿ ಬದಲಿಸುವುದಿಲ್ಲ, ಬದಲಿಗೆ ಆ ಜ್ಞಾನವನ್ನು ನೇರವಾದ ಕ್ರಿಯೆಯಾಗಿ ಪರಿವರ್ತಿಸುತ್ತದೆ.
ಒಂದು ಉದಾಹರಣೆಯ ಮೂಲಕ ಇವೆರಡರ ವ್ಯತ್ಯಾಸವನ್ನು ಇನ್ನು ಸರಳವಾಗಿ ಅರ್ಥಮಾಡಿಕೊಳ್ಳಬಹುದು. ಒಬ್ಬ ಉದ್ಯೋಗಿ ತನ್ನ ಗ್ರಾಹಕರಿಗೆ ಇಮೇಲ್ ಕಳುಹಿಸಬೇಕಾಗಿದೆ ಎಂದುಕೊಳ್ಳೋಣ.
ಸಾಮಾನ್ಯ ಎಐ (ಉದಾಹರಣೆಗೆ ಇhaಠಿಎPT) ಬಳಸುವಾಗ, ಉದ್ಯೋಗಿಯು ‘ನನ್ನ ಗ್ರಾಹಕರಿಗೆ ಒಂದು ವೃತ್ತಿಪರ ಇಮೇಲ್ ಬರೆದುಕೊಡು’ ಎಂದು ಪ್ರಾಂ±್ಟ… ನೀಡಬೇಕು. ಎಐ ತಕ್ಷಣವೇ ಇಮೇಲ್ ಬರೆದುಕೊಡುತ್ತದೆ. ಆದರೆ ಆ ಇಮೇಲ್ ಅನ್ನು ಕಾಪಿ ಮಾಡಿ, ಮೇಲ್ ಐಡಿ ಹುಡುಕಿ, ಇಮೇಲ್ ಬಾಕ್ಸ್ ಗೆ ಪೇÜ್ಟ… ಮಾಡಿ ‘ಸೆಂಡ್ ’ ಬಟನ್ ಒತ್ತಬೇಕಾದ್ದು ಮನುಷ್ಯನೇ. ಇಲ್ಲಿಎಐ ಕೇವಲ ಒಂದು ಸಹಾಯಕ ಅಷ್ಟೆ.
ಇದೇ ಕೆಲಸವನ್ನು ಏಜೆಂಟಿಕ್ ಎಐ ವ್ಯವಸ್ಥೆಗೆ ವಹಿಸಿದರೆ, ಅದಕ್ಕೆ ‘ಯಾವ ಗ್ರಾಹಕರು ಬಾಕಿ ಹಣ ಪಾವತಿಸಬೇಕಿದೆಯೋ, ಅವರಿಗೆ ನೆನಪೋಲೆ ಇಮೇಲ್ ಕಳುಹಿಸು‘ ಎಂಬ ಒಂದೇ ಒಂದು ನಿಯಮವನ್ನು ಸೆಟ್ ಮಾಡಿದರೆ ಸಾಕು. ಏಜೆಂಟಿಕ್ ಎಐ ಸ್ವತಂತ್ರವಾಗಿ ಕಂಪನಿಯ ಡೇಟಾಬೇಸ್ ಪರಿಶೀಲಿಸುತ್ತದೆ, ಬಾಕಿ ಇರುವ ಗ್ರಾಹಕರ ಪಟ್ಟಿಯನ್ನು ಸಿದ್ಧಪಡಿಸುತ್ತದೆ, ಅವರಿಗೆ ಸೂಕ್ತವಾದ ಇಮೇಲ್ ಅನ್ನು ತಾನೇ ಸಿದ್ಧಪಡಿಸಿ, ಅವರ ಇಮೇಲ್ ವಿಳಾಸಕ್ಕೆ ನೇರವಾಗಿ ಕಳುಹಿಸಿಬಿಡುತ್ತದೆ. ಅಷ್ಟೇ ಅಲ್ಲದೆ, ಇಮೇಲ್ ಕಳುಹಿಸಿದ ನಂತರ ಕಂಪನಿಯ ರೆಕಾರ್ಡ್ ನಲ್ಲಿ‘ಇಮೇಲ್ ಕಳುಹಿಸಲಾಗಿದೆ’ ಎಂದು ತಾನೇ ಅಪ್ಡೇಟ್ ಮಾಡುತ್ತದೆ.
ಏಜೆಂಟಿಕ್ ಎಐ ಕೇವಲ ಕಂಟೆಂಟ್ ಸೃಷ್ಟಿಸುವುದಿಲ್ಲ, ಬದಲಿಗೆ ಅಂತಿಮ ಫಲಿತಾಂಶವನ್ನು ತಂದುಕೊಡುತ್ತದೆ. ಉದ್ಯಮ ರಂಗದಲ್ಲಿ, ಬ್ಯಾಂಕಿಂಗ್ ವಲಯದಲ್ಲಿವಂಚನೆ ಪತ್ತೆಹಚ್ಚಲು, ಗ್ರಾಹಕ ಸೇವೆಗಳನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸಲು ಮತ್ತು ಸಾಫ್ಟ್ ವೇರ್ ಕೋಡಿಂಗ್ ನಲ್ಲಿತಪ್ಪುಗಳನ್ನು ತಾನೇ ಪತ್ತೆಹಚ್ಚಿ ಸರಿಪಡಿಸಲು ಈ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ತಂತ್ರಜ್ಞಾನದ ಮೂರನೇ ಅಲೆಯಾಗಿ ಮೂಡಿಬಂದಿರುವ ಏಜೆಂಟಿಕ್ ಎಐ, ಭವಿಷ್ಯದಲ್ಲಿಮನುಷ್ಯರ ಕೆಲಸದ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುವುದರಲ್ಲಿಯಾವುದೇ ಸಂಶಯವಿಲ್ಲ.

