ಸಮಾಜದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ

Contributed byprakashbabbur@gmail.com|Vijaya Karnataka

ಹಿರಿಯೂರಿನಲ್ಲಿ ಜಿಲ್ಲಾ ಗೊಲ್ಲಯಾದವ ಸಂಘದ ಚುನಾವಣೆ ಯಶಸ್ವಿಯಾಗಿ ನಡೆದಿದೆ. ನೂತನ ನಿರ್ದೇಶಕರು ಸಮಾಜದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಸಂಘದಲ್ಲಿನ ಲೋಪಗಳನ್ನು ಸರಿಪಡಿಸಿ, ಸಮಾಜದ ಏಳಿಗೆಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಸಹಕರಿಸುವ ಭರವಸೆ ನೀಡಿದ್ದಾರೆ. ಮುಖಂಡರನ್ನು ಸನ್ಮಾನಿಸಲಾಯಿತು.

priority for childrens education trustworthiness of district gollayada association

ಸಮಾಜದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ

ವಿಕ ಸುದ್ದಿಲೋಕ ಹಿರಿಯೂರು

ದೇ ಮೊದಲ ಬಾರಿ ಜಿಲ್ಲಾಗೊಲ್ಲಯಾದವ ಸಂಘದ ಚುನಾವಣೆ ನಡೆದಿದ್ದು, ಸಂಘದಲ್ಲಿರುವರೆಗೆ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಲು ಆದ್ಯತೆ ನೀಡಲಾಗುವುದು ಎಂದು ಸಂಘದ ನಿರ್ದೇಶಕ ಮಂಗುಸುವಳ್ಳಿ ಪ್ರಕಾಶ್ ಹೇಳಿದರು.

ನಗರದ ವೇದಾವತಿ ಬಡಾವಣೆಯ ಶ್ರೀಕೃಷ್ಣ ದೇವಸ್ಥಾನ ಆವರಣದಲ್ಲಿಶನಿವಾರ ತಾಲೂಕು ಯಾದವ ಗೊಲ್ಲಹಾಗೂ ನೌಕರರ ಸಂಘಗಳ ನೇತೃತ್ವದಲ್ಲಿಜಿಲ್ಲಾಸಂಘದ ಚುನಾವಣೆಯಲ್ಲಿವಿಜೇತರಾದ ಹಾಗೂ ಯಶಸ್ವಿಗೆ ಸಹಕರಿಸಿದ ಮುಖಂಡರಿಗೆ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿಮಾತನಾಡಿದರು.

ತಾಲೂಕು ಗೊಲ್ಲಯಾದವ ಸಂಘದ ಅಧ್ಯಕ್ಷ ಆರ್ .ರಂಗಸ್ವಾಮಿ ಮಾತನಾಡಿ, ಜಿಲ್ಲಾಸಂಘದಲ್ಲಿಇದುವರೆಗೆ ನಡೆದಿರುವ ಅವ್ಯವಹಾರಗಳನ್ನು ಹೊರತೆಗೆದು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಕ್ರಮ ವಹಿಸಬೇಕು. ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿಮೂಲ ಸೌಕರ್ಯ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಪುರಸಭೆ ಮಾಜಿ ಸದಸ್ಯ ಬಿ.ಕೆ.ಕರಿಯಪ್ಪ ಮಾತನಾಡಿ, ಜಿಲ್ಲಾಯಾದವ ಸಂಘದ ನೂತನ ನಿರ್ದೇಶಕರು ಜಿಲ್ಲೆಯಲ್ಲಿಸಮಾಜದ ಏಳಿಗೆಗೆ ಶ್ರಮಿಸಬೇಕು. ಮುಂಬರುವ ಎಲ್ಲಚುನಾವಣೆಗಳಲ್ಲಿಸಮಾಜವನ್ನು ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.

ನೂತನ ನಿರ್ದೇಶಕರಾದ ಬಿ.ಡಿ.ಬಸವರಾಜು, ಆಕರ್ಷ ಯಾದವ, ಗೊಲ್ಲಹಳ್ಳಿ ಪರಮೇಶ್ , ಅಶೋಕ್ , ವೀರೇಶ್ , ಚಿತ್ತಪ್ಪ, ರೇವಣಸಿದ್ದಪ್ಪ, ತಾಲೂಕು ಯಾದವ ಗೊಲ್ಲನೌಕರ ಸಂಘದ ಅಧ್ಯಕ್ಷ ಎಚ್ .ತಿಪ್ಪೇಸ್ವಾಮಿ, ನಗರಸಭೆ ಮಾಜಿ ಸದಸ್ಯ ವಿ.ಶಿವಣ್ಣ, ಚಿತ್ರಜಿತ್ ಯಾದವ, ಶಿವಾನಂದ ಮಾಸ್ಟರ್ ಮಾತನಾಡಿದರು. ಮುಖಂಡರಾದ ಎ.ಜಿ.ತಿಮ್ಮಯ್ಯ, ಮದನಕುಂಟೆ ನಾಗಪ್ಪ, ರಂಗನಾಥ್ , ಬಂಗಾರಪ್ಪ, ಬೆನಕನಹಳ್ಳಿ ಶಿವಮೂರ್ತಿ, ನಿತ್ಯಾನಂದ ಯಾದವ, ನಿರಂಜನ್ , ಡಾಬಾ ಚಿಕ್ಕಣ್ಣ, ಕೊನಿಕೆರೆ ರಾಮಣ್ಣ ಇತರರಿದ್ದರು.

--

23 ಪಿಎಚ್ ವೈಆರ್ 1

ಹಿರಿಯೂರಿನ ಶ್ರೀಕೃಷ್ಣ ದೇವಸ್ಥಾನ ಆವರಣದಲ್ಲಿಶನಿವಾರ ನಡೆದ ಸಮಾರಂಭದಲ್ಲಿಜಿಲ್ಲಾಗೊಲ್ಲಯಾದವ ಸಂಘದ ನೂತನ ನಿರ್ದೇಶಕರು ಹಾಗೂ ಯಶಸ್ವಿಗೆ ಸಹಕರಿಸಿದ ಮುಖಂಡರನ್ನು ಸನ್ಮಾನಿಸಲಾಯಿತು.